ಆರ್‌ಸಿಬಿ ಐಪಿಎಲ್ ಗೆದ್ದರೆ ಐತಿಹಾಸಿಕ ಕ್ಷಣವಾಗಲಿದೆ. ಬೆಂಗಳೂರಿನಲ್ಲಿ ಭವ್ಯ ಸಂಭ್ರಮ, ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬ, ವಿರಾಟ್ ಕೊಹ್ಲಿಗೆ ಭಾವನಾತ್ಮಕ ಕ್ಷಣ. ಮರ್ಚಂಡೈಸ್ ಮಾರಾಟ ಏರಿಕೆ, ಮಾಧ್ಯಮಗಳ ಭರಾಟೆ, ಅಭಿಮಾನಿಗಳ ಸಂಭ್ರಮ ಕಣ್ಣಿಗೆ ಕಟ್ಟುವಂತೆ ಇರುತ್ತದೆ.
2018ರಿಂದ RCB ( ರಾಯಲ್ ಚಾಲೆಂಜರ್ಸ್ ಬೆಂಗಳೂರು) ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಬಾರಿಯಾದರೂ ಅಂತಿಮವಾಗಿ IPL ಟ್ರೋಫಿಯನ್ನು ಗೆದ್ದರೆ ಏನಾಗಬಹುದು?
IPL ನಲ್ಲಿ ಐತಿಹಾಸಿಕ ಕ್ಷಣ
RCB ತಂಡವು IPL ಗೆಲ್ಲುವುದು ಒಂದು ಮಹತ್ವದ ಕ್ಷಣವಾಗಲಿದೆ. ಇದು ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದು. ಆದರೆ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. RCB ಅಭಿಮಾನಿಗಳು 2008ರಿಂದ ಟ್ರೋಫಿ ಗೆಲ್ಲಲು ಕಾಯುತ್ತಿದ್ದಾರೆ.
ಅಭಿಮಾನಿಗಳ ಸಂಭ್ರಮಾಚರಣೆ
ಬೆಂಗಳೂರಿನ ರಸ್ತೆಗಳಾದ ವಿಶೇಷವಾಗಿ MG ರಸ್ತೆ, ಬ್ರಿಗೇಡ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತವಂತೂ ದೊಡ್ಡ ಸಂಭ್ರಮಾಚರಣೆ ಆಗಲಿದೆ. ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ನೋಡಲಾದರೂ ಒಮ್ಮೆ ಆರ್‌ಸಿಬಿ ಟ್ರೋಫಿ ಗೆಲ್ಲಬೇಕು. ಭಾರತ ಹಾಗೂ ವಿದೇಶಗಳಲ್ಲಿ ಕೂಡ ಅಭಿಮಾನಿಗಳು #RCBChampion, #EeSalaCupNamde ಇತ್ಯಾದಿ ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬ ಮಾಡ್ತಾರೆ.
ವಿರಾಟ್ ಕೊಹ್ಲಿಯ ಭಾವನಾತ್ಮಕ ಕ್ಷಣ
ಹದಿನೆಂಟು ವರ್ಷದಿಂದ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿದ್ದಾರೆ. ಈ ಟೀಂ ಹಾಗೂ ಅಭಿಮಾನಿಗಳ ಬಗ್ಗೆ ಅವರಿಗೆ ಒಂದು ನಂಟಿದೆ, ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ. ಎಲ್ಲೇ ಹೋದರೂ ಅವರು ಈ ಬಗ್ಗೆ ಮಾತನಾಡುತ್ತಾರೆ. ಒಂದುವೇಳೆ ಅವರು ಟೀಂನಲ್ಲಿದ್ದಾಗಲೇ ಆರ್‌ಸಿಬಿ ಗೆದ್ದರೆ, ಅವರ ವೃತ್ತಿಜೀವನದ ಭಾವನಾತ್ಮಕ ಮತ್ತು ಐಕಾನಿಕ್ ಕ್ಷಣವಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ
ಒಮ್ಮೊಮ್ಮೆ ಬೆಂಗಳೂರಿನಲ್ಲಿಯೇ ಆರ್‌ಸಿಬಿ ಮ್ಯಾಚ್ ಗೆಲ್ಲೋದಿಲ್ಲ ಎಂಬ ಅಪವಾದ ಕೇಳಿ ಬರುತ್ತಲಿರುತ್ತದೆ. ಬೆಂಗಳೂರಿನಲ್ಲಿ ಈ ಬಾರಿ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಎರಡು ಬಾರಿ ಗೆದ್ದಿದೆ. ಇನ್ನು ಟ್ರೋಫಿ ಗೆದ್ದರೆ ಬೆಂಗಳೂರಿನಲ್ಲಿ ಭವ್ಯ ವಿಜಯೋತ್ಸವದ ಮೆರವಣಿಗೆ ಆಗುವುದು. ಕರ್ನಾಟಕ ಸರ್ಕಾರ ಮತ್ತು BCCI ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
ಮರ್ಚಂಡೈಸ್ ಮತ್ತು ಆರ್ಥಿಕ ಪರಿಣಾಮ
RCB ಮರ್ಚಂಡೈಸ್ ಮಾರಾಟ ಗಗನಕ್ಕೇರುತ್ತದೆ. ಭವಿಷ್ಯದ ಸೀಸನ್‌ಗಳಿಗೆ RCB ಯ ಸ್ಪಾನ್ಸರ್‌ಶಿಪ್ ಮೌಲ್ಯ ಗಣನೀಯವಾಗಿ ಹೆಚ್ಚಾಗುತ್ತದೆ.
ಮಾಧ್ಯಮಗಳ ಭರಾಟೆ
ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು, ಕ್ರಿಕೆಟ್ ಶೋಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು RCB ಯ ಪ್ರಯಾಣ ಮತ್ತು ಕಂಬ್ಯಾಕ್ ಕಥೆಯ ಮೇಲೆ ಗಮನ ಹರಿಸುತ್ತಾರೆ. "ಈ ಸಲ ಕಪ್ ನಮ್ದೆ" ಕನಸು ನನಸಾದ ಬಗ್ಗೆ ವಿಷಯ ಪ್ರಸಾರ ಆಗುತ್ತವೆ.
ಭಾವನಾತ್ಮಕ ಅಭಿಮಾನಿಗಳ ಪ್ರತಿಕ್ರಿಯೆಗಳು
15 ವರ್ಷಗಳಿಗೂ ಹೆಚ್ಚು ಕಾಲ ತಂಡದೊಂದಿಗೆ ನಿಷ್ಠೆಯಿಂದ ಇದ್ದ RCB ಯ ಅಭಿಮಾನಿಗಳು ಕಣ್ಣೀರು ಹಾಕುತ್ತಾರೆ, ಸಂತೋಷದಿಂದ ಉಕ್ಕಿ ಹರಿಯುತ್ತಾರೆ, ಅನೇಕರು ಇದನ್ನು ಹಬ್ಬದಂತೆ ಆಚರಿಸ್ತಾರೆ, ಎಷ್ಟು ದೇವಸ್ಥಾನಗಳಲ್ಲಿ ಹರಕೆ ತೀರಿಸ್ತಾರೋ ಏನೋ! ಆರ್‌ಸಿಬಿ ಗೆಲ್ಲೋದಿಲ್ಲ ಎಂದು ಬೀಗುತ್ತಿದ್ದವರ ಮುಂದೆ ಫ್ಯಾನ್ಸ್ ಸಖತ್ ಟಾಂಗ್ ಕೊಡಬಹುದು.
ಆರ್‌ಸಿಬಿ ಈ ಬಾರಿ ಪ್ಲೇಆಫ್‌ಗೆ ಹೋಗುವ ತಯಾರಿಯಲ್ಲಿದೆ. ಸದ್ಯ ಹದಿನಾರು ಪಾಯಿಂಟ್‌ಗಳಾಗಿದೆ. ರಜತ್ ಪಾಟೀದಾರ್ ಅವರು ಈ ಬಾರಿ ಆರ್‌ಸಿಬಿ ಟೀಂ ನಾಯಕರಾಗಿದ್ದಾರೆ.
ತಂಡದಲ್ಲಿ ಇರುವವರು
- ವಿರಾಟ್ ಕೊಹ್ಲಿ (ಬ್ಯಾಟರ್) - ₹21 ಕೋಟಿ
- ರಜತ್ ಪಾಟಿದಾರ್ (ಬ್ಯಾಟರ್) - ₹11 ಕೋಟಿ
- ಯಶ್ ದಯಾಳ್ (ಬೌಲರ್) - ₹5 ಕೋಟಿ
- ಜೋಶ್ ಹ್ಯಾಜಲ್‌ವುಡ್ (ಬೌಲರ್) - ₹12.50 ಕೋಟಿ
- ಫಿಲ್ ಸಾಲ್ಟ್ (ವಿಕೆಟ್ ಕೀಪರ್/ಬ್ಯಾಟರ್) - ₹11.50 ಕೋಟಿ
- ಜಿತೇಶ್ ಶರ್ಮಾ (ವಿಕೆಟ್ ಕೀಪರ್/ಬ್ಯಾಟರ್) - ₹11 ಕೋಟಿ
- ಭುವನೇಶ್ವರ್ ಕುಮಾರ್ (ಬೌಲರ್) - ₹10.75 ಕೋಟಿ
- ಲಿಯಾಮ್ ಲಿವಿಂಗ್‌ಸ್ಟೋನ್ (ಬ್ಯಾಟಿಂಗ್ ಆಲ್-ರೌಂಡರ್)
- ಕೃನಾಲ್ ಪಾಂಡ್ಯ (ಬೌಲಿಂಗ್ ಆಲ್-ರೌಂಡರ್)
- ಟಿಮ್ ಡೇವಿಡ್ (ಬ್ಯಾಟರ್)
- ದೇವದತ್ ಪಡಿಕ್ಕಲ್
- ಸುಯೇಶ್ ಶರ್ಮಾ


