ಬಿಹಾರ ಅತ್ಯಧಿಕ ಯುವ ಸಮುದಾಯವನ್ನು ಒಳಗೊಂಡಿರುವ ರಾಜ್ಯವಾಗಿದೆ. ಹಾಗಾಗಿ ಉದ್ಯೋಗ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಬಿಹಾರ ಹಿಂದುಳಿದಿದೆ ಎಂದು ತೇಜಸ್ವಿ ಯಾದವ್ ಹೇಳುತ್ಥಾರೆ.

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election 2025) ತಮ್ಮ ಪಕ್ಷದ ಸೋಲಿನ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ (RJD's Tejashwi Yadaw) ಮಾತನಾಡಿದ್ದಾರೆ. ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ದಾಖಲಿಸಿದೆ. ಆದ್ರೆ ಪ್ರಜಾಪ್ರಭುತ್ವ ಸೋತಿದೆ ಎಂದು ಫಲಿತಾಂಶವನ್ನು ತೇಜಸ್ವಿ ಯಾದವ್ ವಿಶ್ಲೇಷಣೆ ಮಾಡಿದ್ದಾರೆ. ಬಿಹಾರದಲ್ಲಿ ಡಬಲ್ ಎಂಜಿನ್ (Dobule Engine Government) ಸರ್ಕಾರವಿದ್ರೂ ಈವರೆಗೆ ಒಂದು ಸಕ್ಕರೆ ಕಾರ್ಖಾನೆಯನ್ನು ಸಹ ಆರಂಭಿಸಿಲ್ಲ. ನಿರುದ್ಯೋಗ ಅತ್ಯಂತ ಪ್ರಮುಖ ವಿಷಯವಾಗಿದ್ದು, ಸರ್ಕಾರದ (Nitish Kumar Govt) ವಿರುದ್ದ ಜನತೆಗೆ ಆಕ್ರೋಶವಿತ್ತು. ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಬೆಂಬಲಿತ ಸರ್ಕಾರ ಬರಬಾರದು ಎಂದು ಆಸೆಪಟ್ಟಿದ್ದರು.

ಚುನಾವಣೆ ಬರ್ತಿದ್ದಂತೆ ಪಿಂಚಣಿ ಮೊತ್ತ ಹೆಚ್ಚಳ

ಶಿಕ್ಷಣ, ಉದ್ಯೋಗ, ವೈದ್ಯಕೀಯ ಸೌಲಭ್ಯ, ನೀರಾವರಿ ಸೇರಿದಂತೆ ತಮ್ಮ ಕಷ್ಟಗಳನ್ನು ಕೇಳುವ ಸರ್ಕಾರಕ್ಕಾಗಿ ಬಿಹಾರದ ಜನರು ಕಾಯುತ್ತಿದ್ದರು. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಸೋತಿದ್ದು, ಮಷೀನ್‌ಗಳಿಗೆ ಗೆಲುವು ಸಿಕ್ಕಿದೆ. ನಮ್ಮ ಪ್ರಣಾಳಿಕೆ ಮತ್ತು ಕನಸಿನ ಎಲ್ಲಾ ಯೋಜನೆಗಳನ್ನು ಚುನಾವಣೆಗೂ ಮೊದಲೇ ಸರ್ಕಾರ ಜಾರಿಗೆ ತಂದಿತ್ತು. 20 ವರ್ಷಗಳಿಂದ ಪಿಂಚಣಿ ಹೆಚ್ಚಿಸಬೇಕು ಅಂತ ಇವರಿಗೆ ಅನ್ನಿಸಿರಲಿಲ್ಲ. ಚುನಾವಣೆ ಬರುತ್ತಿದ್ದಂತೆ 400 ರೂ.ಗಳಷ್ಟು ಪಿಂಚಣಿ ಹೆಚ್ಚಳ ಮಾಡಲಾಯ್ತು. ನಮ್ಮ ಸರ್ಕಾರ ಬಂದ್ಮೇಲೆ ಪಿಂಚಣಿ ಹೆಚ್ಚಿಸುವ ಭರವಸೆ ನೀಡಿದ್ದೇವು. ಅದನ್ನು ಸರ್ಕಾರ ಜಾರಿಗೆ ತಂದಿತು ಎಂದರು.

ಸುಮಾರು 40 ಸಾವಿರ ಕೋಟಿ ರೂ. ಹಂಚಿಕೆ

ಕಪಿಲ್ ಸಿಬಲ್ ಜೊತೆಗಿನ ಸಂದರ್ಶನದಲ್ಲಿ 2020ರ ವೇಳೆ ಆರ್‌ಜೆಡಿ 75 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದ್ರೆ 2025ರಲ್ಲಿ ಕೇವಲ 25 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಕಾರಣ ಏನು ಎಂದು ಕೇಳಲಾಯ್ತು. ಈ ಸಂಖ್ಯೆಯನ್ನು ಯಾರಿಗೂ ಒಪ್ಪಿಕೊಳ್ಳುತ್ತಿಲ್ಲ ಆಗುತ್ತಿಲ್ಲ. ಆರ್‌ಜೆಡಿ ಸಂಖ್ಯೆಯನ್ನು ನೋಡಿ ಜನರು ಸಹ ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ/ಜೆಡಿಯ ಅಥವಾ ಅಧಿಕಾರದಲ್ಲಿದ ಜನಪ್ರತಿನಿಧಿಗಳಿಗೆ ಗೆಲುವಿನ ಬಗ್ಗೆ ವಿಶ್ವಾಸ ಹೊಂದಿರಲಿಲ್ಲ. ಚುನಾವಣೆ ನೀತಿ ಸಂಹಿತೆಯ ನಂತ್ರ ಅಂದ್ರೆ ಮತದಾನಕ್ಕೂ 10 ದಿನ ಮೊದಲೇ ಜನರಿಗೆ 10 ಸಾವಿರ ರೂ. ಹಂಚಿಕೆ ಮಾಡಲಾಯ್ತು. ಬೇರೆ ಬೇರೆ ಯೋಜನೆಗಳ ಮೂಲಕ ಸುಮಾರು 40 ಸಾವಿರ ಕೋಟಿ ರೂ. ಹಣವನ್ನು ಬಿಹಾರದ ಜನತೆಗೆ ನೇರವಾಗಿ ಹಂಚಿಕೆ ಮಾಡಲಾಯ್ತು. ನೀವು ಇದನ್ನು ಲಂಚ ಅಂತಾನೂ ಕರೆಯಬಹುದು ಎಂದು ತೇಜಸ್ವಿ ಯಾದವ್ ಹೇಳುತ್ತಾರೆ.

ಬಿಹಾರ ಹಿಂದುಳಿಯಲು ಕಾರಣ ಏನು?

ಬಿಹಾರದ ದೇಶದ ಬಡ ರಾಜ್ಯವಾಗಿದ್ದು, ಇಲ್ಲಿ ಯಾವುದೇ ಉದ್ಯೋಗಗಳಿಲ್ಲ, ಕಾರ್ಖಾನೆಗಳು ಸಹ ನಮ್ಮಲ್ಲಿಲ್ಲ. ಅತ್ಯಧಿಕ ನಿರುದ್ಯೋಗ ಮತ್ತು ವಲಸೆ ಪ್ರಮಾಣ ಹೆಚ್ಚಿದೆ. ಇನ್ನು ಶಿಕ್ಷಣ ಮತ್ತು ವೈದ್ಯಕೀಯ ವಿಷಯ ಬಗ್ಗೆ ಮಾತನಾಡಿದ್ರೆ ಅದರಲ್ಲಿಯೂ ಬಿಹಾರ ಹಿಂದುಳಿದೆ. ಆದ್ರೆ ಬಿಹಾರ ಅತ್ಯಧಿಕ ಯುವ ಸಮುದಾಯವನ್ನು ಒಳಗೊಂಡಿರುವ ರಾಜ್ಯವಾಗಿದೆ. ಹಾಗಾಗಿ ಉದ್ಯೋಗ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಬಿಹಾರ ಹಿಂದುಳಿದಿದೆ ಎಂದು ತೇಜಸ್ವಿ ಯಾದವ್ ಹೇಳುತ್ಥಾರೆ.

ಬಿಜೆಪಿ-ಜೆಡಿಯು ವಿರುದ್ಧ ವಾಗ್ದಾಳಿ

ಕಳೆದ 20 ವರ್ಷಗಳಿಂದ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಆಡಳಿತದಲ್ಲಿದೆ. ಇತ್ತ 10-11 ವರ್ಷಗಳಿಂದ ಮೋದಿಯವರು ಪ್ರಧಾನಿಗಳಾಗಿದ್ದಾರೆ. ಮಾತ್ತೆತ್ತಿದ್ರೆ ಡಬಲ್ ಇಂಜಿನ್ ಸರ್ಕಾರ ಅಂತ ಹೇಳುತ್ತಾರೆ. ಆದ್ರೆ ಒಂದು ಸಕ್ಕರೆ ಕಾರ್ಖಾನೆಯನ್ನು ಸಹ ಆರಂಭಿಸಲು ಇವರಿಂದ ಸಾಧ್ಯವಾಗಿಲ್ಲ ಎಂದು ಬಿಜೆಪಿ-ಜೆಡಿಯು ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದರು.