ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭಾಗಿಯಾಗಿದ್ದ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಅವರು ಈಗಲೂ ಒಳ್ಳೆಯ ಸ್ನೇಹ ಕಾಪಾಡಿಕೊಂಡಿದ್ದಾರೆ. ಇತ್ತೀಚೆಗೆ ನಮ್ರತಾ ಜೊತೆಗೆ ಕಾರ್ತಿಕ್ ಕೂಡ ವಿದೇಶಕ್ಕೆ ಹೋಗಿದ್ದರು ಎನ್ನಲಾಗಿರುವ ಗಾಸಿಪ್‌ಗೆ ಕಾರ್ತಿಕ್ ಹೇಳಿದ್ದೇನು?
ಇತ್ತೀಚೆಗೆ ‘ಪುಟ್ಟಗೌರಿ ಮದುವೆ’ ಧಾರಾವಾಹಿ, ನಾಗಿಣಿ ಧಾರಾವಾಹಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಖ್ಯಾತಿಯ ನಮ್ರತಾ ಗೌಡ ಅವರು ಇತ್ತೀಚೆಗೆ ವಿದೇಶಕ್ಕೆ ಹೋಗಿದ್ದರು. ಆ ವೇಳೆ ಕಾರ್ತಿಕ್ ಮಹೇಶ್ ಕೂಡ ಇದ್ದರು ಎಂಬ ಚರ್ಚೆ ಆಗಿದೆ.
ಅದು ಕಾರ್ತಿಕ್ ಅವರೇನಾ?
ನಮ್ರತಾ ಗೌಡ ಅವರು ಆಗಾಗ ಟ್ರಿಪ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ವಿದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಭೇಟಿ ನೀಡಿರುವ ಸ್ಥಳಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಂಡಿದ್ದರು. ಆ ವೇಳೆ ಅವರು ಒಬ್ಬರ ಕೈ ಹಿಡಿದುಕೊಂಡು ತಿರುಗಿದ್ದಾರೆ. ಆ ಕೈಗೆ ಹಾಕಿಕೊಂಡ ಬ್ಲ್ಯಾಕ್ ಬಾಂಡ್ ಹಾಗೂ ಕಾರ್ತಿಕ್ ಮಹೇಶ್ ಹಾಕಿಕೊಂಡ ಬ್ಯಾಂಡ್ ಎರಡೂ ಸೇಮ್ ಇದೆ.
ಬಿಗ್ ಬಾಸ್ ಶೋನಲ್ಲಿ ಭಾಗಿ
ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಅವರು ಒಂದೇ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರ ಮಧ್ಯೆ ಮನಸ್ತಾಪ ಆಗಿತ್ತು. ಆದರೆ ಹೊರಗಡೆ ಬಂದ್ಮೇಲೆ ಈ ಜೋಡಿ ಒಳ್ಳೆಯ ಸ್ನೇಹವನ್ನು ಕಾಪಾಡಿಕೊಂಡಿದೆ. ನಮ್ರತಾ ಮನೆಯ ಕಾರ್ಯಕ್ರಮಕ್ಕೆ ಕಾರ್ತಿಕ್ ಮಹೇಶ್ ಕುಟುಂಬ, ಕಾರ್ತಿಕ್ ಮನೆಯ ಕಾರ್ಯಕ್ರಮಕ್ಕೆ ನಮ್ರತಾ ಗೌಡ ಬಂದಿದ್ದುಂಟು.
ವಿಶೇಷವಾಗಿ ಜನ್ಮದಿನದ ಆಚರಣೆ
ಅಂದಹಾಗೆ ಕಾರ್ತಿಕ್ ಹುಟ್ಟುಹಬ್ಬಕ್ಕೆ ನಮ್ರತಾ ಅವರು ವಿಶೇಷವಾಗಿ ವಿಶ್ ಮಾಡಿದ್ದರು. ನಮ್ರತಾ ಜನ್ಮದಿನಕ್ಕೆ ಕಾರ್ತಿಕ್ ಕೂಡ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಹೀಗಾಗಿ ಇವರು ಲವ್‌ನಲ್ಲಿದ್ದಾರಾ ಎಂಬ ಪ್ರಶ್ನೆ ಬಂದಿತ್ತು.
ಕಾರ್ತಿಕ್ ನೀಡಿದ ಸ್ಪಷ್ಟನೆ ಏನು?
ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಕಾರ್ತಿಕ್ ಮಹೇಶ್ ಅವರು, “ಇಲ್ಲ, ಏನಾದರೂ ಇದ್ದಾಗ ನಾವು ಹೇಳುತ್ತೀವಿ. ನಾನು ಕೈಗೆ ಬ್ಯಾಂಡ್ ಹಾಕಿಕೊಂಡಿಲ್ಲ. ಈ ರೀತಿ ಜೋಡಿ ಮಾಡಿದ್ದನ್ನು ನಾನು, ನಮ್ರತಾ ಚರ್ಚೆ ಮಾಡಿಕೊಂಡು ನಕ್ಕಿದ್ದೇವೆ. ಅಭಿಮಾನಿಗಳು ಪೋಸ್ಟ್ ಹಾಕಿದಾಗ ಖುಷಿ ಆಗುತ್ತದೆ, ಈ ರೀತಿ ಬೇರೆಯವರ ಜೊತೆ ಕೂಡ ಫೋಟೋ ಹಾಕಿದ್ದಾರೆ. ಏನಾದರೂ ಇದ್ದರೆ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ಬ್ಯುಸಿ
ಅಂದಹಾಗೆ ನಮ್ರತಾ ಗೌಡ ಅವರು ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಾರ್ತಿಕ್ ಮಹೇಶ್ ಅವರು ಸಿನಿಮಾಗಳತ್ತ ಮುಖ ಮಾಡಿದ್ದು, ‘ರಾಮರಸ’ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ರಿಯಲ್ ಆಗಿ ಲವ್ ಮಾಡುತ್ತಿದೆಯೇ ಇಲ್ಲವೇ ಎನ್ನೋದು ಗೊತ್ತಾಗುವುದು.

