Numerology: ಮೊಬೈಲ್ ನಂಬರ್‌ನಲ್ಲಿ 88: ಇದು ಶುಭವೋ? ಅಶುಭವೋ?
ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಮೊಬೈಲ್ ನಂಬರ್ ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದ್ರಲ್ಲೂ ಕೆಲವು ಅಂಕಿಗಳ ಸಂಯೋಜನೆ ಅಶುಭವೆಂದು ಹೇಳಲಾಗುತ್ತದೆ. 88ರ ಸಂಯೋಜನೆ ಬಗ್ಗೆ ತಿಳಿಯೋಣ.
astrology Feb 09 2026
Author: Naveen Kodase Image Credits:Getty
Kannada
ಮೊಬೈಲ್ ನಂಬರ್ ಮೇಲೆ ಸಂಖ್ಯಾಶಾಸ್ತ್ರದ ಪ್ರಭಾವ
ಸಂಖ್ಯಾಶಾಸ್ತ್ರವು ಭವಿಷ್ಯ ತಿಳಿಯುವ ಒಂದು ಪ್ರಾಚೀನ ವಿಧಾನ. ಇದರಲ್ಲಿ ಕೆಲವು ಅಂಕಿಗಳ ಜೋಡಣೆಯನ್ನು ಶುಭ ಅಂದ್ರೆ, ಇನ್ನು ಕೆಲವನ್ನು ಅಶುಭ ಅಂತ ಪರಿಗಣಿಸಲಾಗುತ್ತೆ. ಅಂತಹ ಒಂದು ಅಶುಭ ಸಂಯೋಜನೆಯ ಬಗ್ಗೆ ಮುಂದೆ ತಿಳಿಯಿರಿ
Image credits: Getty
Kannada
88ರ ಜೋಡಿ ಶುಭವೋ, ಅಶುಭವೋ?
ಸಂಖ್ಯಾಶಾಸ್ತ್ರದ ಪ್ರಕಾರ, ಯಾರದ್ದೇ ಮೊಬೈಲ್ ನಂಬರ್‌ನಲ್ಲಿ 88ರ ಸಂಯೋಜನೆ ಇದ್ದರೆ, ಅಂದ್ರೆ ಸತತವಾಗಿ ಎರಡು ಬಾರಿ 8 ಬಂದರೆ, ಅದನ್ನು ಅಶುಭವೆಂದು ಪರಿಗಣಿಸಬೇಕು. ಇಂಥವರ ಜೀವನದಲ್ಲಿ ಸದಾ ಏರಿಳಿತಗಳು ಇರುತ್ತವೆ.
Image credits: Getty
Kannada
8ನೇ ಸಂಖ್ಯೆ ಯಾವ ಗ್ರಹಕ್ಕೆ ಸೇರಿದ್ದು?
ಸಂಖ್ಯಾಶಾಸ್ತ್ರದ ಪ್ರಕಾರ, 8ನೇ ಸಂಖ್ಯೆ ಶನಿದೇವನಿಗೆ ಸಂಬಂಧಿಸಿದ್ದು. ಯಾರ ಮೊಬೈಲ್ ನಂಬರ್‌ನಲ್ಲಿ 88ರ ಸಂಯೋಜನೆ ಇರುತ್ತದೆಯೋ, ಅಂತಹ ಜನರ ಮೇಲೆ ಶನಿಯ ಪ್ರಭಾವ ಹೆಚ್ಚಾಗಿ ಕಂಡುಬಂದಿದೆ.
Image credits: Getty
Kannada
88 ಅಂದ್ರೆ ಶನಿಯ ಡಬಲ್ ಹೊಡೆತ
ಯಾರ ಮೊಬೈಲ್ ನಂಬರ್‌ನಲ್ಲಿ 88 ಇರುತ್ತದೋ, ಅವರು ಶನಿಯ ಡಬಲ್ ಹೊಡೆತವನ್ನು ಎದುರಿಸಬೇಕಾಗುತ್ತದೆ. ಅಂದರೆ, ಅವರ ಜೀವನದಲ್ಲಿ ಸಾಮಾನ್ಯರಿಗಿಂತ ಎರಡು ಪಟ್ಟು ಹೆಚ್ಚು ಸಮಸ್ಯೆಗಳಿರುತ್ತವೆ.
Image credits: Getty
Kannada
88 ನಂಬರ್ ಇದ್ದರೆ ಖಿನ್ನತೆ ಕಾಡಬಹುದು
ಸಂಖ್ಯಾಶಾಸ್ತ್ರದ ಪ್ರಕಾರ, ಮೊಬೈಲ್ ನಂಬರ್‌ನಲ್ಲಿ 88ರ ಸಂಯೋಜನೆ ವ್ಯಕ್ತಿಯನ್ನು ಸಾಲದ ಸುಳಿಗೆ ಸಿಲುಕಿಸಬಹುದು ಅಥವಾ ಅನಾರೋಗ್ಯದಿಂದ ಬಳಲುವಂತೆ ಮಾಡಬಹುದು. ಇಂಥವರು ಖಿನ್ನತೆಗೂ ಒಳಗಾಗುವ ಸಾಧ್ಯತೆ ಇರುತ್ತದೆ.
Image credits: Getty
Kannada
ಮೊಬೈಲ್ ನಂಬರ್ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಸಂಖ್ಯಾಶಾಸ್ತ್ರದ ಪ್ರಕಾರ, ಮೊಬೈಲ್ ನಂಬರ್ ನಿಮ್ಮ ಹೆಸರಿನೊಂದಿಗೆ ಸಂಪರ್ಕ ಹೊಂದಿರುತ್ತದೆ. ಹೀಗಾಗಿ ಆ ಅಂಕಿಗಳು ನಿಮ್ಮ ಜೀವನದ ಮೇಲೆ ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ.