ಪತಿ ಸಿದ್ಧಾರ್ಥ್ ಹುಟ್ಟುಹಬ್ಬಕ್ಕೆ ಅದಿತಿ ರಾವ್ ಹೈದರಿ ಪ್ರೀತಿಯ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ಪೆಷಲ್ ಫೋಟೋಗಳಿಗೆ ವಿಶೇಷ ಶೀರ್ಷಿಕೆ ನೀಡಿದ್ದು, ಇಬ್ಬರ ಕೆಮೆಸ್ಟ್ರಿ ಎದ್ದು ಕಾಣುತ್ತಿದೆ.
cine-world Apr 18 2026
Author: Pavna Das Image Credits:Instagram
Kannada
ಸಿದ್ದಾರ್ಥ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್
ನಟಿ ಅದಿತಿ ರಾವ್ ಹೈದರಿ ತಮ್ಮ ಪತಿ ಸಿದ್ಧಾರ್ಥ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಅನ್ ಸೀನ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ,
Image credits: Instagram
Kannada
ಮನಗೆದ್ದ ಜೋಡಿ
ಇದು ಅವರ ಕೆಮಿಸ್ಟ್ರಿ ಮತ್ತು ಪ್ರೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಚಿತ್ರಗಳ ಜೊತೆಗೆ, ಅಭಿಮಾನಿಗಳ ಹೃದಯ ಗೆದ್ದ ಹೃದಯಸ್ಪರ್ಶಿ ಶೀರ್ಷಿಕೆಯನ್ನು ಸಹ ಅದಿತಿ ಬರೆದಿದ್ದಾರೆ.
Image credits: Instagram
Kannada
ಕ್ಯಾಪ್ಶನ್ ಹೀಗಿದೆ
ಸೂರ್ಯನನ್ನು ಅಂಗೈಯಲ್ಲಿ ಹಿಡಿದು ಅದರ ಬೆಳಕನ್ನು ನನ್ನ ಮೇಲೆ ಹರಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ! ನೀವು, ನಿಮ್ಮ ಕನಸುಗಳು ಮತ್ತು ನಮ್ಮಿಬ್ಬರಿಗೂ ಶಕ್ತಿ ಮತ್ತು ಸಂತೋಷವನ್ನ ಹಾರೈಸುತ್ತೇನೆ.
Image credits: Instagram
Kannada
ಅಭಿಮಾನಿಗಳಿಂಡ ಶುಭ ಹಾರೈಕೆ
ಅದಿತಿ ಈ ಪೋಸ್ಟ್ಗೆ ಜನ ಪ್ರತಿಕ್ರಿಯಿಸಿ. ಸಿದ್ಧಾರ್ಥ್ ಗೆ ವಿಶ್ ಮಾಡಿ, ಯಾವಾಗಲೂ ಸಂತೋಷವಾಗಿರಿ' ಎಂದು ಹಾರಿಸಿದರೆ, ಇನ್ನೂ ಕೆಲವರು 'ಅದಿತಿ ಮತ್ತು ಸಿದ್ಧಾರ್ಥ್ ಜೋಡಿ ಸೂಪರ್ ಹಿಟ್ ಎಂದಿದ್ದಾರೆ.
Image credits: Instagram
Kannada
ಮದುವೆ ಆಗಿದ್ದು ಯಾವಾಗ?
ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಸೆಪ್ಟೆಂಬರ್ 16, 2024 ರಂದು ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷ ಹಳೆಯ ದೇವಾಲಯದಲ್ಲಿ ವಿವಾಹವಾದರು.
Image credits: Instagram
Kannada
ಲವ್ ಶುರುವಾಗಿದ್ದು ಹೀಗೆ
"ಮಹಾ ಸಮುದ್ರಂ" ಚಿತ್ರದ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದ ನಂತರ, ಇಬ್ಬರೂ ಸುಮಾರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದರು.
Image credits: Instagram
Kannada
ಮದುವೆಯನ್ನು ರಹಸ್ಯವಾಗಿಟ್ಟಿದ್ದ ಜೋಡಿ
ಅವರು ತಮ್ಮ ಮದುವೆಯನ್ನು ರಹಸ್ಯವಾಗಿಟ್ಟಿದ್ದು, ಮದುವೆ ನಂತರ ಫೋಟೊ ಶೇರ್ ಮಾಡಿ ಶಾಕ್ ನೀಡಿದ್ದರು. ಅದಿತಿ ರಾವ್ ಹೈದರಿ ತಮ್ಮ ಅದ್ಭುತ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
Image credits: Instagram
Kannada
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಅದಿತಿ ರಾವ್ ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಸ್ಪೆಷಲ್ ಫೋಟೊಗಳನ್ನು ನಟಿ ಶೇರ್ ಮಾಡುತ್ತಿರುತ್ತಾರೆ. ಅವರ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ.