ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ‘ದೇವದಾಸ್’ ಅದ್ಭುತವಾದ ಕಥೆ, ನಟರು ಹಾಗೂ ನಟನೆ, ವೈಭವದಿಂದಾಗಿ ಜನಮನ ಗೆದ್ದಿತ್ತು.
cine-world Feb 17 2026
Author: Pavna Das Image Credits:Instagram
Kannada
ಸ್ಟಾರ್ ನಟರು
ಈ ಚಿತ್ರದಲ್ಲಿ ಶಾರುಖ್ ಖಾನ್, ಐಶ್ವರ್ಯ ರೈ, ಮಾಧುರಿ ದಿಕ್ಷೀತ್, ಜಾಕಿ ಶ್ರಾಫ್, ಕಿರಣ್ ಖೇರ್, ಸುಮಿತಾ ಜೈಕರ್ ಸೇರಿ ದೊಡ್ಡ ತಾರಗಣವೇ ಇತ್ತು. ಈ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ ನಿಮಗಾಗಿ.
Image credits: Instagram
Kannada
ಡೋಲಾರೆ ಡೋಲಾರೆ ಹಾಡು
‘ದೇವದಾಸ್’ ಚಿತ್ರದ ಸೂಪರ್ ಹಿಟ್ ಹಾಡು ಡೋಲಾರೆ ಡೋಲಾರೆ ಶೂಟಿಂಗ್ ಮುಗಿಸಲು ಬರೋಬ್ಬರಿ 16 ದಿನ ತೆಗೆದುಕೊಳ್ಳಲಾಗಿತ್ತು ಅನ್ನೋದು ನಿಮಗೆ ಗೊತ್ತಾ?
Image credits: Instagram
Kannada
ಐಶ್ವರ್ಯ ರೈ ಕಿವಿಯಲ್ಲಿ ರಕ್ತ
ಈ ಹಾಡಿನ ಶೂಟಿಂಗ್ ಸಮಯದಲ್ಲಿ ಹೆವಿಯಾಗಿರುವ ಕಿವಿಯೋಲೆ ಧರಿಸಿದುದರಿಂದ ಐಶ್ವರ್ಯ ರೈ ಕಿವಿ ಹರಿದು ರಕ್ತ ಸೋರುತ್ತಿದ್ದರೂ, ನಟಿ ಅದನ್ನು ಲೆಕ್ಕಿಸದೇ ಡ್ಯಾನ್ಸ್ ಮಾಡಿದ್ದರು.
Image credits: Instagram
Kannada
ಸರೋಜ್ ಖಾನ್
ಈ ಹಾಡಿನ ಕೊರಿಯೋಗ್ರಫಿ ಎಷ್ಟೊಂದು ಜನಪ್ರಿಯತೆ ಪಡೆಯಿತೆಂದರೆ, ಇದಕ್ಕಾಗಿ ಕೊರಿಯೋಗ್ರಾಫರ್ ಸರೋಜ್ ಖಾನ್ ಅವರಿಗೆ 17 ಪ್ರಶಸ್ತಿಗಳು ಲಭಿಸಿತ್ತು.
Image credits: Instagram
Kannada
ರಾಷ್ಟ್ರಪ್ರಶಸ್ತಿ ಪಡೆದ ಸರೋಜ್
ಅಷ್ಟೇ ಅಲ್ಲ ಸರೋಜ್ ಖಾನ್ ಈ ಅದ್ಭುತ ಹಾಡಿನ ಕೊರಿಯೋಗ್ರಫಿಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದರು.
Image credits: Instagram
Kannada
ಬೆಸ್ಟ್ ಡ್ಯಾನ್ಸ್ ನಂಬರ್
ಡೋಲಾರೆ ಡೋಲಾರೆ ಹಾಡು ಬಾಲಿವುಡ್ ನ ಎಲ್ಲಾ ಕಾಲಕ್ಕೂ ಸಲ್ಲುವ ಬೆಸ್ಟ್ ಡ್ಯಾನ್ಸ್ ನಂಬರ್ ಆಗಿ ಹೊರ ಹೊಮ್ಮಿದೆ.
Image credits: Instagram
Kannada
ಸ್ಟಾರ್ ನಟಿಯರ ಡ್ಯಾನ್ಸ್
ಈ ಹಾಡು ಜನಪ್ರಿಯತೆ ಪಡೆಯಲು ಮುಖ್ಯ ಕಾರಣ ಸ್ಟಾರ್ ನಟಿಯರಾದ ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್ ಈ ಹಾಡಿಗೆ ಹೆಜ್ಜೆ ಹಾಕಿರುವುದು.