ಜೀವನ ಚೆನ್ನಾಗಿರಬೇಕು ಅಂದ್ರೆ, ಆರ್ಥಿಕ ಬೆಂಬಲ ಬೇಕೇ ಬೇಕು. ಪತಿ ಹೇಗೆ ಪತ್ನಿಗೆ ಆರ್ಥಿಕ ಬೆಂಬಲವಾಗಿ ನಿಲ್ಲುತ್ತಾರೋ, ಹಾಗೆಯೇ ಪತ್ನಿ ಸಹ ಪತಿಗೆ ಆರ್ಥಿಕ ಬೆಂಬಲ ನೀಡೋದ್ರಲ್ಲಿ ತಪ್ಪಿಲ್ಲ.
cine-world Feb 12 2026
Author: Pavna Das Image Credits:Instagram
Kannada
ತಾರೆಯರು ಈ ಬಗ್ಗೆ ಏನು ಹೇಳುತ್ತಾರೆ?
ಬಾಲಿವುಡ್ ನ ತಾರೆಯರಲ್ಲಿ ಹಲವರು, ತಾವು ಕಷ್ಟದಲ್ಲಿದ್ದಾಗ, ಹೇಗೆ ತಮ್ಮ ಪತ್ನಿ ಆರ್ಥಿಕವಾಗಿ ನೆರವು ನೀಡಿ, ಬೆನ್ನೆಲುಬಾಗಿ ನಿಂತಿದ್ದರು ಅನ್ನೋದನ್ನು ಹೇಳಿದ್ದಾರೆ. ಏನ್ ಹೇಳಿದ್ದಾರೆ ನೋಡೋಣ.
Image credits: Gemini
Kannada
ಪಂಕಜ್ ಉದಾಸ್
ನನ್ನ ಕಷ್ಟದ ಸಮಯದಲ್ಲಿ ಫರೀದಾ ನನಗೆ ಆರ್ಥಿಕವಾಗಿ ನೆರವು ನೀಡಿದರು. ಆಕೆಯ ಸ್ವತಂತ್ರ್ಯ ಯೋಚನೆಯನ್ನು ನಾನು ಮೆಚ್ಚುತ್ತೇನೆ ಎಂದಿದ್ದಾರೆ ಪಂಕಜ್ ಉದಾಸ್.
Image credits: Instagram
Kannada
ಮನೀಶ್ ಪೌಲ್
ಒಂದು ಕಾಲದಲ್ಲಿ ನನ್ನ ಬಳಿ ಮನೆಯ ಬಾಡಿಗೆ ಕಟ್ಟೋದಕ್ಕೂ ಹಣ ಇರಲಿಲ್ಲ. ಆ ಸಂದರ್ಭದಲ್ಲಿ ಪತ್ನಿ ಸಂಯುಕ್ತಾ ನನ್ನ ಬೆನ್ನೆಲುಬಾಗಿ ನಿಂತು ಎಲ್ಲವನ್ನೂ ನಿಭಾಯಿಸಿದಳು ಎನ್ನುತ್ತಾರೆ ಮನೀಶ್ ಪೌಲ್.
Image credits: Instagram
Kannada
ಅರ್ಜುನ್ ಬಿಜಲಾನಿ
ಹಿಂದೆ ನಾನು ಕಷ್ಟದಲ್ಲಿದ್ದಾಗ ನನ್ನ ಮೊಬೈಲ್ ಬಿಲ್ ಪತ್ನಿ ಕಟ್ಟಿದ್ದಳು. ಆಕೆ ನನ್ನ ಶಕ್ತಿ ಎಂದಿದ್ದಾರೆ ನಟ ಅರ್ಜುನ್ ಬಿಜಲಾನಿ.
Image credits: Instagram
Kannada
ರಾಮ್ ಕಪೂರ್
ಮದುವೆಯಾದ ಮೊದಲನೇ ವರ್ಷದಲ್ಲಿ ರಾಮ್ ಕಪೂರ್ ಬಳಿ ಕೆಲಸ ಇಲ್ಲದಿದ್ದಾಗ, ಅವರು ತಮ್ಮ ಪತ್ನಿ ಗೌತಮಿಯ ಸಂಬಳದಲ್ಲಿ ಜೀವನ ಮಾಡುತ್ತಿದ್ದರಂತೆ.
Image credits: Instagram
Kannada
ಅನಿಲ್ ಕಪೂರ್
ಸಿನಿಮಾಗೆ ಕಾಲಿಟ್ಟ ಆರಂಭದ ದಿನಗಳಲ್ಲಿ, ಅನಿಲ್ ಕಪೂರ್ ಬಳಿ ಕೈತುಂಬಾ ಹಣ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಪತ್ನಿ ಸುನೀತಾ ಎಲ್ಲಾ ಬಿಲ್ ಗಳನ್ನು ಪಾವತಿಸುತ್ತಿದ್ದರಂತೆ.