ಜೂನ್ ಮೊದಲ ವಾರ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದೆ. ಜೂ.20ರ ಬಳಿಕ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ. ಆಗಸ್ಟ್ ಮೊದಲ ವಾರ ತವರಿಗೆ ವಾಪಸ್.
cricket-sports May 10 2025
Author: Naveen Kodase Image Credits:ANI
Kannada
ಆಗಸ್ಟ್‌ನಲ್ಲಿ ಬಾಂಗ್ಲಾ ಎದುರು ಸೀಮಿತ ಓವರ್‌ಗಳ ಸರಣಿ
ಆಗಸ್ಟ್ 17ರಿಂದ 31 ರವರೆಗೆ ಬಾಂಗ್ಲಾದಲ್ಲಿ ಟಿ20, ಏಕದಿನ ಸರಣಿಯಲ್ಲಿ ಭಾರತ ಪಾಲ್ಗೊಳ್ಳಬೇಕಿದೆ.
Image credits: ANI
Kannada
ಹಂಡ್ರೆಡ್ ಲೀಗ್
ಐಪಿಎಲ್‌ಗಾಗಿ ಬಾಂಗ್ಲಾ ಸರಣಿ ಭಾರತ ರದ್ದುಗೊಳಿಸಿದರೂ, ಅದೇ ಸಮಯಕ್ಕೆ(ಆ.5ರಿಂದ 31) ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್ ನಡೆಯಲಿದೆ.
Image credits: ANI
Kannada
ಐಪಿಎಲ್-ದಿ ಹಂಡ್ರೆಡ್ ಲೀಗ್
ಐಪಿಎಲ್‌ನ ಬಹುತೇಕ ಆಟಗಾರರು ದಿ ಹಂಡ್ರೆಡ್‌ನಲ್ಲಿ ಆಡಲಿದ್ದಾರೆ. ಹೀಗಾಗಿ ಆ ಸಮಯದಲ್ಲೂ ಐಪಿಎಲ್ ಅಸಾಧ್ಯ.
Image credits: Twitter
Kannada
ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಸರಣಿ
ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಸರಣಿ ನಿಗದಿಯಾಗಿದೆ. ಈ 2 ತಂಡಗಳ ಆಟಗಾರರೂ ಐಪಿಎಲ್‌ಗೆ ಲಭ್ಯವಿರುವುದಿಲ್ಲ.
Image credits: Getty
Kannada
ಕೆರಿಬಿಯನ್ ಪ್ರೀಮಿಯರ್ ಲೀಗ್
ಆಗಸ್ಟ್ 15ರಿಂದ ಸೆ.22ರ ವರೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಇದೆ. ವಿಂಡೀಸ್‌ನ ಪ್ರಮುಖ ಆಟಗಾರರು ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡಲಿದ್ದಾರೆ.
Image credits: ANI
Kannada
ಏಷ್ಯಾಕಪ್
ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌ಗಾಗಿ ಬಿಡುವು ಇದೆ. ಏಷ್ಯಾಕಪ್‌ನ ರದ್ದುಗೊಳಿಸಿ, ಅದೇ ಸಮಯದಲ್ಲಿ ಐಪಿಎಲ್ ನಡೆಸುವ ಆಯ್ಕೆ ಮಾತ್ರ ಬಿಸಿಸಿಐಗಿದೆ.
Image credits: twitter
Kannada
ಬಿಸಿಸಿಐ ಮೇಲೆ ಕಣ್ಣು
ಆದರೆ, ಸೆ.2-14ರವರೆಗೆ ಇಂಗ್ಲೆಂಡ್-ದ.ಆಫ್ರಿಕಾ ಸರಣಿ ನಡೆಯಲಿದೆ. ಬೇರೆ ಬಿಡುವಿಲ್ಲದ ಕಾರಣ, ಆ 2 ದೇಶದ ಮಂಡಳಿಗಳ ಮನವೊಲಿಸಿ ಅಲ್ಲಿನ ಕೆಲ ಆಟಗಾರರನ್ನು ಬಿಸಿಸಿಐ ಐಪಿಎಲ್‌ಗೆ ಕರೆತರಬಹುದು.
Image credits: twitter
Kannada
ಡಿಸೆಂಬರ್ ಡೆಡ್ ಲೈನ್
ಸೆಪ್ಟೆಂಬರ್‌ನಲ್ಲೂ ಐಪಿಎಲ್ ಸಾಧ್ಯವಾಗದಿದ್ದರೆ ಬಳಿಕ ಡಿಸೆಂಬರ್‌ವರೆಗೂ ಕಾಯಬೇಕು.