Kannada

ಕೆಕೆಆರ್ ರೋಚಕ ಜಯ

ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಒಂದು ರನ್ ರೋಚಕ ಜಯ ಸಾಧಿಸಿದೆ.

Kannada

ಕೆಕೆಆರ್‌ ಪ್ಲೇ ಆಫ್ ಕನಸು ಜೀವಂತ

ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇ ಆಫ್‌ ಕನಸು ಜೀವಂತವಾಗಿದೆ. ಆದರೆ ಇದೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.

Image credits: ANI
Kannada

6 ಎಸೆತಕ್ಕೆ 6 ಸಿಕ್ಸರ್ ಚಚ್ಚಿದ ಪರಾಗ್

ಮೋಯಿನ್ ಅಲಿ ಅವರ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದ ಪರಾಗ್, ಮರು ಓವರ್‌ನಲ್ಲಿ ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ಸತತ 6 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ.

Image credits: ANI
Kannada

ಪೋಲಿ ಸರ್ಚ್ ಪರಾಗ್

ಇನ್ನು 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ರಿಯಾನ್ ಪರಾಗ್ ಯೂಟ್ಯೂಬ್‌ನಲ್ಲಿ ಪೋಲಿ ಸರ್ಚ್ ಮಾಡಿ ಸಿಕ್ಕಿಬಿದ್ದಿದ್ದರು.

Image credits: Insta/riyanhparag
Kannada

ಪರಾಗ್ ಮಾಡಿದ ಯಡವಟ್ಟು

ರಿಯಾನ್ ಪರಾಗ್ ಯೂಟ್ಯೂಬ್ ಸ್ಟ್ರೀಮ್‌ ಮಾಡುವ ಸಲುವಾಗಿ ಅವರು ಯೂಟ್ಯೂಬ್‌ನಲ್ಲಿ ಕಾಪಿರೈಟ್‌ ಇರದೇ ಇದ್ದ ಮ್ಯೂಸಿಕ್‌ಅನ್ನು ಹುಡುಕಲು ಹೋಗಿದ್ದರು. 

Image credits: Insta/riyanhparag
Kannada

ವಿವಾದಕ್ಕೆ ಕಾರಣವಾದ ಯೂಟ್ಯೂಬ್ ಸರ್ಚ್

ಯೂಟ್ಯೂಬ್‌ನಲ್ಲಿ ಇದನ್ನು ಸರ್ಚ್‌ ಮಾಡಲು ಸರ್ಚ್‌ ಬಾರ್‌ನಲ್ಲಿ ಕರ್ಸರ್‌ ಇಟ್ಟಾಗ ಅವರು ಈ ಹಿಂದೆ ಸರ್ಚ್‌ ಮಾಡಿದ ಎಲ್ಲಾ ವಿಷಯಗಳು ಕಾಣಿಸಿಕೊಂಡವು. 

Image credits: Freepik
Kannada

ಪರಾಗ್ ಯೂಟ್ಯೂಬ್ ಸರ್ಚ್

ಇದರಲ್ಲಿ 'ಅನನ್ಯಾ ಪಾಂಡೆ ಹಾಟ್‌..' (ananya pandey Hot) ಮತ್ತು 'ಸಾರಾ ಅಲಿ ಖಾನ್‌ ಹಾಟ್‌..' (sara ali khan Hot) ಅನ್ನೋ ಸರ್ಚ್‌ ಕೂಡ ಮಾಡಿರುವುದು ಬೆಳಕಿಗೆ ಬಂದಿತ್ತು.

Image credits: ANI
Kannada

ಒಳ್ಳೆಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ

ಒಟ್ಟಿನಲ್ಲಿ ಇಷ್ಟು ಸಮಯ ಟ್ರೋಲ್ ಹಾಗೂ ಬೇಡದ ಕಾರಣಗಳಿಗೆ ಸುದ್ದಿಯಾಗುತ್ತಿದ್ದ ಪರಾಗ್ ಇದೀಗ ಒಂದೊಳ್ಳೆಯ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ.
 

Image credits: Insta/riyanhparag

6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚಿದ ರಿಯಾನ್ ಪರಾಗ್ ಒಟ್ಟು ಆಸ್ತಿ ಇಷ್ಟೊಂದಾ?

ಐಪಿಎಲ್‌ನಲ್ಲಿ 99 ರನ್‌ಗಳಿಗೆ ಔಟಾದ 5 ಬ್ಯಾಟ್ಸ್‌ಮನ್‌ಗಳು; ಕೊಹ್ಲಿ ನಂ-1

ಸಾರಾ ತೆಂಡೂಲ್ಕರ್ ಟ್ರಾವೆಲ್ ಮಾಡೋ ಕಾರಿನ ಬೆಲೆ 3 ಕೋಟಿ ರುಪಾಯಿ!

ತೂಕ ಇಳಿಸುವ ಸೀಕ್ರೇಟ್ ಬಿಚ್ಚಿಟ್ಟ ಟೀಂ ಇಂಡಿಯಾ ವೇಗಿ ಶಮಿ!