ಕನ್ನಡದ ನಟಿಯಾದರೂ ತೆಲುಗು ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ತನುಜಾ ಪುಟ್ಟಸ್ವಾಮಿ ಸೌಂದರ್ಯ ಹಾಗೂ ನಟನೆಗೆ ಹೆಸರುವಾಸಿ.
entertainment Apr 30 2026
Author: Govindaraj S Image Credits:Instagram/Thanuja Puttaswamy
Kannada
ಬಿಗ್ ಬಾಸ್‌ನಿಂದ ಸಿಕ್ಕ ಇಮೇಜ್
ಬಿಗ್ ಬಾಸ್‌ನಿಂದ ಹೊರಬಂದ ಮೇಲೆ ತನುಜಾ ಪುಟ್ಟಸ್ವಾಮಿಗೆ ಒಳ್ಳೆಯ ಇಮೇಜ್ ಸಿಕ್ಕಿದೆ. ಹಲವರು ತನುಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಅಂದಿನಿಂದ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
Image credits: instagram/@thanuja_puttaswamy_
Kannada
ತೆಲುಗು ಹುಡುಗಿಯಂತೆಯೇ ಕಾಣುವ ಕನ್ನಡತಿ
ತನುಜಾ ಕನ್ನಡದ ಹುಡುಗಿಯಾದರೂ, ತೆಲುಗಿನಲ್ಲಿ ಅವರಿಗೆ ವಿಶೇಷ ಕ್ರೇಜ್ ಇದೆ. ನೋಡಲು ಪಕ್ಕಾ ತೆಲುಗು ಹುಡುಗಿಯಂತೆಯೇ ಕಾಣುತ್ತಾರೆ ಎಂಬುದು ವಿಶೇಷ.
Image credits: Instagram/Thanuja Puttaswamy
Kannada
ತೆಲುಗು ಫ್ಯಾನ್ಸ್ ಸಪೋರ್ಟ್
'ಮುದ್ದ ಮಂದಾರಂ' ಸೀರಿಯಲ್‌ನಿಂದಲೇ ತನುಜಾ ಎಂದರೆ ತೆಲುಗಿನವರಿಗೆ ಬಹಳ ಇಷ್ಟ. ಇದೇ ಕಾರಣಕ್ಕೆ ಅವರು ಬಿಗ್ ಬಾಸ್‌ಗೆ ಹೋದಾಗ, ಅವರಿಗೆ ಭರ್ಜರಿ ಬೆಂಬಲ ಸಿಕ್ಕಿತ್ತು.
Image credits: Instagram/Thanuja Puttaswamy
Kannada
ಇತ್ತೀಚೆಗೆ ಪ್ರಶಸ್ತಿ ಗೆದ್ದ ತನುಜಾ
ಇತ್ತೀಚೆಗೆ 'ಸ್ಟಾರ್ ಮಾ ಪರಿವಾರ್ ಅವಾರ್ಡ್' ಕೂಡ ಗೆದ್ದಿದ್ದಾರೆ. ಮೊದಮೊದಲು ಈ ಅವಾರ್ಡ್ ಫಂಕ್ಷನ್‌ಗೆ ಹೋಗಬೇಕೋ, ಬೇಡವೋ ಎಂದು ಯೋಚಿಸಿದ್ದರಂತೆ. ಜನರ ಪ್ರೀತಿಯೇ ನನ್ನನ್ನು ಈ ವೇದಿಕೆಗೆ ತಂದಿದೆ ಎಂದಿದ್ದರು.
Image credits: Instagram/Thanuja Puttaswamy
Kannada
ಶೋನ ಸ್ಪೆಷಲ್ ಅಟ್ರಾಕ್ಷನ್
ಸದ್ಯ ತನುಜಾ ಒಂದು ಕುಕರಿ ಮತ್ತು ಕಾಮಿಡಿ ಶೋನಲ್ಲಿದ್ದಾರೆ. ತಮ್ಮ ಮಾತು, ಅಡುಗೆ ಮತ್ತು ಕಾಮಿಡಿ ಟೈಮಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಈ ಶೋನ ಸ್ಪೆಷಲ್ ಅಟ್ರಾಕ್ಷನ್ ತನುಜಾ ಅವರೇ.
Image credits: Instagram/Thanuja Puttaswamy
Kannada
ನೆಗೆಟಿವ್ ಕಾಮೆಂಟ್‌ಗಳಿಗೆ ಖಡಕ್ ಉತ್ತರ
ತನುಜಾ ನೋಡಲು ಸೂಕ್ಷ್ಮ ಮನಸ್ಸಿನವರಂತೆ ಕಂಡರೂ, ತನ್ನ ಬಗ್ಗೆ ಯಾರಾದರೂ ನೆಗೆಟಿವ್ ಕಾಮೆಂಟ್ ಮಾಡಿದರೆ ಸುಮ್ಮನಿರುವುದಿಲ್ಲ. ಅವರಿಗೆ ಖಾರವಾಗಿಯೇ ಉತ್ತರ ಕೊಡುತ್ತಾರೆ.
Image credits: Instagram/Thanuja Puttaswamy
Kannada
ವಿವಾದದಲ್ಲಿ ಸಿಲುಕಿದ್ದ ಕನ್ನಡದ ನಟಿ
ತನ್ನ ಸೌಂದರ್ಯ ಮತ್ತು ಅಭಿನಯದಿಂದ ಎಲ್ಲರನ್ನೂ ಸೆಳೆಯುತ್ತಾರೆ. ತನ್ನ ಜೀವನದಲ್ಲಿ ಅಮ್ಮನೇ ನಿಜವಾದ ಹೀರೋ ಎನ್ನುತ್ತಾರೆ. ಇತ್ತೀಚೆಗೆ ಮಾಧುರಿ ಜೊತೆ ತಿರುಮಲದಲ್ಲಿ ಕೇಕ್ ಕಟ್ ಮಾಡಿ ವಿವಾದದಲ್ಲಿ ಸಿಲುಕಿದ್ದರು.