ಸಣ್ಣಗಿರುವ ವಧುಗಳು ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಯಾವ ರೀತಿ ಸೀರೆ ಉಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅವರಿಗಾಗಿ ಇಲ್ಲಿವೆ ಕೆಲವು ಸೀರೆ ಡಿಸೈನ್‌ಗಳು.
fashion Apr 22 2026
Author: Mahmad Rafik Image Credits:instagram
Kannada
ಹೆವಿ ಜರಿ ವರ್ಕ್ ಗೋಲ್ಡನ್ ಬಾರ್ಡರ್ ಸೀರೆ
ನವ ವಧು ಸಣ್ಣಗಿದ್ದರೆ, ಅವರಿಗೆ ಹೆವಿ ವರ್ಕ್ ಬಾರ್ಡರ್ ಮತ್ತು ಸೆರಗು ಇರುವ ಸೀರೆಗಳನ್ನು ಉಡಿಸಬಹುದು. ಇದರ ಜೊತೆ ಮಿನಿಮಲ್ ಜ್ಯುವೆಲರಿ ಧರಿಸಿದರೆ ಲುಕ್ ಮತ್ತಷ್ಟು ಗ್ಲಾಮರಸ್ ಆಗಿ ಕಾಣುತ್ತದೆ.
Image credits: instagram
Kannada
ಕಿರಣ್ ಲೇಸ್ ಸೀರೆ
ಆರ್ಗೆನ್ಜಾ ಸೀರೆಗಳಲ್ಲಿ ಗೋಲ್ಡನ್ ಕಿರಣ್ ಲೇಸ್ ಡಿಸೈನ್ ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಲುಕ್‌ನ್ನು ಇನ್ನಷ್ಟು ಸುಂದರವಾಗಿಸುತ್ತೆ. ಈ ಸೀರೆಗಳ ಜೊತೆ ಸ್ಟೇಟ್‌ಮೆಂಟ್ ಇಯರಿಂಗ್ಸ್ ಧರಿಸಿದರೆ ಚೆನ್ನಾಗಿ ಕಾಣುತ್ತೆ.
ಪಿಂಕ್ ಬಣ್ಣದ ಸೀರೆಯಲ್ಲಿ ನೀಲಿ ಬಣ್ಣದ ವೆಲ್ವೆಟ್ ಅಗಲ ಬಾರ್ಡರ್ ಬಳಸಲಾಗಿದೆ. ಇದು ನೋಡಲು ತುಂಬಾನೇ ಆಕರ್ಷಕವಾಗಿ ಕಾಣುತ್ತಿದೆ.
Image credits: pinterest
Kannada
ಕಟ್‌ವರ್ಕ್ ಬಾರ್ಡರ್ ಸೀರೆ
ಮಾರುಕಟ್ಟೆಯಲ್ಲಿ ಕಟ್‌ವರ್ಕ್ ಇರುವ ಹೆವಿ ಬಾರ್ಡರ್ ಲುಕ್ ಸೀರೆಗಳು ಸಿಗುತ್ತವೆ. ಇವು ಪ್ಲೇನ್ ಸೀರೆಯನ್ನು ಕೂಡ ಗ್ರಾಂಡ್ ಆಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ಸಣ್ಣಗಿರುವವರು ಫ್ಯಾನ್ಸಿ ಸೀರೆ ಲುಕ್‌ನಲ್ಲಿ ಮಿಂಚಬಹುದು.