Kannada

ಗ್ರೀನ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳು

ಹಾಲು ಮತ್ತು ಸಕ್ಕರೆ ಬೆರೆಸಿದ ಟೀಗಿಂತ ಗ್ರೀನ್ ಟೀ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಏಕೆಂದರೆ ಈ ಟೀ ಅನೇಕ ರೋಗಗಳನ್ನು ದೂರವಿಡುತ್ತದೆ. ಪ್ರತಿದಿನ ಈ ಟೀ ಕುಡಿದರೆ ಏನಾಗುತ್ತದೆ ಗೊತ್ತಾ?

Kannada

ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ

ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಗ್ರೀನ್ ಟೀ ತುಂಬಾ ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಈ ಬೊಜ್ಜು ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.

Kannada

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಂತಹ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Kannada

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ

ಗ್ರೀನ್ ಟೀ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Kannada

ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ

ಗ್ರೀನ್ ಟೀಯಲ್ಲಿ ಕೆಫೀನ್ ಅಂಶವೂ ಇದೆ. ಇದು ನಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಜೊತೆಗೆ ನಮ್ಮನ್ನು ಹೆಚ್ಚು ಚುರುಕಾಗಿರಿಸುತ್ತದೆ.

Kannada

ಬಿಪಿ ನಿಯಂತ್ರಣದಲ್ಲಿರುತ್ತದೆ

ರಕ್ತದೊತ್ತಡ ಹೆಚ್ಚಾದರೂ ಅಥವಾ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ. ಇದು ನಮ್ಮ ಆರೋಗ್ಯವನ್ನು ರಿಸ್ಕ್​ಗೆ ತಳ್ಳುತ್ತದೆ. ಆದರೆ, ರಕ್ತದೊತ್ತಡದ ಏರಿಳಿತಗಳ ವಿರುದ್ಧ ಹೋರಾಡಲು ಗ್ರೀನ್ ಟೀ ಚೆನ್ನಾಗಿ ಸಹಾಯ ಮಾಡುತ್ತದೆ.

Kannada

ಅಲ್ಝೈಮರ್ ಕಾಯಿಲೆಯನ್ನು ತಡೆಯುತ್ತದೆ

ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್ ಸಂಯುಕ್ತಗಳು ನ್ಯೂರಾನ್‌ಗಳನ್ನು ರಕ್ಷಿಸುತ್ತವೆ. ಇದು ಪಾರ್ಕಿನ್ಸನ್ ಮತ್ತು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

Kannada

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಆದರೆ, ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

Kannada

ಯಕೃತ್ತನ್ನು (ಲಿವರ್) ರಕ್ಷಿಸುತ್ತದೆ

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ತು ಕೂಡ ಒಂದು. ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ. ಯಕೃತ್ತಿನ ಸಮಸ್ಯೆಗಳು ಬರುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

Kannada

ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಯುತ್ತದೆ

'ದಿ ಜರ್ನಲ್ ಆಫ್ ನ್ಯೂಟ್ರಿಷನಲ್ ಬಯೋಕೆಮಿಸ್ಟ್ರಿ'ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗ್ರೀನ್ ಟೀ ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಶೇ. 75 ರಷ್ಟು ಕಡಿಮೆ ಮಾಡುತ್ತದೆ.

ಕಿಡ್ನಿ ಆರೋಗ್ಯ ಹಾಳು ಮಾಡುವ 6 ಆಹಾರಗಳಿವು! ಅಪ್ಪಿತಪ್ಪಿಯೂ ಹೀಗೆ ಮಾಡ್ಬೇಡಿ

ಹಸಿರು ಸೇಬು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹಾಲು, ನೀರು ಏನೂ ಬೇಡ ಜಟ್‌ಪಟ್ ಮಾಡಿ ಬೂದು ಕುಂಬಳಕಾಯಿ ಹಲ್ವಾ

Curry Leaves: ಕರಿಬೇವಿನ ಸೊಪ್ಪು ಫ್ರೆಶ್ ಆಗಿಡಲು ಇಲ್ಲಿವೆ ನೋಡಿ ಸೂಪರ್ ಟಿಪ್ಸ್!