Kannada

ಮೈಸೂರು ಮಸಾಲೆ ದೋಸೆ: ರುಚಿಕರ ತಿಂಡಿ

Kannada

ದೋಸೆ ಹಿಟ್ಟು ಮಾಡೋದೇಗೆ?

2 ಕಪ್ ಅಕ್ಕಿ, ½ ಕಪ್ ಉದ್ದಿನ ಬೇಳೆ, 2 ಟೇಬಲ್ಸ್ಪೂನ್ ಪೋಹಾ, ½ ಟೀಸ್ಪೂನ್ ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು, ನೀರು (ನೆನೆಸಲು ಮತ್ತು ರುಬ್ಬಲು)

Kannada

ಮಸಾಲೆ (ಆಲೂಗಡ್ಡೆ ಸ್ಟಫಿಂಗ್) ಗೆ

3-4 ಬೇಯಿಸಿದ ಆಲೂಗಡ್ಡೆ, 1 ಹೆಚ್ಚಿದ ಈರುಳ್ಳಿ, 1 ಟೀಸ್ಪೂನ್ ಸಾಸಿವೆ, ½ ಟೀಸ್ಪೂನ್ ಅರಿಶಿನ ಪುಡಿ, 1-2 ಹಸಿರು ಮೆಣಸಿನಕಾಯಿ, 1 ಇಂಚು ಶುಂಠಿ (ತುರಿದ), ಕೆಲವು ಕರಿಬೇವು, ಕೊತ್ತಂಬರಿ, ರುಚಿಗೆ ಉಪ್ಪು ಮತ್ತು ಎಣ್ಣೆ.

Kannada

ಮೈಸೂರು ಚಟ್ನಿ (ಕೆಂಪು ಚಟ್ನಿ) ಗೆ

2-3 ಒಣ ಕೆಂಪು ಮೆಣಸಿನಕಾಯಿ, 2 ಟೇಬಲ್ಸ್ಪೂನ್ ಕಡ್ಲೆ ಬೇಳೆ (ಹುರಿದ), 4-5 ಬೆಳ್ಳುಳ್ಳಿ ಎಸಳು, 1 ಸಣ್ಣ ತುಂಡು ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು (ಪೇಸ್ಟ್ ಮಾಡಲು)

Kannada

ದೋಸೆ ಹಿಟ್ಟು ತಯಾರಿಸಿ

ಅಕ್ಕಿ, ಉದ್ದಿನ ಬೇಳೆ, ಪೋಹಾ ಮತ್ತು ಮೆಂತ್ಯ ತೊಳೆದು 5-6 ಗಂಟೆ ನೀರಿನಲ್ಲಿ ನೆನೆಸಿಡಿ. ಎಲ್ಲವನ್ನೂ ಗ್ರೈಂಡರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟನ್ನು 8-10 ಗಂಟೆ ಅಥವಾ ರಾತ್ರಿಯಿಡೀ ಹುದುಗಲು ಬಿಡಿ.

Kannada

ಕೆಂಪು ಚಟ್ನಿ ತಯಾರಿಸಿ

ಒಣ ಮೆಣಸಿನಕಾಯಿ ಬಿಸಿ ನೀರಿನಲ್ಲಿ ನೆನೆಸಿ, ಹುರಿಕಡ್ಲೆ ಬೇಳೆ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು, ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಈ ಖಾರ ಮತ್ತು ಚಟ್ನಿ ದೋಸೆಯಲ್ಲಿ ಮಸಾಲೆಯ ರುಚಿಯನ್ನು ಹೆಚ್ಚಿಸುತ್ತದೆ.

Kannada

ಆಲೂಗಡ್ಡೆ ಪಲ್ಯ ತಯಾರಿಸಿ

ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿ. ನಂತರ ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಮೆಣಸಿನಕಾಯಿ. ಈರುಳ್ಳಿ ಹಾಕಿ ಹುರಿಯಿರಿ. ಅರಿಶಿನ ಪುಡಿ, ಉಪ್ಪು ಹಾಕಿ ಆಲೂಗಡ್ಡೆ ಮಿಶ್ರಣ ಮಾಡಿ.

Kannada

ದೋಸೆ ತಯಾರಿಸಿ

ತವಾ ಬಿಸಿ ಮಾಡಿ ಮತ್ತು ಸ್ವಲ್ಪ ನೀರು ಚಿಮುಕಿಸಿ ಒರೆಸಿ. ತವಾ ಮೇಲೆ ಹಿಟ್ಟು ಹಾಕಿ ಮತ್ತು ಸುತ್ತಲೂ ಹರಡಿ ತೆಳುವಾದ ದೋಸೆ ತಯಾರಿಸಿ. ಮೇಲೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ.

Kannada

ಮಸಾಲೆ ಮತ್ತು ಚಟ್ನಿ ಹಚ್ಚಿ

ದೋಸೆ ಬೇಯಲು ಪ್ರಾರಂಭಿಸಿದಾಗ, ಮಧ್ಯದಲ್ಲಿ 1 ಟೀಸ್ಪೂನ್ ಕೆಂಪು ಚಟ್ನಿ ಹರಡಿ. ಅದರ ಮೇಲೆ ಸ್ವಲ್ಪ ಆಲೂಗಡ್ಡೆ ಮಸಾಲೆ ಇರಿಸಿ ಮತ್ತು ದೋಸೆಯನ್ನು ಮಡಿಸಿ.

Kannada

ಮಸಾಲೆ ಮತ್ತು ಚಟ್ನಿ ಹಚ್ಚಿ

ದೋಸೆ ಬೇಯಲು ಪ್ರಾರಂಭಿಸಿದಾಗ, ಮಧ್ಯದಲ್ಲಿ 1 ಟೀಸ್ಪೂನ್ ಕೆಂಪು ಚಟ್ನಿ ಹರಡಿ. ಅದರ ಮೇಲೆ ಸ್ವಲ್ಪ ಆಲೂಗಡ್ಡೆ ಮಸಾಲೆ ಇರಿಸಿ ಮತ್ತು ದೋಸೆಯನ್ನು ಮಡಿಸಿ.

Kannada

ಮೈಸೂರು ದೋಸೆ ಬಡಿಸಿ

ತಯಾರಾದ ಮೈಸೂರು ಮಸಾಲೆ ದೋಸೆಯನ್ನು ಸಾಂಬಾರ್, ತೆಂಗಿನಕಾಯಿ ಚಟ್ನಿ ಮತ್ತು ಟೊಮೆಟೊ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ.

ಬಜ್ಜಿ ಗರಿಗರಿಯಾಗಿ ಮಾಡಲು ಈ 2 ಪದಾರ್ಥ ಸೇರಿಸಿ

ಕತ್ತೆ ಹಾಲಿನ ಚೀಸ್ ₹1 ಲಕ್ಷ ಅಂದ್ರೆ ನಂಬ್ತೀರಾ? ಇದರ ವಿಶೇಷತೆಯೇನು?

ನೆನೆಸಿದ ಒಣದ್ರಾಕ್ಷಿ ತಿನ್ನೋದರಿಂದ ಆಗುವ ಪ್ರಯೋಜನಗಳು!

ಬೇಸಿಗೆಯಲ್ಲಿ ನಿಂಬೆಹಣ್ಣಿನ ಬದಲಾಗಿ ಪಾನಕಕ್ಕೆ ಈ ಹುಳಿ ಬಳಸಿ!