ಮೂಲವ್ಯಾಧಿ ಪರ್ಮನೆಂಟ್ ಆಗಿ ನಿವಾರಣೆಯಾಗಬೇಕೆಂದರೆ ಮಲಬದ್ಧತೆ ತಡೆಗಟ್ಟಬೇಕೆಂದು ಡಾ.ಅಕ್ಷತ್ ಸೂಚಿಸಿದ್ದಾರೆ. ಮಲಬದ್ಧತೆಗೆ ಪರಿಹಾರ ಸಿಕ್ಕರೆ ಕರಳಿನ ಚಲನೆಯನ್ನು ಸುಲಭಗೊಳಿಸುತ್ತದೆ ಮತ್ತು ನೋವು ಕಡಿಮೆ ಮಾಡುತ್ತದೆ.
ಹೊಟ್ಟೆ ಕ್ಲೀನ್ ಆಗಿಡಲು ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಆಹಾರದಲ್ಲಿ ಸಾಕಷ್ಟು ಬೇಯಿಸಿದ ತರಕಾರಿಗಳು, ಸೂಪ್ ಮತ್ತು ಹಣ್ಣುಗಳು ಇರಲೇಬೇಕು.
ಇನ್ನು ಅಡುಗೆ ಮಾಡುವಾಗಲೂ ಸರಿಯಾದ ಪ್ರಮಾಣದಲ್ಲಿ ಎಣ್ಣೆ ಅಥವಾ ತುಪ್ಪ ಬಳಸಿ. ಇದು ಜೀರ್ಣಾಂಗವ್ಯೂಹವನ್ನು ನಯಗೊಳಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ.
ಅತಿಯಾದ ಪ್ರೋಟೀನ್, ಬ್ರೆಡ್ ಅಥವಾ ಅನ್ನದಂತಹ ಕಾರ್ಬೋಹೈಡ್ರೇಟ್ಸ್ ಸೇವನೆಯನ್ನು ತಪ್ಪಿಸಿ.
ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ಇದರಲ್ಲಿ ಕೆಲವು ಲೋಟ ಉಗುರು ಬೆಚ್ಚಗಿನ ನೀರು ಕೂಡ ಸೇರಿರಲಿ.
ದಿನಕ್ಕೆ ಒಮ್ಮೆ ಜೀರಿಗೆ, ಸೋಂಪು, ತುಪ್ಪದ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಪ್ರತಿದಿನ 6-8 ಕಪ್ಪು ಒಣದ್ರಾಕ್ಷಿ ಅಥವಾ 2-3 ಕಂದು ಒಣದ್ರಾಕ್ಷಿ ಸೇವಿಸಿ. ಇವು ನೈಸರ್ಗಿಕ ವಿರೇಚಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಒತ್ತಡ ಮತ್ತು ಆತಂಕ ಮಾಡಿಕೊಳ್ಳಬೇಡಿ. ಏಕೆಂದರೆ ಮನಸ್ಸು ಶಾಂತವಾಗಿದ್ದರೆ ಹೊಟ್ಟೆ ಉತ್ತಮವಾಗಿರುತ್ತದೆ.
ಈಗಾಗಲೇ ಮೂಲವ್ಯಾಧಿಯಿಂದ ಬಳಲುತ್ತಿದ್ದರೆ ಶಾಚಾಲಯ ಬಳಸುವ ಮೊದಲು ಮತ್ತು ನಂತರ ಗುದದ್ವಾರದ ಜಾಗಕ್ಕೆ ಕೊಬ್ಬರಿ ಎಣ್ಣೆಯನ್ನು ನಿಧಾನವಾಗಿ ಹಚ್ಚಿ.
ಒಂದೇ ಸ್ಥಳದಲ್ಲಿ ಲಾಂಗ್ ಟೈಂ ಕುಳಿತುಕೊಳ್ಳಬೇಡಿ. ಹಾಗೆಯೇ ಕುಳಿತುಕೊಳ್ಳುವಾಗ, ವಿಶೇಷವಾಗಿ ಪ್ರಯಾಣ ಮಾಡುವಾಗ ಅಥವಾ ಕೆಲಸ ಮಾಡುವಾಗ ಡೋನಟ್ ದಿಂಬನ್ನು ಬಳಸಿ.
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ