ಕೂದಲು ದಟ್ಟವಾಗಿ ಬೆಳೆಯಲು ಅಗಸೆ ಬೀಜ ತುಂಬಾ ಪ್ರಯೋಜನಕಾರಿ. ಇದನ್ನು ಹೇಗೆ ಬಳಸಬೇಕು ಎಂದು ಇಲ್ಲಿ ತಿಳಿಯಿರಿ.
ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಅತ್ಯುತ್ತಮ ಪದಾರ್ಥಗಳಲ್ಲಿ ಅಗಸೆ ಬೀಜವೂ ಒಂದು. ಇದರಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಕೂದಲನ್ನು ಬಲಪಡಿಸುತ್ತವೆ.
2 ಟೇಬಲ್ ಸ್ಪೂನ್ ಅಗಸೆ ಬೀಜವನ್ನು 2 ಕಪ್ ನೀರಿಗೆ ಹಾಕಿ. ಇದಕ್ಕೆ 2 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ 2 ಗಂಟೆಗಳ ಕಾಲ ಬಿಡಿ. ನಂತರ ಮೈಲ್ಡ್ ಶಾಂಪೂ ಬಳಸಿ ತೊಳೆಯಿರಿ. ಇದು ಕೂದಲಿಗೆ ಮೃದುತ್ವ ಮತ್ತು ಹೊಳಪನ್ನು ನೀಡುತ್ತದೆ.
ಒಂದು ಪಾತ್ರೆಯಲ್ಲಿ ಎರಡು ಕಪ್ ನೀರನ್ನು ಕುದಿಯಲು ಇಡಿ. ನೀರು ಕುದಿಯಲು ಆರಂಭಿಸಿದಾಗ, ಅದಕ್ಕೆ ಅಗಸೆ ಬೀಜಗಳನ್ನು ಹಾಕಿ. ಸುಮಾರು 10-15 ನಿಮಿಷಗಳ ಕಾಲ ಅದನ್ನು ಬೇಯಿಸಿ.
ನಡುವೆ ಆಗಾಗ ಮಿಶ್ರಣವನ್ನು ತಿರುಗಿಸುತ್ತಿರಿ. ಅದು ಜೆಲ್ನಂತೆ ದಪ್ಪಗಾದ ಮೇಲೆ ಗ್ಯಾಸ್ ಆಫ್ ಮಾಡಿ.
ನಂತರ, ಬೀಜಗಳಿಂದ ಜೆಲ್ ಬೇರ್ಪಡಿಸಲು ಈ ಮಿಶ್ರಣವನ್ನು ಜರಡಿ ಅಥವಾ ಬಟ್ಟೆ ಬಳಸಿ ಸೋಸಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ.
ಜೆಲ್ ತಣ್ಣಗಾದ ನಂತರ, ಅದಕ್ಕೆ ಅಲೋವೆರಾ, ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಜೆಲ್ ಅನ್ನು ತಲೆಗೆ ಹಚ್ಚಿಕೊಳ್ಳಿ.
ಬೇಸಿಗೆಗೆ ಹೆಚ್ಚಾಯ್ತಾ ಬಾಯಿ ದುರ್ವಾಸನೆ? ₹2 ಬಳಸಿ ಸ್ವಚ್ಛ ಉಸಿರು ನಿಮ್ಮದಾಗಿಸಿ!
Early Periods: ಖರ್ಜೂರ ತಿಂದರೆ ಪಿರಿಯಡ್ಸ್ ಬೇಗ ಆಗುತ್ತಾ?
ನೀವು ಹೆಚ್ಚು ಚಹಾ ಕುಡಿಯುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು
ಬೆಳಗ್ಗೆ ತುಳಸಿ ನೀರು ಕುಡಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?