ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ವಾಗ್ದಾಳಿ.
"ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು" - ಹೆಚ್.ಡಿ. ಕುಮಾರಸ್ವಾಮಿ.
1996ರಲ್ಲಿ ಹೆಚ್.ಡಿ. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಮಹಿಳೆಯರಿಗೆ 33% ಮೀಸಲು ನೀಡಲು ಮಸೂದೆ ಮಂಡಿಸಿತ್ತು.
ಅಂದು ಕಾಂಗ್ರೆಸ್ ಮಾಡಿದ್ದೇನು?ದೇವೇಗೌಡರು ಮಂಡಿಸಿದ್ದ ಆ ಐತಿಹಾಸಿಕ ಮಸೂದೆಯನ್ನು ಅಂದು ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಸಂಘಟಿತವಾಗಿ ವಿಫಲಗೊಳಿಸಿದ್ದವು.
ಆವತ್ತು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇರಿಸಿದ್ದಾರೆ.
ಈಗಲೂ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಮೋದಿಯವರ ಮಹಿಳಾ ಮೀಸಲು ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿವೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಕೂಟವನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದಕ್ಕೆ ಕಾರಣರಾದವರು ತಕ್ಕ ಶಾಸ್ತಿ ಅನುಭವಿಸುತ್ತಾರೆ.
ಮೋದಿಯವರ ನಾಯಕತ್ವದಲ್ಲಿ 33% ಮಹಿಳಾ ಮೀಸಲು ಗುರಿ ಸಾಧಿಸುವುದು ಶತಸಿದ್ಧ. ನಾರಿಶಕ್ತಿಗೆ ಅಗ್ರಮನ್ನಣೆ ಸಿಗುವ ದಿನ ಹತ್ತಿರದಲ್ಲಿದೆ.
ಮನೆಯಲ್ಲಿ 2.5 ಕೋಟಿ ರೂ. 'ಪವಾಡ' ಶಿವಲಿಂಗವಿರುವ ಆ ಘಟಾನುಘಟಿ ನಾಯಕ ಯಾರು ಗೊತ್ತಾ?
ಕರ್ನಾಟಕದ ಶ್ರೀಮಂತ ರಾಜಕಾರಣಿಗಳು ಇವರೆ… ನಂ 1 ಸ್ಥಾನದಲ್ಲಿರೋದು ಯಾರು?
ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಬಿಜೆಪಿಯ ಸುಮಲತಾ ಅಂಬರೀಶ್?
ದೆಹಲಿಯ ಅದೃಷ್ಟರೇಖೆ, ರೇಖಾ ಗುಪ್ತಾ ಅವರ ವಿದ್ಯಾಭ್ಯಾಸ, ನೆಟ್ವರ್ತ್ ಎಷ್ಟು?