ದುನಿಯಾ ವಿಜಯ್ ಪುತ್ರಿ ಈಗಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮೊದಲ ಸಿನಿಮಾ ಮೂಲಕವೇ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
sandalwood Apr 28 2026
Author: Pavna Das Image Credits:Instagram
Kannada
ಶೂಟಿಂಗ್ ನಿಂದ ಬ್ರೇಕ್
ಇದೀಗ ಎರಡನೇ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಿತನ್ಯಾ ಕೊಂಚ ಬ್ರೇಕ್ ತೆಗೆದುಕೊಂಡು ಹಂಪಿಗೆ ತೆರಳಿದ್ದಾರೆ.
Image credits: Instagram
Kannada
ಹಂಪಿಯಲ್ಲಿ ರಿತನ್ಯಾ
ರಿತನ್ಯಾ ಈ ಬಿರು ಬೇಸಿಗೆಯಲ್ಲಿ ಹಂಪಿಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಸಮಯ ಕಳೆದು, ಐತಿಹಾಸಿಕ ಸ್ಥಳವನ್ನು ಕಣ್ತುಂಬಿಕೊಂಡಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Image credits: Instagram
Kannada
ಹಂಪಿಯ ಸೌಂದರ್ಯಕ್ಕೆ ಬೆರಗಾದ ನಟಿ
ಬೇಸಿಗೆಯ ಸುಡುವ ಬೇಸಿಗೆಯ ನಡುವೆಯೂ ಹಂಪಿಯ ಸೌಂದರ್ಯ ಮತ್ತು ಅದರ ಅದ್ಭುತ ವಾಸ್ತುಶಿಲ್ಪವು ನಿಜವಾಗಿಯೂ ಬೆರಗುಗೊಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
Image credits: Instagram
Kannada
ಹಸಿರು ಸೀರೆಯಲ್ಲಿ ರಿತನ್ಯಾ
ರಿತನ್ಯಾ ಹಸಿರು ಬಣ್ಣದ ಸೀರೆಯುಟ್ಟು, ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ದು, ಸಿಂಪಲ್ ಆಗಿ ಜೊತೆಗೆ ಸುಂದರವಾಗಿ ಕಾಣಿಸುತ್ತಿದ್ದಾರೆ.
Image credits: Instagram
Kannada
ಲ್ಯಾಂಡ್ ಲಾರ್ಡ್ ಸಿನಿಮಾ
ರಿತನ್ಯಾ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅಪ್ಪ ವಿಜಯ್ ಕುಮಾರ್ ನಟಿಸಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿಜಯ್- ರಚಿತಾ ಮಗಳಾಗಿ ರಿತನ್ಯಾ ನಟಿಸಿದ್ದರು.
Image credits: Instagram
Kannada
ಸಿನಿಮಾ ಸೂಪರ್ ಹಿಟ್
ಒಬ್ಬ ಕೆಟ್ಟ ಭೂಮಾಲೀಕನಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದ್ದು, ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು.
Image credits: Instagram
Kannada
ರಿಷಿ ಜೊತೆ ಹೊಸ ಸಿನಿಮಾದಲ್ಲಿ ರಿತನ್ಯಾ
ಇದೀಗ ನಟ ರಿಷಿ ಜೊತೆ ‘ಜವರ’ ಎನ್ನುವ ಹೊಸ ಸಿನಿಮಾದಲ್ಲಿ ರಿತನ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೆ ಸಿನಿಮಾ ಮುಹೂರ್ತ ನೆರವೇರಿದೆ.