ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯ ಅಡಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಕ್ಯಾಪುಚಿನ್ ಕೋತಿಗಳ ನಾಲ್ಕು ಜೋಡಿಯನ್ನು ಕರೆದುಕೊಂಡು ಬರಲಾಗಿದೆ.
state Dec 16 2025
Author: Gowthami K Image Credits:Asianet News
Kannada
ದಕ್ಷಿಣ ಆಫ್ರಿಕಾದಿಂದ ಪ್ರಾಣಿ ವಿನಿಮಯ
ದಕ್ಷಿಣ ಆಫ್ರಿಕಾದ ಇಂದುನಾ ಪ್ರೈಮೇಟ್ & ಪ್ಯಾರೆಟ್ ಪಾರ್ಕ್ ಹಾಗೂ ಬನ್ನೇರುಘಟ್ಟ ಉದ್ಯಾನವನದ ನಡುವೆ ಪ್ರಾಣಿ ವಿನಿಮಯ ಒಪ್ಪಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿ ಸಂರಕ್ಷಣೆ ಉತ್ತೇಜಿಸುವ ಉದ್ದೇಶ.
Image credits: Asianet News
Kannada
ಭಾನುವಾರ ರಾತ್ರಿ ಬನ್ನೇರುಘಟ್ಟಕ್ಕೆ ಆಗಮನ
ಈ ಕ್ಯಾಪುಚಿನ್ ಕೋತಿಗಳು ಭಾನುವಾರ ರಾತ್ರಿ ವಿಶೇಷ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಉದ್ಯಾನವನಕ್ಕೆ ತಲುಪಿವೆ. ಆಗಮಿಸಿದ ಕೋತಿಗಳಲ್ಲಿ 4ಗಂಡು ಮತ್ತು 4 ಹೆಣ್ಣು ಕೋತಿಗಳು ಸೇರಿವೆ.
Image credits: Asianet News
Kannada
ಕ್ವಾರಂಟೈನ್‌ನಲ್ಲಿ ಕೋತಿಗಳು
ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಆಗಮಿಸಿದ ಎಲ್ಲಾ ಕೋತಿಗಳನ್ನು ಸದ್ಯ ಕ್ವಾರಂಟೈನಲ್ಲಿ ಇರಿಸಲಾಗಿದೆ. ಪಶುವೈದ್ಯರ ತಂಡವು ಕೋತಿಗಳ ಆರೋಗ್ಯ ಸ್ಥಿತಿಯನ್ನು ನಿತ್ಯವೂ ಪರಿಶೀಲಿಸುತ್ತಿವೆ.
Image credits: Asianet News
Kannada
ಶೀಘ್ರವೇ ಸಾರ್ವಜನಿಕ ದರ್ಶನಕ್ಕೆ ಅವಕಾಶ
ಕ್ವಾರಂಟೈನ್ ಪೂರ್ಣಗೊಂಡ ಬಳಿಕ ಮತ್ತು ಆರೋಗ್ಯವಾಗಿದೆ ಎಂದು ಖಚಿತವಾದ ನಂತರ, ಕ್ಯಾಪುಚಿನ್ ಗಳನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತದೆ. ಹೊಸ ಪ್ರಭೇದದ ಈ ಕೋತಿಗಳ ಆಗಮನದಿಂದ ಉದ್ಯಾನವನ ಆಕರ್ಷಣೆ ಹೆಚ್ಚಾಗಲಿದೆ