Kannada

ಕಾರ್ತಿಕ್ ಮಹೇಶ್

ಕನ್ನಡ ಕಿರುತೆರೆ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟು, ಬಿಗ್ ಬಾಸ್ ಸೀಸನ್ 10ರ ಮೂಲಕ ಜನಪ್ರಿಯತೆ ಪಡೆದು ಇದೀಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ ನಟ ಕಾರ್ತಿಕ್ ಮಹೇಶ್.

Kannada

ಕಾರ್ತಿಕ್ ನಟಿಸಿದ ಸೀರಿಯಲ್ ಗಳು

ಖುಷಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು, ‘ಇಂತಿ ನಿಮ್ಮ ಆಶಾ’, ‘ಅಕ್ಕ,’ ‘ದೇವಯಾನಿ’, ‘ಮಹಾಕಾಳಿ’, ‘ರಾಜಿ’ ‘ಪುಟ್ಟಕ್ಕನ ಮಕ್ಕಳು’, ‘ಅಂತರಪಟ’ ಸೇರಿ ಹಲವು ಧಾರಾವಾಹಿಗಳಲ್ಲಿ ನಟನೆ.

Image credits: Instgaram
Kannada

ಬಿಗ್ ಬಾಸ್ ಸೀಸನ್ 10ರ ವಿನ್ನರ್

ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ 10ರಲ್ಲಿ, ಎಲ್ಲಾ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು, ಸ್ಪರ್ಧೆ, ಎಂಟರ್ಟೈನ್ಮೆಂಟ್ ಎಲ್ಲವನ್ನೂ ನೀಡಿ, ಕನ್ನಡಿಗರ ಮನ ಗೆದ್ದು ವಿನ್ನರ್ ಆಗಿ ಹೊರಹೊಮ್ಮಿದ್ದರು.

Image credits: Instgaram
Kannada

ಸಿನಿಮಾಗಳಲ್ಲೂ ಮಿಂಚಿಂಗ್

ಕಾರ್ತಿಕ್ ‘ಡೊಳ್ಳು’, ‘ಒಂದು ಸರಳ ಪ್ರೇಮ ಕಥೆ’, ‘ಮೂಕು ಜೀವ’, ‘ಮೋಕ್ಷ ಪಟಂ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ಡೊಳ್ಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ.

Image credits: Instgaram
Kannada

ನಟನೆಗೆ ಬೆನ್ನೆಲುಬಾಗಿದ್ದು ಅಪ್ಪ

ಕಾರ್ತಿಕ್ ನಟನಾಗಬೇಕೆಂಬ ಕನಸು ಅಪ್ಪನದ್ದು ಆಗಿದ್ದು, ಮಗನ ಜೊತೆ ಸ್ನೇಹಿತರಂತಿದ್ದ, ಮಗನ ಎಲ್ಲಾ ಸಾಹಸಗಳಿಗೆ ಜೊತೆಯಾಗಿದ್ದ ತಂದೆ ಮಹೇಶ್ ಮರಣ ಹೊಂದಿದೆ ಇಂದಿಗೆ ಐದು ವರ್ಷಗಳು ಕಳೆದಿವೆ.

Image credits: Instgaram
Kannada

ನೀವಿಲ್ಲದೆ ಐದು ವರ್ಷ

ಅಪ್ಪನನ್ನು ಕಳೆದುಕೊಂಡ ನೋವಿನಲ್ಲಿ ಕಾರ್ತಿಕ ಅಪ್ಪನ ಜೊತೆಗಿನ ಹಳೆಯ ಮಧುರ ನೆನಪುಗಳ ಫೋಟೊಗಳನ್ನು ಹಂಚಿಕೊಂಡು,ನೀವಿಲ್ಲದೆ 5 ವರ್ಷ, ಮಿಸ್ ಯೂ ಅಪ್ಪ ಎಂದು ಬರೆದುಕೊಂಡಿದ್ದಾರೆ.

Image credits: Instgaram
Kannada

ಬಹು ಅಂಗಾಂಗ ವೈಫಲ್ಯದಿಂದ ಸಾವು

ಮಕ್ಕಳ ಎಲ್ಲಾ ಆಸೆಗಳನ್ನು ಈಡೇರಿಸುತ್ತಿದ್ದ ತಂದೆ ಮಹೇಶ್ ಕುಡಿತಕ್ಕೆ ದಾಸರಾಗಿ, ಅದರಿಂದಾಗಿ ಬಹು ಅಂಗಾಂಗ ವೈಫಲ್ಯವಾಗಿ ಕೊರೊನಾ ಸಮಯದಲ್ಲಿ ಸಾವನ್ನಪ್ಪಿದ್ದರು.

Image credits: Instgaram
Kannada

ಸರಿಯಾಗಿ ತಂದೆಯ ಕಾರ್ಯ ಮಾಡಲಾಗದ ನೋವು

ಬಿಗ್ ಬಾಸ್ ಮನೆಯಲ್ಲಿದ್ದಾಗ, ಕೊರೊನಾದಿಂದಾಗಿ ತಂದೆಯ ಕಾರ್ಯವನ್ನು ಸರಿಯಾಗಿ ಮಾಡಿ ಕಳುಹಿಸಲು ಸಾಧ್ಯವಾಗಲೇ ಇಲ್ಲ ಎಂಬ ನೋವು ಇದೆ ಎಂದು ಹೇಳಿ ಅತ್ತಿದ್ದರು ಕಾರ್ತಿಕ್.

Image credits: Instgaram
Kannada

ಫೋಟೊಗಳಲ್ಲಿ ತಂದೆಮ-ಮಗನ ಭಾಂದವ್ಯ

ಕಾರ್ತಿಕ್ ಹಂಚಿಕೊಂಡಿರುವ ಫೋಟೊಗಳನ್ನು ತಂದೆ ಮಗನ ಸುಮಧುರವಾದ ಭಾಂದವ್ಯ ಕೂಡ ಎದ್ದು ಕಾಣಿಸುತ್ತಿದೆ. ತಂದೆ ಮಗ ಸ್ನೇಹಿತರಂತೆ ಇರುತ್ತಿದ್ದರು. ಇದೀಗ ತಂದೆಯ ಅಗಲಿಕೆಯ ನೋವು ಅನುಭವಿಸುತ್ತಿದ್ದಾರೆ.

Image credits: Instgaram
Kannada

ಅಮ್ಮ ತಂಗಿಯ ಜೊತೆ ಕಾರ್ತಿಕ್

ಸದ್ಯ ಕಾರ್ತಿಕ್ ಮಹೇಶ್ ತಮ್ಮ ಅಮ್ಮ ಮೀನಾಕ್ಷಿ ಹಾಗೂ ತಂಗಿ ತೇಜಸ್ವಿನಿ ಮತ್ತು ತಂಗಿ ಮಗನ ಜೊತೆ ಮೈಸೂರಲ್ಲಿ ವಾಸಿಸುತ್ತಾರೆ. ಮೂರು ಸಿನಿಮಾಗಳಲ್ಲಿ ಕಾರ್ತಿಕ್ ಬ್ಯುಸಿಯಾಗಿದ್ದಾರೆ.

Image credits: Instgaram

ಗ್ರೀಸ್ ನಲ್ಲಿ ಅಕ್ಕನ ಜೊತೆ ಕಾವ್ಯಾ ಗೌಡ… ಧರಿಸಿದ ಬಟ್ಟೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ

ಸಂಗೀತ ಶೃಂಗೇರಿ ತಾಯಿ 51ನೇ ವಯಸ್ಸಲ್ಲಿ ಮಾಡಿದ್ರು ಸಾಹಸ… ಮಗಳು ಫುಲ್ ಖುಷ್!

ನಿಧಿ-ಕರ್ಣ ಮದುವೆ ಮಾಡಿಸಿ ಶ್ರೀಲಂಕಾಕ್ಕೆ ಹಾರಿದ ನಿತ್ಯಾ… ಅಷ್ಟಕ್ಕೂ ನಮೃತಾಳನ್ನು ಕ್ಯಾಪ್ಚರ್ ಮಾಡಿದ್ಯಾರು?

ರೀಲ್ ಅಮ್ಮ ಭಾಗ್ಯನಿಗೆ ಮದ್ವೆ ಆಗ್ತಿದ್ದಂಗೆ ರಿಯಲ್ ಅಮ್ಮನ ಜೊತೆ ಗೋವಾಕ್ಕೆ ಹಾರಿದ ಗುಂಡಣ್ಣ