Kannada

ಮಾನಸ ಮನೋಹರ್

ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ ನಟಿ ಮಾನಸ ಮನೋಹರ್ ತಾಯಿಯಾಗುವ ಸಂಭ್ರಮದಲ್ಲಿದ್ದು, ಮುದ್ದಾದ ಫೋಟೊ ಶೂಟ್ ಮಾಡಿಸಿದ್ದಾರೆ.

Kannada

ಲಕ್ಷ್ಮೀ ನಿವಾಸ ನಟಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮಾನಸ ಮನೋಹರ್ ಇದೀಗ ತುಂಬು ಗರ್ಭಿಣಿಯಾಗಿದ್ದು, ಕೊನೆಯ ತಿಂಗಳಲ್ಲಿ ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿದ್ದಾರೆ.

Image credits: Instagram
Kannada

ದೇವಕನ್ಯೆಯಂತೆ ಕಂಡ ಮಾನಸ

ಮಾನಸ ಮನೋಹರ್ ಬಿಳಿ ಬಣ್ಣದ ಮರ್ಮ್ರೈಡ್ ಬಾಡಿಕಾನ್ ಗೌನ್ ಧರಿಸಿದ್ದು, ಪತಿ ಕೂಡ ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ಜೊತೆಗೆ ಮುದ್ದಿನ ಶ್ವಾನ ಸ್ನೋವಿ ಕೂಡ ಫೋಟೊ ಶೂಟ್ ಗೆ ಜೊತೆಯಾಗಿದೆ.

Image credits: Instagram
Kannada

ಕೊನೆಯ ತಿಂಗಳ ಫೋಟೊ ಶೂಟ್

ಈ ಕೊನೆಯ ಸುಂದರವಾದ ಚಿತ್ರಗಳ ಸೆಟ್ ಅನ್ನು ಪೋಸ್ಟ್ ಮಾಡುತ್ತಿದ್ದೇನೆ, ಏಕೆಂದರೆ ಈ ಬಂಪ್ ಮಗುವಾಗಲು ಕೆಲವೇ ದಿನಗಳು ಉಳಿದಿವೆ ಎಂದು ಮುದ್ದಾದ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.

Image credits: Instagram
Kannada

ಪ್ರೀತಂ ಜೊತೆ ಸಪ್ತಪದಿ ತುಳಿದ ಮಾನಸ

2024ರ ನವಂಬರ್ ತಿಂಗಳಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅವರ ಎರಡನೇ ವಿವಾಹವಾಗಿತ್ತು.

Image credits: Instagram
Kannada

ಜನವರಿಯಲ್ಲಿ ಸಂಭ್ರಮ ಹಂಚಿಕೊಂಡ ನಟಿ

ಜನವರಿ ತಿಂಗಳಲ್ಲಿ ನಟಿ ತಾವು ಗರ್ಭಿಣಿಯಾಗಿರುವ ಸಂಭ್ರಮದ ವಿಷಯವನ್ನು ಮುದ್ದಾದ ವಿಡಿಯೋವನ್ನು ಶೇರ್ ಮಾಡುವ ಮೂಲಕ ತಿಳಿಸಿದ್ದರು.

Image credits: Instagram
Kannada

ಮೇ ತಿಂಗಳಲ್ಲಿ ಡೆಲಿವರಿ

ಮಾನಸ ಮನೋಹರ್ ಗೆ ಇದೀಗ ಒಂಭತ್ತು ತಿಂಗಳು ತುಂಬಿದ್ದು, ಮೇ ತಿಂಗಳಲ್ಲಿ ಪುಟ್ಟ ಮಗು ನಮ್ಮ ಜೀವನಕ್ಕೆ ಎಂಟ್ರಿ ಕೊಡಲಿದೆ ಎಂದು ನಟಿ ಈ ಹಿಂದೆ ತಿಳಿಸಿದ್ದರು.

Image credits: Instagram
Kannada

ಲಕ್ಷ್ಮೀ ನಿವಾಸದ ನೀಲೂ

ಮಾನಸ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇ ಗೌಡರ ಅತ್ತಿಗೆ ಹಾಗೂ ಮರಿ ಗೌಡರ ಪತ್ನಿ ನೀಲೂ ಪಾತ್ರದಲ್ಲಿ ನಟಿಸುತ್ತಿದ್ದರು. ಇದು ನೆಗೆಟಿವ್ ಶೇಡ್ ಇರುವ ಪಾತ್ರವಾಗಿದೆ.

Image credits: Instagram
Kannada

ಶಾಂಭವಿ ಧಾರಾವಾಹಿಯಲ್ಲಿ ಶಿವಗಾಮಿ

ಇನ್ನೂ ಉದಯ ಟಿವಿಯ ಶಾಂಭವಿ ಧಾರಾವಾಹಿಯಲ್ಲಿ ಮಾನಸ ನಾಯಕಿ ಶಿವಗಾಮಿಯಾಗಿ ನಟಿಸುತ್ತಿದ್ದರು. ಇದೀಗ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಎಲ್ಲಾ ಧಾರಾವಾಹಿಯಿಂದ ಹೊರ ಬಂದಿದ್ದರು.

Image credits: Instagram
Kannada

ಜೊತೆಜೊತೆಯಲಿ ಧಾರಾವಾಹಿ ಮೂಲಕ ಫೇಮಸ್

ಮಾನಸ ಮನೋಹರ್ ಕನ್ನಡ ಕಿರುತೆರೆಯ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಸೆಕ್ರೆಟರಿ ಮೀರಾ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು.

Image credits: Instagram

ಹುಡುಗ ಒಪ್ಪಿಕೊಂಡಿದ್ದಷ್ಟೇ... ಮದುವೆಗೆ ರೆಡಿಯಾಗಿಯೇ ಬಿಟ್ಲು ‘ಕರ್ಣ’ನ ನಿಧಿ

ಪಕ್ಕದ್ಮನೆ ಹುಡುಗಿಯಂತಿದ್ದ ಶ್ರುತಿ ಪುತ್ರಿಯ ಗ್ಲಾಮರಸ್ ಲುಕ್ ನೋಡಿ ಫ್ಯಾನ್ಸ್ ಶಾಕ್!

ಹೊಸ ಅವತಾರದಲ್ಲಿ ರಾಣವ್ ಗೌಡ ಭಾವಿ ಪತ್ನಿ, ರಾಧಾ ಭಗವತಿ

ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಬಿಗ್ ಬಾಸ್ ಸುಂದರಿಯರು