Kannada

ಸಂಗೀತಾ ಶೃಂಗೇರಿ

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಸಂಗೀತಾ ಶೃಂಗೇರಿ ಅವರ ತಾಯಿ 51ನೇ ವಯಸ್ಸಲ್ಲಿ ಮಾಡಿದಂತಹ ಸಾಹಸದ ಕುರಿತು ನಟಿ ಹೆಮ್ಮೆಯಿಂದ ಮಾಹಿತಿ ಹಂಚಿಕೊಂಡಿದ್ದಾರೆ.

Kannada

ಸಂಗೀತಾ ತಾಯಿ ಏನು ಮಾಡಿದ್ರು?

ಸಂಗೀತಾ ತಾಯಿ ಭವಾನಿ ಶಿವಕುಮಾರ್ ತಮ್ಮ 51ನೇ ವಯಸ್ಸಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡಿ, ಹೊಸ ಅನುಭವವನ್ನು ಪಡೆದರು. ಆ ಮೂಲಕ ಏಜ್ ಈಸ್ ಜಸ್ಟ್ ಎ ನಂಬರ್ ಎನ್ನುವುದನ್ನು ತೋರಿಸಿದರು.

Image credits: Instagram
Kannada

ಅಮ್ಮನ ಬಗ್ಗೆ ಹೆಮ್ಮೆ ಪಟ್ಟ ಸಂಗೀತಾ

ನನ್ನ ತಾಯಿ 51 ನೇ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್‌ಗೆ ಹೋದರು, ನಾನು ಜೀವನವನ್ನು ಹೇಗೆ ನಡೆಸುವುದು ಎಂಬುದರ ಕುರಿತು ಅಧಿಕೃತವಾಗಿ ನೋಟ್ಸ್ ತೆಗೆದುಕೊಳ್ಳುತ್ತಿದ್ದೇನೆ! ಎಂದಿದ್ದಾರೆ ಸಂಗೀತಾ.

Image credits: Instagram
Kannada

ಏಪ್ರಿಲ್ 21 ಮರೆಯಾಗದ ಅದ್ಭುತ ದಿನ

ಏಪ್ರಿಲ್ 21 ನನಗೆ ಎಂದಿಗೂ ಮರೆಯಲಾಗದ ಒಂದು ಅವಿಸ್ಮರಣೀಯ ನೆನಪುಗಳನ್ನು ನೀಡಿದ ದಿನವಾಯಿತು. ಅಮ್ಮನ ಡೇರಿಂಗ್ ಮತ್ತು ಜೀವನವನ್ನು ಪ್ರೀತಿಸುವ ರೀತಿ ಖುಷಿ ಕೊಟ್ಟಿದೆ ಎಂದಿದ್ದಾರೆ.

Image credits: Instagram
Kannada

ಅಮ್ಮನಿಗೆ ಪ್ರಪಂಚವನ್ನು ತೋರಿಸುವ ಆಸೆ

ಅಮ್ಮ ಸಾಗರಕ್ಕೆ ಧುಮುಕುವುದನ್ನು ನೋಡಿದಾಗ ನನಗೆ ತುಂಬಾ ಆಳವಾದ ಒಂದು ವಿಷಯ ಅರಿವಾಯಿತು: ನಾನು ಅವಳಿಗೆ ಇಡೀ ಪ್ರಪಂಚವನ್ನು ತೋರಿಸಲು ಬಯಸುವೆ ಎಂದಿದ್ದಾರೆ.

Image credits: Instagram
Kannada

ಎಲ್ಲವನ್ನೂ ಅಮ್ಮನೊಂದಿಗೆ ಅನುಭವಿಸುವ ಆಸೆ

ನಾನು ನೋಡಿದ ಪ್ರತಿಯೊಂದು ಸುಂದರ ಸೂರ್ಯಾಸ್ತ ಮತ್ತು ನಾನು ಇನ್ನೂ ನೋಡಿರದ ಹಿಡನ್ ಜೆಮ್ ಎಲ್ಲವನ್ನೂ ಒಮ್ಮೆ ನಾನು ಅಮ್ಮನೊಂದಿಗೆ ಅನುಭವಿಸಲು ಬಯಸುತ್ತೇನೆ ಎಂದಿದ್ದಾರೆ ಸಿಂಹಿಣಿ.

Image credits: Instagram
Kannada

ನಿಮ್ಮ ಹೆತ್ತವರೊಂದಿಗೆ ಪ್ರಯಾಣಿಸಿ

​ನನ್ನ ಬಗ್ಗೆ ಗೊತ್ತಿರುವವರು ಮತ್ತು ಇದನ್ನು ಓದುವವರು ಗಮನಿಸಿ: ನಿಮ್ಮ ಹೆತ್ತವರೊಂದಿಗೆ ಹೆಚ್ಚು ಪ್ರಯಾಣಿಸಿ. ಆ ನೆನಪುಗಳನ್ನು ಜೀವನಪರ್ಯಂತ ಹಿಡಿದಿಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Image credits: Instagram
Kannada

ಹರ್ಬಲ್ ವೆಲ್ ನೆಸ್ ಕೋಚ್

ಸಂಗೀತಾ ತಾಯಿ ಹರ್ಬಲ್ ವೆಲ್ ನೆಸ್ ಕೋಚ್ ಆಗಿದ್ದು, ನಟಿಯ ಪೋಸ್ಟ್ ನೋಡಿ ನಿಮಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಎಂದು ಈಗ ಗೊತ್ತಾಯ್ತು ಸಿಂಹಿಣಿ ಎಂದಿದ್ದಾರೆ ಸಂಗೀತಾ ಶೃಂಗೇರಿ ಫ್ಯಾನ್ಸ್.

Image credits: Instagram

ನಿಧಿ-ಕರ್ಣ ಮದುವೆ ಮಾಡಿಸಿ ಶ್ರೀಲಂಕಾಕ್ಕೆ ಹಾರಿದ ನಿತ್ಯಾ… ಅಷ್ಟಕ್ಕೂ ನಮೃತಾಳನ್ನು ಕ್ಯಾಪ್ಚರ್ ಮಾಡಿದ್ಯಾರು?

ರೀಲ್ ಅಮ್ಮ ಭಾಗ್ಯನಿಗೆ ಮದ್ವೆ ಆಗ್ತಿದ್ದಂಗೆ ರಿಯಲ್ ಅಮ್ಮನ ಜೊತೆ ಗೋವಾಕ್ಕೆ ಹಾರಿದ ಗುಂಡಣ್ಣ

ಲಕ್ಷ್ಮೀ ನಿವಾಸ ನಟಿಯ ಬೇಬಿ ಬಂಪ್ ಫೋಟೊ ಶೂಟ್… ದೇವಕನ್ಯೆಯಂತೆ ಕಂಡ ಮಾನಸ ಮನೋಹರ್

ಹುಡುಗ ಒಪ್ಪಿಕೊಂಡಿದ್ದಷ್ಟೇ... ಮದುವೆಗೆ ರೆಡಿಯಾಗಿಯೇ ಬಿಟ್ಲು ‘ಕರ್ಣ’ನ ನಿಧಿ