ಕನ್ನಡ ಕಿರುತೆರೆಯಲ್ಲಿ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ದೃಷ್ಟಿಯಾಗಿ ಗುರುತಿಸಿಕೊಂಡ ಸುಂದರಿ ಅರ್ಪಿತಾ ಮೋಹಿತೆ ಇದೀಗ ತೆಲುಗು ಸೀರಿಯಲ್ ನಲ್ಲಿ ಬ್ಯುಸಿ.
tv-talk Feb 09 2026
Author: Pavna Das Image Credits:Instagram
Kannada
ತೆಲುಗು ಸೀರಿಯಲ್ ನಾಯಕಿ
ಇದೀಗ ಅರ್ಪಿತಾ ಮೋಹಿತೆ ತೆಲುಗಿನ ಸ್ಟಾರ್ ಮಾ ವಾಹಿನಿಯ ‘ವಾರಸುರಾಲು’ ಧಾರಾವಾಹಿಗೆ ಅರ್ಪಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ.
Image credits: Instagram
Kannada
ಕೃಷ್ಣ ಸುಂದರಿಯಾಗಿದ್ದ ಅರ್ಪಿತಾ
ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಯಾರ ದೃಷ್ಟಿಯೂ ಬೀಳದಿರಲಿ ಎಂದು ಸ್ವತಃ ಅಮ್ಮ ಮಗಳಿಗೆ ಕಪ್ಪು ಬಣ್ಣ ಹಚ್ಚಿ, ಸೀರಿಯಲ್ ಪೂರ್ತಿ ಕಪ್ಪು ಬಣ್ಣದಲ್ಲೇ ಕಾಣಿಸಿಕೊಂಡಿದ್ದರು ಅರ್ಪಿತಾ.
Image credits: Instagram
Kannada
ಲುಕ್ ಬದಲಿಸಿಕೊಂಡ ಸುಂದರಿ
ಇದೀಗ ತೆಲುಗು ಇಂಡಷ್ಟ್ರಿಗೆ ಕಾಲಿಡುತ್ತಿದ್ದಂತೆ, ನಟಿಯ ಲುಕ್ ಬದಲಾಗಿದೆ. ಕೇಸರಿ ಬಣ್ಣದ ಲಂಗ-ದಾವಣಿ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಸುಂದರಿ.
Image credits: Instagram
Kannada
ಪ್ರಿನ್ಸೆಸ್ ಎಂದ ಫ್ಯಾನ್ಸ್
ಕೇಸರಿ ಲೆಹೆಂಗ, ಗೋಲ್ಡನ್ ಜ್ಯುವೆಲ್ಲರಿ, ಜಡೆಯಲ್ಲೂ ಗೋಲ್ಡನ್ ಅಲಂಕಾರ ಎಲ್ಲಾ ನೋಡಿದ್ರೆ, ಪ್ರಿನ್ಸೆಸ್ ಥರ ಕಾಣಿಸ್ತೀರಿ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.
Image credits: Instagram
Kannada
ದೃಷ್ಟಿಬೊಟ್ಟು ಮೂಲಕ ಜನಪ್ರಿಯತೆ
ಅರ್ಪಿತಾ ಮೋಹಿತೆ ಕನಕಪುರದ ಹುಡುಗಿ. ಬೆಂಗಳೂರಿನಲ್ಲೇ ವಾಸ. ಬಿಕಾಂ ಮುಗಿಸಿರುವ ಅರ್ಪಿತಾ ಕೆಲವು ಧಾರಾವಾಹಿಗಳಲ್ಲಿ ಕೂಡ ನಟಿಸಿದಾರೆ. ಅವರಿಗೆ ಹೆಚ್ಚು ಜನಪ್ರಿಯತೆ ನೀಡಿದ ಧಾರಾವಾಹಿ ದೃಷ್ಟಿ ಬೊಟ್ಟು.
Image credits: Instagram
Kannada
ಮೇಕಪ್ ಆರ್ಟಿಸ್ಟ್ ಆಗಿದ್ದ ಅರ್ಪಿತಾ
ಅರ್ಪಿತಾ ನಟಿಯಾಗುವ ಮುನ್ನ ಮೇಕಪ್ ಆರ್ಟಿಸ್ಟ್ ಆಗಿದ್ರಂತೆ. ಈಗಂತೂ ಫ್ಯಾನ್ಸ್ ಮತ್ತೆ ಇವರನ್ನ ಕನ್ನಡ ಕಿರುತೆರೆಯಲ್ಲಿ ನೋಡೋದಕ್ಕೆ ಕಾಯುತ್ತಿದ್ದಾರೆ.