ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಭವ್ಯಾ ಗೌಡ, ವಧುವಿನಂತೆ ಸಿಂಗಾರಗೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಭವ್ಯಾ ಗೌಡ ಮೆಟಾಲಿಕ್ ಆರೆಂಜ್ ಬಣ್ಣದ ಸೀರೆ ಅದಕ್ಕೊಪ್ಪುವ ಬ್ರೌನ್ ಬ್ಲೌಸ್ ಧರಿಸಿ, ಆಭರಣಗಳಿಂದ ತಮ್ಮನ್ನು ಸಿಂಗರಿಸಿ, ಉದ್ದನೆಯ ಜಡೆ ಬಿಟ್ಟು ಫೋಟೊ ಶೂಟ್ ಮಾಡಿಸಿದ್ದಾರೆ.
ಅಂದ ಹಾಗೆ ಕರ್ಣ ಧಾರಾವಾಹಿಯಲ್ಲಿ ನಿಧಿಯನ್ನು ಮದುವೆಯಾಗಲು, ಅರ್ಜುನ್ ಎನ್ನುವ ಡಾಕ್ಟರ್ ಬಂದಿದ್ದು, ಅರ್ಜುನ್ ಗೆ ನಿಧಿ ಒಪ್ಪಿಗೆಯೂ ಆಗಿದೆ.
ಸೀರಿಯಲ್ ನಲ್ಲಿ ಕಥೆ ಏನಾಗುತ್ತೆ ಗೊತ್ತಿಲ್ಲ, ಆದರೆ ರಿಯಲ್ ಆಗಿ ನಿಧಿ ಅಂದ್ರೆ ಭವ್ಯಾ ಗೌಡ, ಮದುವೆಗೆ ರೆಡಿಯಾದಂತೆ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.
ಭವ್ಯಾ ಗೌಡ ತಮ್ಮ ಫೋಟೊಗಳ ಜೊತೆಗೆ “ನೋಟದಲ್ಲೇ ಮಾತು… ಆಭರಣಗಳಲ್ಲಿ ಭಾವನೆ” ಎನ್ನುವ ಮುದ್ದಾದ ಕ್ಯಾಪ್ಶನ್ ಹಾಕಿದ್ದು, ಸಖತ್ ಯೂಟ್ ಆಗಿ ಕಾಣಿಸುತ್ತಿದ್ದಾರೆ ಭವ್ಯಾ.
ಅಭಿಮಾನಿಗಳು ಭವ್ಯಾ ಗೌಡ ಫೋಟೊ ನೋಡಿ, ಮೆಚ್ಚಿಕೊಂಡಿದ್ದು, ಪರಮಸುಂದರಿ, ಬ್ಯೂಟಿಫುಲ್, ಆಕಾಶದಿಂದ ಧರೆಗಿಳಿದ ರಂಭೆ, ಇವಳೇ ಚಂದನದ ಗೊಂಬೆ ಎಂದು ಹಾಡಿ ಹೊಗಳಿದ್ದಾರೆ.
ಕರ್ಣ ಧಾರಾವಾಹಿಯಲ್ಲಿ ಮನೆಯವರೆಲ್ಲಾ ಸೇರಿ, ಅದರಲ್ಲೂ ರಮೇಶ್ ಮುಖ್ಯವಾಗಿ ನಿಧಿಯ ಮದುವೆ ಮಾಡಿಸಲು ಪ್ಲ್ಯಾನ್ ಮಾಡಿದ್ದು, ಅದಕ್ಕಾಗಿ ಹುಡುಗನನ್ನು ಮನೆಗೆ ಬರುವಂತೆ ಮಾಡಿದ್ದಾನೆ.
ನಿತ್ಯಾ ಜೊತೆ ಕರ್ಣನ ಮದುವೆ ಹೇಗೆಗೋ ಮಾಡಿ ತಪ್ಪಿಸಿದ್ದಾರೆ, ಆದರೆ ಈಗ ನಿತ್ಯಾಗೂ ಕರ್ಣನ ಮೇಲೆ ಸ್ವಲ್ಪ ಒಲವಾದ ಹಾಗಿದೆ. ಇದರ ನಡುವೆ ಕರ್ಣ-ನಿಧಿ ಒಂದಾಗ್ತಾರ ಕಾದು ನೋಡಬೇಕು.
ಪಕ್ಕದ್ಮನೆ ಹುಡುಗಿಯಂತಿದ್ದ ಶ್ರುತಿ ಪುತ್ರಿಯ ಗ್ಲಾಮರಸ್ ಲುಕ್ ನೋಡಿ ಫ್ಯಾನ್ಸ್ ಶಾಕ್!
ಹೊಸ ಅವತಾರದಲ್ಲಿ ರಾಣವ್ ಗೌಡ ಭಾವಿ ಪತ್ನಿ, ರಾಧಾ ಭಗವತಿ
ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಬಿಗ್ ಬಾಸ್ ಸುಂದರಿಯರು
ಡಿಕೋಡ್ ಆಯ್ತು ವೀಕ್ಷಕರನ್ನ ಕನ್ಫ್ಯೂಸ್ ಮಾಡಿದ ದಿಯಾ ಬೇಬಿಯ ಪ್ಲಾನ್