ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಮೂಲಕ ಮಿಂಚುತ್ತಿರುವ ನಟಿ ವಿದ್ಯಾ ರಾಜ್.
ಹೊಸ ಸ್ನೇಹಾ ಪಾತ್ರಕ್ಕೆ ಜೀವ ತುಂಬಿ, ಸದ್ಯ ಕಂಠಿಯ ಪತ್ನಿಯ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ ವಿದ್ಯಾ.
ಧಾರಾವಾಹಿಯಲ್ಲಿ ಹಳ್ಳಿಯ ಹುಡುಗಿಯಂತೆ ಕಾಣಿಸಿಕೊಳ್ಳುವ ಸ್ನೇಹಾ ರಿಯಲ್ ಆಗಿ ಸಖತ್ ಸ್ಟೈಲಿಶ್
ವಿದ್ಯಾ ರಾಜ್ ಇದೀಗ ಫೋಟೊ ಶೂಟ್ ಮಾಡಿಸಿದ್ದು, ಸಖತ್ ವೈರಲ್ ಆಗುತ್ತಿದೆ.
ವಿದ್ಯಾ ರಾಜ್ ನೇರಳೆ ಬಣ್ಣದ ಸ್ಲೀವ್ ಲೆಸ್ ಗೌನ್ ಧರಿಸಿ, ಕೈಯಲ್ಲಿ ಪುಸ್ತಕ, ಛತ್ರಿ ಹಿಡಿದು ಪೋಸ್ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾ ರಾಜ್ ಶೇರ್ ಮಾಡಿರೋ ಫೋಟೊ ನೋಡಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು, ಬ್ಯೂಟಿ, ಸುಂದರಿ ಎಂದಿದ್ದಾರೆ.
ವಿದ್ಯಾ ರಾಜ್ ಈ ಮೊದಲು ರಾಮಾಚಾರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಪುಟ್ಟಕ್ಕನ ಮಕ್ಕಳಿಗಾಗಿ ಆ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಉದಯ ಟಿವಿಯ ಕನ್ಯಾದಾನ, ಸೇವಂತಿ ಧಾರಾವಾಹಿಗಳಲ್ಲೂ ನಟಿಸಿದ್ದ ವಿದ್ಯಾ ರಾಜ್.
ಕನ್ನಡವಷ್ಟೇ ಅಲ್ಲ ವಿದ್ಯಾ ರಾಜ್ ತಮಿಳು ಸೀರಿಯಲ್ ಹಂಸಗೀತಂ ನಲ್ಲಿ ನಟಿಸಿದ್ದರು.
ಇನ್ನು ಘೋಸ್ಟ್ ಎನ್ನುವ ಸಿನಿಮಾದಲ್ಲೂ ನಟಿಸಿದ್ದು, ಸದ್ಯಕ್ಕೆ ಕಂಠಿ ಪತ್ನಿ ಸ್ನೇಹಾ ಆಗಿ ಮಿಂಚುತ್ತಿದ್ದಾರೆ.
ಮತ್ತೆ ಒಂದಾದ ಮೋಕ್ಷಿತಾ, ಶಿಶಿರ್, ಐಶ್ವರ್ಯಾ… ಗೆಳೆತನ ನೋಡಿ ಫ್ಯಾನ್ಸ್ ಖುಷ್
ಹೊಸ ಸ್ಟೈಲಿಶ್ ಲುಕ್ ನಲ್ಲಿ ಲಕ್ಷ್ಮೀ ಬಾರಮ್ಮ ಸುಪ್ರೀತಾ
ವಿದೇಶದಲ್ಲಿ HR ಆಗಿರೋ ಪುನೀತ್ ರಾಜ್‌ಕುಮಾರ್ ಸೀರಿಯಲ್ ಹೀರೋಯಿನ್ ಅರ್ಚನಾ!
ದುಬೈನಲ್ಲಿ ಮೇಘಾ ಶೆಟ್ಟಿ….ಪೆಂಗ್ವಿನ್ , ಮತ್ಸ್ಯ ಲೋಕದಲ್ಲಿ ಕಳೆದೋದ ಸುಂದ್ರಿ