ಮುಕೇಶ್ ಅಂಬಾನಿ 68ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಉದ್ಯಮಿಗಳು, ದಿಗ್ಗಜರು ಸೇರಿದಂತೆ ಹಲವು ಅಂಬಾನಿಗೆ ಶುಭಕೋರಿದ್ದಾರೆ. ಅಂಬಾನಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಮೆಹಂದಿ ಆರ್ಟಿಸ್ಟ್ 40 ವರ್ಷದ ಹಿಂದಿನ ಕತೆಯೊಂದನ್ನು ಹೇಳಿದ್ದಾರೆ.

ಮುಂಬೈ(ಏ.20) ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ.ಐಷಾರಾಮಿತನ, ಅದ್ಧೂರಿ ಮುಕೇಶ್ ಅಂಬಾನಿ ಕುಟುಂಬಕ್ಕೆ ಹೊಸದೇನಲ್ಲ. ಏಷ್ಯಾದ ನಂಬರ್ 1 ಶ್ರೀಮಂತ ಮುಕೇಶ್ ಅಂಬಾನಿ ಇದೀಗ 68ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿಗೆ ಹಲವರು ಶುಭಕೋರಿದ್ದಾರೆ. ಇದೇ ವೇಳೆ ಮುಕೇಶ್ ಅಂಬಾನಿ ಕುಟುಂಬದ ಸದಸ್ಯರಿಗೆ ಸತತವಾಗಿ ಮೆಹಂದಿ ಹಾಕುತ್ತಿರುವ ಆರ್ಟಿಸ್ಟ್ 40 ವರ್ಷಗಳ ಹಿಂದಿನ ಘಟನೆ ಹೇಳಿದ್ದಾರೆ. ಇಷ್ಟೇ ಅಲ್ಲ 40 ವರ್ಷದ ಹಿಂದೆ ಹಾಗೂ ಈಗ ಮುಕೇಶ್ ಅಂಬಾನಿಯ ಬದಲಾವಣೆಯನ್ನು ಹೇಳಿದ್ದಾರೆ.

ಎಪ್ರಿಲ್ 19ಕ್ಕೆ ಮುಕೇಶ್ ಅಂಬಾನಿ 68ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅಂಬಾನಿ ಕುಟುಂಬದ ಮೆಹಂದಿ ಆರ್ಟಿಸ್ಟ್ ವೀಣಾ ನಗ್ಡಾ ಮುಕೇಶ್ ಅಂಬಾನಿ ಕುರಿತು ಕೆಲ ಮಾಹಿತಿ ತಿಳಿಸಿದ್ದಾರೆ. ಅನಂತ್ ಅಂಬಾನಿ ಮದುವೆಯಲ್ಲಿ ನೀತಾ ಅಂಬಾನಿ, ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬಕ್ಕೆ ಮೆಹಂದಿ ಹಾಕಿದ್ದು ಇದೇ ವೀಣಾ ನಾಗ್ಡಾ. ಇದೀಗ ಅಂಬಾನಿ ಹುಟ್ಟು ಹಬ್ಬಕ್ಕೆ ಶುಭಕೋರಿದ ವೀಣಾ ನಾಗ್ಡಾ, ಮುಕೇಶ್ ಅಂಬಾನಿ ಜೊತೆಗಿನ ಓಡನಾಟ, ವ್ಯಕ್ತಿತ್ವ ಕುರಿತು ನಾಗ್ಡಾ ವಿವರಿಸಿದ್ದಾರೆ.

ಜಿಯೋ ಫೈನಾನ್ಸಿನಿಂದ ಭರ್ಜರಿ ಕೊಡುಗೆ, ಕೇವಲ 10 ನಿಮಿಷದಲ್ಲಿ 1 ಕೋಟಿ ರೂ ವರೆಗೆ ಸಾಲ

ಮುಕೇಶ್ ಅಂಬಾನಿ ಹಾಗೂ ಅಂಬಾನಿ ಕುಟುಂಬದ ಜೊತೆಗೆ ಕಳೆ 40 ವರ್ಷಗಳಿಂದ ಒಡನಾಟವಿದೆ ಎಂದು ವೀಣಾ ಹೇಳಿದ್ದಾರೆ. 40 ವರ್ಷದ ಹಿಂದೆ ಮುಕೇಶ್ ಅಬಾನಿ ಸಹೋದರಿ ದೀಪ್ತಿ ಸಲಗಾವ್ಕರ್ ಮದುವೆಯಲ್ಲೂ ಮಹೆಂದಿ ಹಾಕಿದ್ದ ವೀಣಾ ಹಳೇ ಘಟನೆಯೊಂದನ್ನು ಹೇಳಿದ್ದಾರೆ. 40 ವರ್ಷದ ಹಿಂದೆ ಮುಕೇಶ್ ಅಂಬಾನಿ ಬೇಟಿಯಾದಾಗ ಅಂಬಾನಿ ವಿಶ್ವದ ಶ್ರೀಮಂತನಾಗಿರಲಿಲ್ಲ. ಮುಕೇಶ್ ಅಂಬಾನಿ ತಂದೆ ಧೀರೂಬಾಯಿ ಅಂಬಾನಿ ಉದ್ಯಮ ನಡೆಸುತ್ತಿದ್ದರು. ಮುಕೇಶ್ ಅಂಬಾನಿ ತಂದೆಗೆ ಸಾಥ್ ನೀಡುತ್ತಿದ್ದರು. ಆದರೆ 40 ವರ್ಷದ ಹಿಂದೆ ಮುಕೇಶ್ ಅಂಬಾನಿ ಮಾತನಾಡಿಸುವ ರೀತಿಗೂ, ಇಂದಿಗೂ ಯಾವುದೇ ವ್ಯತ್ಯಾಸವಿಲ್ಲ. ನಾನು ಭೇಟಿಯಾದಾಗ ಉಭಯಕುಶಲೋಪರಿ ಮಾತನಾಡುತ್ತಾರೆ. ನನ್ನ ಕುಟುಂಬದ ಕುರಿತು ಕೇಳುತ್ತಾರೆ. ಆರೋಗ್ಯದ ಕುರಿತು ಮಾತನಾಡಿಸುತ್ತಾರೆ. ಅಂದು, ಇಂದು ಮುಕೇಶ್ ಅಂಬಾನಿ ಮಾತು, ಪ್ರೀತಿ, ಕಾಳಜಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೀಗ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ. ಆದರೆ ಈಗಲೂ ಮುಕೇಶ್ ಅಂಬಾನಿ ಅತ್ಯಂತ ಸರಳ ವ್ಯಕ್ತಿ ಎಂದು ವೀಣಾ ನಾಗ್ಡಾ ಹೇಳಿದ್ದಾರೆ.

ಮುಕೇಶ್ ಅಂಬಾನಿ ಭೇಟಿಯಾಗಿರುವ ಎಲ್ಲರೂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಮ್ಮೆ ಭೇಟಿಯಾಗಿ ಮಾತನಾಡಿದರೆ ಸಾಕು ಮುಕೇಶ್ ಅಂಬಾನಿ ಮತ್ತೆ ಭೇಟಿಯಾದಾಗ ಅದೇ ಅತ್ಮೀಯತೆಯಲ್ಲಿ ಮಾತನಾಡುತ್ತಾರೆ. ಅವರೆಷ್ಟೇ ಬ್ಯೂಸಿ ಇದ್ದರೂ ಪ್ರತಿಯೊಬ್ಬರನ್ನು ಮಾತನಾಡಿಸುತ್ತಾರೆ. ಇದು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ವೀಣಾ ನಾಗ್ದಾ ಹೇಳಿದ್ದಾರೆ.

ವೀಣಾ ನಾಗ್ದಾ ಮುಕೇಶ್ ಅಂಬಾನಿ ಹಾಗೂ ಕುಟುಂಬದ ಸದಸ್ಯರ ಜೊತೆಗಿನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಮುಕೇಶ್ ಅಂಬಾನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮುಕೇಶ್ ಅಂಬಾನಿ ಉದ್ಯಮ ಸಾಮ್ರಾಜ್ಯ ವತ್ತಷ್ಟು ವಿಸ್ತರಿಸಲಿ, ಈ ಮೂಲಕ ಯುವ ಸಮುೂಹಕ್ಕೆ ಉದ್ಯೋಗ ಮತ್ತಷ್ಟು ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.

ಪಾದಯಾತ್ರೆ ನಡುವೆ ಮಹಿಳೆ ಕೊಟ್ಟ 101 ರೂ ಕಾಣಿಕೆ ಸ್ವೀಕರಿಸಿದ ಅನಂತ್ ಅಂಬಾನಿ