ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಚಿಕ್ಕಮಕ್ಕಳನ್ನು ಹಲವು ಚಟವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ, ಸೂಕ್ತ ನಿಯಮ ರೂಪಿಸಬೇಕೆಂದು ರಾಜ್ಯಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಆಗ್ರಹಿಸಿದ್ದಾರೆ.
ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' ನಂತಹ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಬಳಸಲು ಮುಂದಾಗಿದೆ. 1930 ಸಹಾಯವಾಣಿಯಲ್ಲಿ ದೂರುಗಳ ತ್ವರಿತ ಸ್ವೀಕಾರಕ್ಕೆ ಎಐ ಪಾಡ್ ಮತ್ತು ಹಣ ವರ್ಗಾವಣೆಗೆ ಬಳಸುವ ನಕಲಿ ಬ್ಯಾಂಕ್ ಖಾತೆ ಪತ್ತೆಹಚ್ಚಲು ಎಐ ತಂತ್ರಜ್ಞಾನ.
ಪತ್ನಿ ಶಾಖರೆ ಖಲೀಲಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಾಮಿ ಶ್ರದ್ಧಾನಂದನಿಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಶಿಕ್ಷೆ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಯಾವುದೇ ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಲು ಸೂಚಿಸಿದೆ.
ಗೃಹರಕ್ಷಕ ದಳ ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಹೆಗಲುಕೊಟ್ಟು ಜಿಲ್ಲಾಡಳಿತಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಾರೆ.
Today December 6th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಇಂಡಿಯನ್ ಜಸ್ಟೀஸ் ಫೋರಂ ಸಮೀಕ್ಷೆಯ ಪ್ರಕಾರ, ನೊಂದವರಿಗೆ ನ್ಯಾಯ ನೀಡುವಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದು, ಸೈಬರ್ ಅಪರಾಧಗಳಿಗೆ ಕಡಿವಾಣ, ಕಾರಾಗೃಹ ಸುಧಾರಣೆ ಸೇರಿ ಇಲಾಖ ಹಲವು ಸಾಧನೆ
ಜಿಎಸ್ಟಿ ದರ ಬದಲಾವಣೆಯಿಂದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಶೇ.12ರಷ್ಟು ಬೆಳವಣಿಗೆ ದರವಿದ್ದರೆ, ಜಿಎಸ್ಟಿ ದರ ಬದಲಾವಣೆ ನಂತರದ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.3ರಷ್ಟು ಬೆಳವಣಿಗೆ ದರ
ರಾಜಧಾನಿ ಬೆಂಗಳೂರಿನಲ್ಲಿ ಮರ ಬಿದ್ದು ಆಗುತ್ತಿರುವ ಅನಾಹುತಗಳನ್ನು ತಡೆಯಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಪಾಯಕಾರಿ ಮರಗಳ ಸಮೀಕ್ಷೆ ನಡೆಸುತ್ತಿದೆ. ಕೇವಲ 15 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಅಪಾಯಕಾರಿ ಮರಗಳನ್ನು ಗುರುತಿಸಲಾಗಿದ್ದು, ಜನವರಿ ಅಂತ್ಯದೊಳಗೆ ಪೂರ್ಣ ವರದಿ ಸಿದ್ಧವಾಗಲಿದೆ.
ಡೊನಾಲ್ಡ್ ಟ್ರಂಪ್ ಹಾಗೂ ನ್ಯಾಟೋ ಕೂಟಕ್ಕೆ ಪರೋಕ್ಷ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮುಂದಿನ 5 ವರ್ಷಗಳ ಕಾಲ ವ್ಯಾಪಾರ, ಇಂಧನ, ಆರ್ಥಿಕ, ಪರಮಾಣು- ಮುಂತಾದ ಪರಸ್ಪರ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆ.
ಪೈಲಟ್ಗಳ ಕೊರತೆಯಿಂದ ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬ ಮುಂದುವರಿದಿದ್ದು, ಶುಕ್ರವಾರ 1000ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡವು. ಅಂದರೆ ಇಂಡಿಗೋ ನಿತ್ಯ ನಡೆಸುವ 2300 ಸಂಚಾರದ ಪೈಕಿ ಅರ್ಧಕ್ಕರ್ಧ ಸಂಚಾರ ರದ್ದಾಗಿದೆ.