ಪೂರ್ವಜರ ಊರಿಗೆ ಭೇಟಿ ನೀಡಿ ಪೂರ್ವಾಶ್ರಮದ ತಾಯಿಯ ಭೇಟಿ ಮಾಡಿದ ಉತ್ತರ ಪ್ರದೇಶ ಸಿಎಂ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರಾಖಂಡ್‌ನಲ್ಲಿರುವ ತಮ್ಮ ಪೂರ್ವಜರ ಊರಾದ ಪಂಚೂರ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪೂರ್ವಾಶ್ರಮದ ತಾಯಿಯನ್ನು ಭೇಟಿಯಾಗಿ, ಊರಿನ ಮಕ್ಕಳೊಂದಿಗೆ ಬೆರೆತು, ತಮ್ಮ ಸರಳತೆಯಿಂದ ಗ್ರಾಮಸ್ಥರ ಮನಗೆದ್ದರು.

ಪೂರ್ವಾಶ್ರಮದ ತಾಯಿಯನ್ನು ಭೇಟಿ ಮಾಡಿದ ಯೋಗಿ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಪೂರ್ವಜರ ಊರಿಗೆ ಭೇಟಿ ನೀಡಿದ್ದು, ಪೂರ್ವಾಶ್ರಮದ ತಾಯಿಯನ್ನು ಇದೇ ವೇಳೆ ಭೇಟಿ ಮಾಡಿದ್ದಾರೆ. ಯೋಗಿಯವರು ತಮ್ಮ ಮೂಲ ಊರಿನ ಮಕ್ಕಳ ಜೊತೆ ಕಾಲ ಕಳೆಯುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಾಖಂಡ್‌ನ ಪಂಚೂರ್‌ಗೆ ಭೇಟಿ ನೀಡಿದ ಸಿಎಂ ಆದಿತ್ಯನಾಥ್
ವೈರಲ್ ಆದ ವೀಡಿಯೋಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಪುಟ್ಟ ಮಕ್ಕಳ ಜೊತೆ ಕಾಲ ಕಳೆದಿದ್ದಲ್ಲದೇ ಅವರಿಗೆ ಚಾಕೋಲೇಟ್ ನೀಡಿದ್ದಾರೆ. ಅಂದಹಾಗೆ ಸಿಎಂ ಆಧಿತ್ಯನಾಥ್ ಅವರ ಪೂರ್ವಜರ ಊರು ಉತ್ತರಾಖಂಡ್‌ನ ಪಂಚೂರ್ ಎಂಬ ಹಳ್ಳಿಯಲ್ಲಿದೆ. ಬಹಳ ವರ್ಷಗಳ ನಂತರ ಅಲ್ಲಿಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅಲ್ಲಿನ ಜನರ ಕ್ಷೇಮ ವಿಚಾರಿಸಿದರು.
ಊರಿನ ಹಿರಿಯರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಯೋಗಿ
ಶುಕ್ರವಾರ ರಾತ್ರಿ ಉತ್ತರಾಖಂಡ್‌ನಲ್ಲಿ ಉಳಿದ ಸಿಎಂ ಯೋಗಿ ಆದಿತ್ಯನಾಥ್ ಮರುದಿನ ಬೆಳಗ್ಗೆ ತಮ್ಮ ಊರಿನ ಹಿರಿಯರನ್ನು ಭೇಟಿ ಮಾಡಿ ಅವರ ಯೋಗ ಕ್ಷೇಮವನ್ನು ವಿಚಾರಿಸಿ ಬಳಿಕ ಅಲ್ಲಿನ ಮಕ್ಕಳ ಜೊತೆ ಮಾತುಕತೆ ನಡೆಸಿದರು.
ಮಕ್ಕಳಿಗೆ ಚಾಕೋಲೇಟ್ ನೀಡಿದ ಯೋಗಿ
ಗ್ರಾಮದ ಮಕ್ಕಳ ಜೊತೆ ಮಾತುಕತೆ ನಡೆಸಿದ ಅವರು ಅವರಿಗೆ ಚಾಕೋಲೇಟ್ ನೀಡಿದರು. ಒಂದು ಮಗುವನ್ನು ಕರೆದು ತೊಡೆ ಮೇಲೆ ಕೂರಿಸಿಕೊಂಡ ಸಿಎಂ ಅತನ ಜೊತೆ ಪ್ರೀತಿಯಿಂದ ಆಟವಾಡಿದರು. ಮಕ್ಕಳು ಕೂಡ ಅಷ್ಟೇ ಪ್ರೀತಿಯಿಂದ ಅವರ ಜೊತೆ ಮಾತನಾಡಿದರು. ಗ್ರಾಮಸ್ಥರು ಸಿಎಂ ಜೊತೆ ಖುಷಿ ಖುಷಿಯಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಇತ್ತೀಚಿನ ಸುದ್ದಿ: ಕ್ಲಾಸಲ್ಲೇ ವಿದ್ಯಾರ್ಥಿನಿಗೆ ಗುಂಡಿಕ್ಕಿ ಹತ್ಯೆ: ಅದೇ ಪಿಸ್ತೂಲ್‌ನಿಂದ ಗುಂಡಿಕ್ಕಿಕೊಂಡು ತಾನೂ ಸಾವಿಗೆ ಶರಣಾದ ಕಾನೂನು ವಿದ್ಯಾರ್ಥಿ
ತಾಯಿ ಜೊತೆ ಸಿಎಂ ಯೋಗಿ
ಶನಿವಾರ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಿಎಂ ಅಲ್ಲಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿಯವರ ವಿನಮ್ರತೆ, ಸರಳತೆ ಮತ್ತು ಆತ್ಮೀಯತೆಯನ್ನು ಕಂಡು ಸ್ಥಳೀಯ ನಿವಾಸಿಗಳು ತೀವ್ರ ಭಾವುಕರಾದರು.
ಇತ್ತೀಚಿನ ಸುದ್ದಿ: ಬೆಚ್ಚಗಾಗಲು ಇನ್ಕ್ಯುಬೇಟರ್‌ಲ್ಲಿಟ್ಟ ಮಗು ಸಜೀವ ದಹನ; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಆಗಷ್ಟೇ ಜನಿಸಿದ ನವಜಾತ ಶಿಶು ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

