ಅನೇಕರು ತಮ್ಮ ಹಳೆಯ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿರುತ್ತಾರೆ. ಇಂತಹ 10 ವರ್ಷಕ್ಕೂ ಹೆಚ್ಚು ಕಾಲದ ಕ್ಲೇಮ್ ಮಾಡದ ಠೇವಣಿಗಳನ್ನು ಮರಳಿ ಪಡೆಯಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) UDGAM ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಪೋರ್ಟಲ್ ಮೂಲಕ ನಿಮ್ಮ ಹಣವನ್ನು ಪತ್ತೆಹಚ್ಚbhudu.   

ಕೆಲವೊಮ್ಮೆ ಬ್ಯಾಂಕ್​ ಖಾತೆಗಳನ್ನು ತೆರೆದು ಅದನ್ನು ಮರೆಯುವುದು ಇದೆ. ಇನ್ನು ಕೆಲವು ಬಾರಿ ನಿಮ್ಮ ಹಿರಿಯರು ಅಥವಾ ಮನೆಯ ಇನ್ನಾರೋ ಬ್ಯಾಂಕ್​ ಖಾತೆಯಲ್ಲಿ ಹಣವನ್ನು ಇಟ್ಟರೂ ಅದು ನಿಮಗೆ ಗೊತ್ತಿರುವುದಿಲ್ಲ ಅಥವಾ ಆ ಹಣವನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವ ಅರಿವು ಇರುವುದಿಲ್ಲ. 10 ವರ್ಷದ ಮೇಲಾಗಿ ಹೋಯ್ತು, ಇನ್ನು ಆ ಹಣ ನಮಗೆ ಸಿಗುವುದಿಲ್ಲ ಎನ್ನುವ ಚಿಂತೆಯಿಂದಲೂ ಆ ಹಣದ ಗೋಜಿಗೆ ಹೋಗದೇ ಇರಬಹುದು. ಸ್ವಲ್ಪ ಮೊತ್ತದ ಹಣವಾದರೆ ಬ್ಯಾಂಕ್​ಗೆ ಅಲೆಯುವುದು ಯಾಕೆ ಎಂದು ಸುಮ್ಮನೇ ಇರಬಹುದು ಇಲ್ಲವೇ, ಯಾವ ಬ್ಯಾಂಕ್​ನಲ್ಲಿ ಎಷ್ಟು ಹಣವಿದೆ, ಅದು ಎಷ್ಟು ಹಳೆಯದ್ದಾಗಿದೆ ಎನ್ನುವುದರ ಅರಿವೇ ಇಲ್ಲದೇ ದುಡ್ಡು ಇದ್ದರೂ ಅದು ನಿಮಗೆ ಸೇರದೇ ಹೋಗಬಹುದು.

ಆರ್​ಬಿಐನಿಂದ ಮಾರ್ಗ

ಇಂಥ ಎಲ್ಲಾ ಸನ್ನಿವೇಶಗಳಲ್ಲಿಯೂ ಇದೀಗ ಭಾರತೀಯ ರಿಸರ್ವ್​ ಬ್ಯಾಂಕ್​ ಒಂದು ಒಳ್ಳೆಯ ಮಾರ್ಗವನ್ನು ಹೇಳಿದೆ. 10 ವರ್ಷ ಮೇಲ್ಪಟ್ಟ ಖಾತೆಯಾಗಿದ್ದರೂ, ಅದು ನಿಷ್ಕ್ರಿಯವಾಗಿದೆ ಎನ್ನುವ ಚಿಂತೆ ಬೇಡ. ಬ್ಯಾಂಕ್​ ಖಾತೆ ತೆರೆದು ಒಂದಿಷ್ಟು ಹಣ ಹಾಕಿದ್ದು ಮರೆತುಹೋದರೂ ಚಿಂತೆ ಬೇಡ. ಎಲ್ಲ ಹಣವನ್ನೂ ನೀವೀಗ ಮರಳಿ ಪಡೆಯಬಹುದಾಗಿದೆ. ಇದಾಗಲೇ ಕೋಟ್ಯಂತರ ರೂಪಾಯಿ ಹಣದ ಪಾವತಿ ಆಗದ ಕಾರಣ, ಆರ್​ಬಿಐ ಕಳೆದ ಅಕ್ಟೋಬರ್​ನಿಂದ ಈ ತಿಂಗಳ ಅಂತ್ಯದವರೆಗೆ ಶಿಬಿರವನ್ನು ಹಮ್ಮಿಕೊಂಡಿದ್ದು, ಹಣವನ್ನು ಮರು ಪಾವತಿ ಮಾಡುವ ಕಾರ್ಯಕ್ಕೆ ಮುಂದಾಗಿದೆ (Unclaimed Deposits Gateway to Access Information)

ನೀವು ಮಾಡಬೇಕಾಗಿರುವುದು ಇಷ್ಟೇ

ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನ UDGAM ಪೋರ್ಟಲ್​ಗೆ ಭೇಟಿ ಕೊಟ್ಟು, ನಿಮ್ಮ ಅಥವಾ ನಿಮ್ಮ ಕುಟುಂಬದವರ ನಿಷ್ಕ್ರಿಯ ಖಾತೆಗಳಲ್ಲಿರುವ ಹಣವನ್ನು ಹುಡುಕಬಹುದು ಮತ್ತು ಬ್ಯಾಂಕ್‌ಗೆ ಭೇಟಿ ನೀಡಿ KYC ದಾಖಲೆಗಳೊಂದಿಗೆ ಹಣವನ್ನು ಮರಳಿ ಪಡೆಯಬಹುದು.

ಹಂತಗಳು:

- UDGAM ಪೋರ್ಟಲ್ ಭೇಟಿ: udgam.rbi.org.in ಗೆ ಭೇಟಿ ನೀಡಿ. (https://udgam.rbi.org.in)

- ಮಾಹಿತಿ ಹುಡುಕಿ: ನಿಮ್ಮ ಹೆಸರು, ಪ್ಯಾನ್, ಆಧಾರ್, ಅಥವಾ ಮೊಬೈಲ್ ನಂಬರ್ ನಮೂದಿಸಿ.

- ಬ್ಯಾಂಕ್‌ಗೆ ಹೋಗಿ: ಯಾವ ಬ್ಯಾಂಕ್​ನಲ್ಲಿ ಹಣ ಇದೆ ಎನ್ನುವುದನ್ನು ಇಲ್ಲಿ ಪತ್ತೆ ಮಾಡಿ. ಹಣ ಪತ್ತೆಯಾದರೆ, ಆ ಬ್ಯಾಂಕ್ ಶಾಖೆಗೆ ಹೋಗಿ.

- KYC ಸಲ್ಲಿಸಿ: ಆಧಾರ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತಿನ ದಾಖಲೆಗಳನ್ನು ಸಲ್ಲಿಸಿ.

- ಹಣ ಪಡೆಯಿರಿ: ಬ್ಯಾಂಕ್ ಪರಿಶೀಲಿಸಿ, ಬಡ್ಡಿಯೊಂದಿಗೆ ಹಣವನ್ನು ನಿಮಗೆ ಹಿಂತಿರುಗಿಸುತ್ತದೆ.

ಹೆಚ್ಚುವರಿ ಮಾಹಿತಿ:

10 ವರ್ಷ ಹಳೆಯ ಖಾತೆಗಳು: 10 ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳ ಹಣ RBI ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾವಣೆಯಾಗಿರುತ್ತದೆ, ಆದರೆ ಅದನ್ನು ನೀವು ಕ್ಲೇಮ್ ಮಾಡಬಹುದು.

ವಿಶೇಷ ಶಿಬಿರಗಳು: ಅಕ್ಟೋಬರ್-ಡಿಸೆಂಬರ್ 2025 ರವರೆಗೆ RBI ವಿಶೇಷ ಶಿಬಿರಗಳನ್ನು ಆಯೋಜಿಸಿದೆ.

ಮರಣ ಹೊಂದಿದ್ದರೆ: ನೀವು ಖಾತೆದಾರರಲ್ಲದಿದ್ದರೆ, ಕಾನೂನುಬದ್ಧ ಉತ್ತರಾಧಿಕಾರಿಗಳು ಮರಣ ಪ್ರಮಾಣಪತ್ರದೊಂದಿಗೆ ಕ್ಲೇಮ್ ಮಾಡಬಹುದು.