'ನನ್ನ ಮಗಳು ಆರಾಧ್ಯ ಇನ್ನೂ ಚಿಕ್ಕವಳು.. ಅವಳ ಹತ್ತಿರ ಮೊಬೈಲ್ ಇಲ್ಲ.. ಒಂದು ವೇಳೆ ಅವಳು ಮನೆಯಲ್ಲಿ ಯಾರಾದ್ದಾದರೂ ಮೊಬೈಲ್ ತೆಗದು ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ?' ಎಂದಿದ್ದಾರೆ ಅಭಿಷೇಕ್ ಬಚ್ಚನ್.. ಈ ಸ್ಟೋರಿ ನೋಡಿ!

Aishwarya Rai-Abhishek Bachchan Divorce News

ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧ ಸರಿಯಿಲ್ಲ ಎಂಬ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಈ ಚರ್ಚೆಗಳ ಬಗ್ಗೆ ಅಭಿಷೇಕ್ ಬಚ್ಚನ್ ಅಥವಾ ಐಶ್ವರ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಮಧ್ಯೆ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಚೇದನ ಪ್ರಕ್ರಿಯೆ ನಡೆಯುತ್ತಿದೆ ಎಂದೇ ಹೇಳಲಾಗಿತ್ತು. ಆದರೆ, ಅದಕ್ಕೆ ಅಧಿಕೃತವಾಗಿ ನಟ, ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಮಾತ್ರ ವಿಮಾನ ನಿಲ್ದಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಬಚ್ಚನ್ ಕುಟುಂಬದ ಯಾವುದೇ ಸದಸ್ಯರ ಜೊತೆ ಅವರು ಯಾವತ್ತೂ ಹೊರಗಡೆ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಈ ಕಾರಣಕ್ಕಾಗಿಯೇ ಇಂಥ ಸುದ್ದಿ ಹಬ್ಬಿದೆ ಎನ್ನಬಹುದು.

ಅನಂತ್ ಅಂಬಾನಿಯವರ ಮದುವೆಗೆ ಸಹ, ಐಶ್ವರ್ಯ ರೈ ಬಚ್ಚನ್ ಕುಟುಂಬದೊಂದಿಗೆ ಬರಲಿಲ್ಲ, ಅವರು ತಮ್ಮ ಮಗಳೊಂದಿಗೆ ಪ್ರತ್ಯೇಕವಾಗಿ ಬಂದರು. ಆ ಸಮಯದಲ್ಲಿ, ಬಚ್ಚನ್ ಕುಟುಂಬವು ಹೊರಗೆ ಹಬ್ಬಿರುವ ವಿಚ್ಚೇದನ ಚರ್ಚೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈಗ, ಮೊದಲ ಬಾರಿಗೆ, ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಜೊತೆಗಿನ ವಿಚ್ಚೇದನ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್ ಬಚ್ಚನ್ ಇತ್ತೀಚೆಗೆ ಪೀಪಿಂಗ್ ಮೂನ್‌ಗೆ ಸಂದರ್ಶನ ನೀಡಿದ್ದು, ಅಲ್ಲಿ ನಿಮ್ಮ ಮಗಳು ಆರಾಧ್ಯ ಅವರಿಗೆ ಐಶ್ವರ್ಯಾ ರೈ ಜೊತೆಗಿನ ನಿಮ್ಮ ಸಂಬಂಧದ ಬಗ್ಗೆ ಪ್ರಸ್ತುತ ಹರಡುತ್ತಿರುವ ವದಂತಿಗಳ ಬಗ್ಗೆ ಏನಾದರೂ ತಿಳಿದಿದೆಯೇ ಎಂದು ಅಭಿಷೇಕ್ ಅವರನ್ನು ಕೇಳಲಾಯಿತು.

ಇದಕ್ಕೆ ಅಭಿಷೇಕ್ ಬಚ್ಚನ್ ಇಲ್ಲ ಎಂದು ಉತ್ತರಿಸಿದರು. ಆಗ ವಿಚಾರ ತಿಳಿದ ಅಭಿಷೇಕ್.. ಐಶ್ವರ್ಯಾ ರೈ ಅವರೊಂದಿಗಿನ ವಿಚ್ಚೇದನದ ಬಗ್ಗೆ ಮಾತನಾಡಿ, 'ಇದು ಅಸಂಬದ್ಧ, ಅಸಂಬದ್ದ ಮತ್ತು ತಪ್ಪು'.. ಎಂದು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಅದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ ಇನ್ನಷ್ಟು ಮಾತನಾಡಿದ ಅವರು.. 'ನನ್ನ ಮಗಳು ಆರಾಧ್ಯ ಇನ್ನೂ ಚಿಕ್ಕವಳು.. ಅವಳ ಹತ್ತಿರ ಮೊಬೈಲ್ ಇಲ್ಲ.. ಒಂದು ವೇಳೆ ಅವಳು ಮನೆಯಲ್ಲಿ ಯಾರಾದ್ದಾದರೂ ಮೊಬೈಲ್ ತೆಗದು ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ?' ಎಂದು ಅಭಿಷೇಕ್ ಎಲ್ಲದರ ಬಗ್ಗೆಯೂ ನೇರವಾಗಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಅವರ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ..