ವಿರಾಟ್ ಕೊಹ್ಲಿ ಆಕಸ್ಮಿಕವಾಗಿ ನಟಿ ಅವನೀತ್ ಕೌರ್ ಚಿತ್ರಕ್ಕೆ ಲೈಕ್ ಒತ್ತಿ, ನಂತರ ಸ್ಪಷ್ಟನೆ ನೀಡಿದ ಘಟನೆ ಅವನೀತ್‌ಗೆ ಖ್ಯಾತಿ ತಂದುಕೊಟ್ಟಿತು. ಕೊಹ್ಲಿ ಟೆಸ್ಟ್ ನಿವೃತ್ತಿ ವೇಳೆ ಅವನೀತ್ "ಕೊಹ್ಲಿ" ಎಂದು ಕೂಗಿ, ಹಾರ್ಟ್ ಎಮೋಜಿ, ಫ್ಲೈಯಿಂಗ್ ಕಿಸ್ ಮಾಡಿದ ವಿಡಿಯೋ ವೈರಲ್ ಆಯಿತು. ಕೊಹ್ಲಿ ಪತ್ನಿ ಅನುಷ್ಕಾ ರೆಸ್ಟೋರೆಂಟ್‌ನಲ್ಲಿ ಕೊಹ್ಲಿ ಕೈ ನಿರ್ಲಕ್ಷಿಸಿದ ವಿಡಿಯೋ ಕೂಡ ವೈರಲ್ ಆಗಿದ್ದು, ಜನರು ಈ ಎರಡು ಘಟನೆಗಳನ್ನು ಜೋಡಿಸಿ ಚರ್ಚಿಸುತ್ತಿದ್ದಾರೆ.

ಬಾಲಿವುಡ್​ ನಟಿ ಅವನೀತ್​ ಕೌರ್ ಈಚೆಗೆ ಸಕತ್​ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಕ್ರಿಕೆಟಿಗ ವಿರಾಟ್​ ಕೊಹ್ಲಿಯ ನಿದ್ದೆಗೆಡಿಸಿರೋ ಬೆಡಗಿ ಈಕೆ. ಈಕೆಯ ಫ್ಯಾನ್‌ ಪೇಜ್‌ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ ಚಿತ್ರವೊಂದಕ್ಕೆ ವಿರಾಟ್‌ ಕೊಹ್ಲಿ ಲೈಕ್‌ ಒತ್ತಿದ್ದರು. ಇದೇ ಭಾರಿ ಸದ್ದು ಮಾಡಿತ್ತು. ಅದು ಎಷ್ಟರಮಟ್ಟಿಗೆ ಟ್ರೋಲ್​ ಆಗೋಯ್ತು ಎಂದರೆ ಕೊನೆಗೆ, ಖುದ್ದು ವಿರಾಟ್‌ ಕೊಹ್ಲಿ ಅವರೇ ತಮ್ಮ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ ಅಧಿಕೃತ ಸ್ಪಷ್ಟೀಕರಣ ನೀಡುವ ಹಾಗಾಯಿತು. ಅವರು 'ಲೈಕ್'ಗೆ ಇನ್‌ಸ್ಟಾಗ್ರಾಮ್ ಅಲ್ಗಾರಿದಮ್ ಅನ್ನು ದೂಷಣೆ ಮಾಡಿದ್ದು, "ಇದರ ಹಿಂದೆ ಯಾವುದೇ ಉದ್ದೇಶವಿಲ್ಲ" ಎಂದು ತಿಳಿಸುವ ಹಾಗಾಗೋಯ್ತು! ಅಲ್ಗಾರಿದಮ್ ತಪ್ಪಾಗಿ ನನ್ನ ಲೈಕ್‌ಅನ್ನು ಇರಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ. ನಿಮ್ಮ ತಿಳಿವಳಿಕೆಗೆ ಧನ್ಯವಾದಗಳು' ಎಂದು ಅವರು ಬರೆದುಕೊಂಡರು. 

ಅದೇನು ಮಿಸ್ಟೆಕ್​ ಆಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ನಟಿ ಅವನೀತ್​ ಸ್ಟಾರ್​ ರಾತ್ರೋ ರಾತ್ರಿ ಬದಲಾಗೋಯ್ತು. ಸೋಷಿಯಲ್​ ಮೀಡಿಯಾದಲ್ಲಿ ಇವರು ದಿಢೀರ್​ ಬೇಡಿಕೆ ಏರಿಸಿಕೊಂಡರು. ಇವರ ಫಾಲೋವರ್ಸ್​ ಸಂಖ್ಯೆ ತ್ರಿಬಲ್​ ಆಗೋಯ್ತು. ಈಕೆ ಯಾರು ಇರಬಹುದು ಎಂದು ತಡಕಾಟವೂ ಶುರುವಾಯಿತು. ಎಷ್ಟೆಂದರೂ ಕ್ರಿಕೆಟಿಗರು ಮತ್ತು ಸಿನಿಮಾ ಮಂದಿ ಎಂದರೆ ನಮ್ಮ ಜನರಿಗೆ ಬಲು ಪ್ರೀತಿ ಅಲ್ಲವೆ? ಅದಕ್ಕಾಗಿ ಇನ್ನಿಲ್ಲದಂತೆ ಬೇಡಿಕೆ ಕುದುರಿಸಿಕೊಂಡರು ನಟಿ. ಇದೀಗ, ಇಷ್ಟು ಮಾಡಿದ ಕ್ರಿಕೆಟನಿಗೆ ಸಪೋರ್ಟ್​ ಮಾಡದಿದ್ದರೆ ಹೇಗೆ ಹೇಳಿ. ಅದಕ್ಕಾಗಿಯೇ ಅವನೀತ್​ ಈಗ ಫ್ಲೈಯಿಂಗ್​ ಕಿಸ್​ ಕೊಟ್ಟು ಹಾರ್ಟ್​ ಶೇಪ್​ ತೋರಿಸುವ ಮೂಲಕ ಮತ್ತಷ್ಟು ಮುನ್ನೆಲೆಗೆ ಬಂದಿದ್ದಾರೆ. 

​'ಬಂಟಿ ನಿನ್ನ ಸೋಪ್​ ಸ್ಲೋನಾ?' ಎಂದ ಮಾದಕ ನಟಿ ವಿರಾಟ್​ ಕೊಹ್ಲಿ ನಿದ್ದೆಗೆಡಿಸಿದ್ಯಾಕೆ?

 ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಈ ಸಂದರ್ಭದಲ್ಲಿ ಹಲವರು ಕೊಹ್ಲಿ ಮುಂದಿನ ಭವಿಷ್ಯಕ್ಕೆ ಶುಭಾಶಯ ಹೇಳುತ್ತಿರುವ ನಡುವೆಯೇ, , ಅವನೀತ್ ಕೌರ್ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಶೆಹ್ನಾಜ್ ಗಿಲ್ ಮತ್ತು ಮುನಾವರ್ ಫಾರೂಕಿ ಸೇರಿದಂತೆ ಅವರ ಸ್ನೇಹಿತರೊಂದಿಗೆ ಕ್ರಿಕೆಟಿಗನಿಗೆ ಹುರಿದುಂಬಿಸುತ್ತಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ, ಅವನೀತ್ ಕೌರ್ ಪೂರ್ಣ ಉತ್ಸಾಹದೊಂದಿಗೆ 'ಕೊಹ್ಲಿ, ಕೊಹ್ಲಿ!' ಎಂದು ಕೂಗುತ್ತಿರುವುದು ಕಂಡುಬಂದಿದೆ. ಈ ಕ್ಲಿಪ್‌ನಲ್ಲಿ ಮುನಾವರ್ ಫಾರೂಕಿ ಮತ್ತು ಶೆಹನಾಜ್ ಗಿಲ್ ಕೂಡ ಅವರೊಂದಿಗೆ ಇದ್ದಾರೆ. ಈ ಸಮಯದಲ್ಲಿ, ಅವನೀತ್ ತನ್ನ ಕೈಗಳಿಂದ ವಿರಾಟ್ ಗಾಗಿ ಹೃದಯದ ಎಮೋಜಿ ಮಾಡುವುದನ್ನು ಕಾಣಬಹುದು. ಕೊನೆಯಲ್ಲಿ ಫ್ಲೈಯಿಂಗ್ ಕಿಸ್ ಕೂಡ ನೀಡುವುದನ್ನು ನೋಡಬಹುದು. 

ಇದೀಗ ಇದು ಭಾರಿ ಸದ್ದು ಮಾಡುತ್ತಿದೆ. ಇದರ ಅದರ ಜೊತೆಗೇ ಇನ್ನೊಂದು ವಿಡಿಯೋ ವೈರಲ್​ ಆಗುತ್ತಿದೆ. ಅದರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬೆಂಗಳೂರಿನ ರೆಸ್ಟೋರೆಂಟ್‌ಗೆ ಬಂದಿದ್ದರು. ಆ ಸಮಯದಲ್ಲಿ ಕಾರಿನ ಬಾಗಿಲು ತೆರೆದ ಬಳಿಕ ಕೊಹ್ಲಿ ಪತ್ನಿಗೆ ಕೈ ಚಾಚಿದ್ದಾರೆ. ಆದರೆ, ಅನುಷ್ಕಾ ಅವರನ್ನು ನಿರ್ಲಕ್ಷ್ಯ ಮಾಡಿದಂತೆ, ಪತಿಯನ್ನು ಲೆಕ್ಕಿಸದೆಯೇ ತರಾತುರಿಯಲ್ಲಿ ರೆಸ್ಟೋರೆಂಟ್ ಒಳಗೆ ಹೋಗಿರುವುದು ಕಂಡುಬಂದಿದೆ. ಇದು ನವನೀತ್​ ಕೌರ್​ಗೆ ಕೊಹ್ಲಿ ಲೈಕ್​ ಕೊಟ್ಟ ಮೇಲೆ ಕಳೆದ ವಾರ ನಡೆದಿರುವ ಘಟನೆ. ಇದಕ್ಕೂ, ಲೈಕ್​ಗೂ ಸಂಬಂಧ ಕಲ್ಪಿಸಿ ವಿಡಿಯೋ ಹರಿಬಿಡಲಾಗಿತ್ತು. ಇದೀಗ ಫ್ಲೈಯಿಂಗ್​ ಕಿಸ್​ಗೂ ಇದಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ! 

ಸ್ವಮೂತ್ರ ಅಮೃತಕ್ಕೆ ಸಮ... ಎನ್ನುತ್ತಲೇ ಕುಡಿಯುವ ಬಗೆ, ಪ್ರಯೋಜನ ತಿಳಿಸಿದ ನಟಿ ಅನು ಅಗರ್​ವಾಲ್

View post on Instagram