ಬಾಲಿವುಡ್ ಕಿಂಗ್ ಖಾನ್ ಶಾರುಖ್ ವಿಡಿಯೋ ಒಂದು ಸದ್ಯ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ. ಶಾರುಖ್ ಜೊತೆ ವಧು ಡಾನ್ಸ್ ಮಾಡ್ಲಿಲ್ಲ, ವಿಚಿತ್ರ ಬೇಡಿಕೆ ಇಟ್ಟು ಬಾದ್ ಶಾಗೆ ಅವಮಾನ ಮಾಡಿದ್ದಾಳೆ ಎನ್ನುವ ಆರೋಪ ಕೇಳಿ ಬರ್ತಿದೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ಕೆಲ ದಿನಗಳ ಹಿಂದಷ್ಟೆ ಬಿಲಿಯನೇರ್ ಕ್ಲಬ್ ಸೇರಿದ್ದಾರೆ. 12,490 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಶತಕೋಟ್ಯಾಧಿಪತಿಯಾಗಿರುವ ಶಾರುಖ್ ಖಾನ್ ಈಗ್ಲೂ ಮದುವೆ ಮನೆಯಲ್ಲಿ ಪರ್ಫಾರ್ಮೆನ್ಸ್ ನೀಡೋದು ಬಿಟ್ಟಿಲ್ಲ. ಸಿನಿಮಾ, ಆಡ್ ಜೊತೆ ಶಾರುಖ್ ಖಾನ್ ಮೊದಲಿನಿಂದ್ಲೂ ಶ್ರೀಮಂತರ ಮದುವೆ, ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡಿ ಹಣ ಸಂಪಾದನೆ ಮಾಡ್ತಿದ್ದಾರೆ. 2004 ರಲ್ಲಿ ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಮಗಳ ಮದುವೆಯಲ್ಲಿ ಶಾರುಖ್ ಖಾನ್ ನೀಡಿದ್ದ ಕಾರ್ಯಕ್ರಮ ಚರ್ಚೆಯಾಗಿತ್ತು. ದೆಹಲಿಯಲ್ಲಿ ನಡೆದ ಶ್ರೀಮಂತರ ಮದುವೆ ಸಮಾರಂಭದಲ್ಲಿ ಶಾರುಖ್ ಡಾನ್ಸ್ ಮಾಡಿದ್ದು, ಈ ವಿಡಿಯೋ ಸಾಕಷ್ಟು ಗುಲ್ಲೆಬ್ಬಿಸಿದೆ. ಶಾರುಖ್ ಖಾನ್ ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಗಿದೆ.
ಶಾರುಖ್ ಖಾನ್ ಜೊತೆ ಡಾನ್ಸ್ ಮಾಡ್ಲಿಲ್ವ ವಧು?
ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಶ್ರೀಮಂತರ ಮನೆ ಮದುವೆಯಲ್ಲಿ ಶಾರುಖ್ ಖಾನ್ ತಮ್ಮ ಸಿನಿಮಾ ಹಾಡಿಗೆ ಸ್ಟೆಪ್ಸ್ ಹಾಕ್ತಿದ್ದಾರೆ. ಪಕ್ಕದಲ್ಲೇ ವಧು ನಿಂತಿದ್ದಾಳೆ. ಆದ್ರೆ ಶಾರುಖ್ ಖಾನ್ ಜೊತೆ ಆಕೆ ಡಾನ್ಸ್ ಮಾಡಲು ನಿರಾಕರಿಸಿದ್ದಾಳೆ ಎಂಬುದೇ ಇಲ್ಲಿನ ಹೈಲೈಟ್. ಆದ್ರೆ ಇಲ್ಲಿ ಶಾರುಖ್ ಜೊತೆ ಡಾನ್ಸ್ ಮಾಡೋಕೆ ವಧು ನಿರಾಕರಿಸಿಲ್ಲ ಎನ್ನುವ ಸತ್ಯವಿದೆ. ಶಾರುಖ್ ಜೊತೆ ವರ ಡಾನ್ಸ್ ಮಾಡ್ತಿದ್ದಾನೆ. ಅವರಿಬ್ಬರ ಮಧ್ಯೆ ವಧು ನಿಂತು ಡಾನ್ಸ್ ಎಂಜಾಯ್ ಮಾಡ್ತಿದ್ದಾಳೆ. ಆದ್ರೆ ವಿಡಿಯೋವನ್ನು ಕಟ್ ಮಾಡಿ ಪೋಸ್ಟ್ ಮಾಡಲಾಗಿದೆ ಎಂಬ ಸತ್ಯವನ್ನು ಮಾಧ್ಯಮಗಳು ಹೊರ ಹಾಕಿವೆ.
ಇನ್ನೊಂದು ವಿಡಿಯೋದಲ್ಲಿ ಏನಿದೆ?
ಶಾರುಖ್ ಖಾನ್ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ. ಸ್ಟೇಜ್ ಮೇಲೆ ನಿಂತಿರುವ ಶಾರುಖ್ ಖಾನ್ ಗೆ ಬೋಲೋ ಜುಬಾನ್ ಕೇಸರಿ ಡೈಲಾಗ್ ಹೇಳುವಂತೆ ಒತ್ತಾಯ ಮಾಡಲಾಗಿದೆ. ಆದ್ರೆ ಶಾರುಖ್ ಅದನ್ನು ನಿರಾಕರಿಸಿದ್ದಾರೆ. ಅದು ಜಾಹೀರಾತು. ಈ ಸ್ಟೇಜ್ ಮೇಲೆ ಹೇಳುವಂತಹದ್ದಲ್ಲ ಎಂದಿದ್ದಾರೆ. ಆದ್ರೂ ಹುಡುಗಿ ಬಿಡಲಿಲ್ಲ. ನನ್ನನ್ನು ಬ್ಯಾನ್ ಮಾಡ್ತಾರೆ ಅಂತ ನಗ್ತಾ, ಅವಳ ಬೇಡಿಕೆಯನ್ನು ಶಾರುಖ್ ಖಾನ್ ತಳ್ಳಿ ಹಾಕಿದ್ದಾರೆ. ಇಲ್ಲಿ ಶಾರುಖ್ ಮುಜುಗರಕ್ಕೊಳಗಾಗಿರೋದನ್ನು ನೀವು ಸ್ಪಷ್ಟವಾಗಿ ಕಾಣ್ಬಹುದು. ಈ ಎರಡೂ ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೊಳಕು ಪ್ಯಾಂಟ್ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್ ಆಗ್ತಾರಾ?
ನೆಟ್ಟಿಗರ ಕಮೆಂಟ್
ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಸ್ಟಾರ್ ಆಗಿರುವ ಶಾರುಖ್ ಖಾನ್ ಇಂಥ ಖಾಸಗಿ ಕಾರ್ಯಕ್ರಮಗಳಲ್ಲಿ ಹಣಕ್ಕಾಗಿ ಪಾಲ್ಗೊಳ್ಳುವುದು ನಾಚಿಕೆಗೇಡು. ಅವರು ಹಣಕ್ಕಾಗಿ ಬೇರೆ ವ್ಯವಹಾರ ಮಾಡ್ಬಹುದಿತ್ತು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಭಿಮಾನ ಕಳೆದುಕೊಳ್ತಿದ್ದಾರೆ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬಿಲಿಯನೇರ್ ಪಟ್ಟಿ ಸೇರಿದ್ಮೇಲೂ ಮದುವೆಯಲ್ಲಿ ಡಾನ್ಸ್ ಯಾಕೆ ಅನ್ನೋದು ಕೆಲ ಫ್ಯಾನ್ಸ್ ಪ್ರಶ್ನೆ. ಶಾರುಖ್ ಖಾನ್ ಕರೆಸಿ ಅವಮಾನ ಮಾಡಿದ್ದಾಳೆ ವಧು ಅನ್ನೋದು ಕಿಂಗ್ ಖಾನ್ ಫ್ಯಾನ್ಸ್ ಆರೋಪವಾದ್ರೆ ಮತ್ತೆ ಕೆಲವರು ವಧು ಪರ ಬ್ಯಾಟ್ ಬೀಸಿದ್ದಾರೆ. ಮದುವೆಯಲ್ಲಿ ವಧು ಡಾನ್ಸ್ ಮಾಡೋದು ಸೂಕ್ತವಲ್ಲ, ಆಕೆಗೆ ಡಾನ್ಸ್ ಬರದೆ ಇರ್ಬಹುದು, ಹಣ ಪಡೆದ ಶಾರುಖ್ ಡಾನ್ಸ್ ಮಾಡ್ಬೇಕೇ ವಿನಃ ವಧುವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನು ಜುಬಾನ್ ಕೇಸರಿ ವಿಡಿಯೋ ನೋಡಿದ ಜನರು, ವೇದಿಕೆ ಮೇಲೆ ಇಂಥ ಪ್ರಶ್ನೆ ಕೇಳಿ ಶಾರುಖ್ ಅವರನ್ನು ಮುಜುಗರಕ್ಕೀಡು ಮಾಡಲಾಗಿದೆ ಅಂತ ಆರೋಪ ಮಾಡಿದ್ದಾರೆ.


