"ನನ್ನ ಸ್ನೇಹಿತರೆಲ್ಲ 2026ಕ್ಕೆ ಜಗತ್ತೇ ಅಂತ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ರೆಸಲ್ಯೂಶನ್ ಮಾಡಿ ಏನು ಪ್ರಯೋಜನ? ಆದ್ದರಿಂದ ನಾನು ಯಾವುದೇ ನಿರ್ಧಾರಗಳನ್ನು ತಗೆದುಕೊಂಡಿಲ್ಲ" ಎಂದಿದ್ದಾರೆ. ಇನ್ನೂ ಏನೇನೋ ಹೇಳಿದ್ದಾರೆ..   ಈ ಸ್ಟೋರಿ ನೋಡಿ

ಅದಾ ಶರ್ಮಾ ಅವರ ‘ಡ್ಯೂಪ್’ ಅವತಾರಕ್ಕೆ ಫ್ಯಾನ್ಸ್ ಫಿದಾ! 

ಬೆಂಗಳೂರು: ಬಾಲಿವುಡ್‌ನ ವಿಭಿನ್ನ ಹಾಗೂ ತುಂಟ ನಟಿ ಎಂದೇ ಖ್ಯಾತಿ ಪಡೆದಿರುವ 'ದಿ ಕೇರಳ ಸ್ಟೋರಿ' ಸ್ಟಾರ್ ಅದಾ ಶರ್ಮಾ ಈಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಸಿನಿಮಾದ ಕಥೆಗಳಿಗಿಂತಲೂ ರೋಚಕವಾದ ವಿಷಯವೊಂದನ್ನು ಅವರು ಹಂಚಿಕೊಂಡಿದ್ದು, ಕೇಳಿದವರೆಲ್ಲ ಅಕ್ಷರಶಃ ದಂಗಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಅದಾ ಶರ್ಮಾ ಗೌಪ್ಯವಾಗಿ ಕೆಲಸ ಮಾಡುತ್ತಿದ್ದ ಆ ವಿಷಯ ಈಗ ಬಹಿರಂಗವಾಗಿದೆ. ಅದು ಬೇರೇನೂ ಅಲ್ಲ, ತಮ್ಮದೇ ಆದ ‘AI ತದ್ರೂಪು’ (AI Doppelganger)!

ಅವಾರ್ಡ್ ಪಡೆಯಲು ಹೋಗಿದ್ದು ಅದಾ ಅಲ್ಲ, ಅವರ AI ಅವತಾರ!

ಇತ್ತೀಚಿನ ಸಂದರ್ಶನವೊಂದರಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಅದಾ ಶರ್ಮಾ, "ನಾನು ಕಳೆದ ಐದು ವರ್ಷಗಳಿಂದ ನನ್ನಂತೆಯೇ ಕಾಣುವ ಮತ್ತು ಮಾತನಾಡುವ AI ತದ್ರೂಪನ್ನು ಸೃಷ್ಟಿಸುತ್ತಿದ್ದೇನೆ. ಇತ್ತೀಚೆಗೆ ನಡೆದ ಒಂದು ಪ್ರಶಸ್ತಿ ಸಮಾರಂಭಕ್ಕೆ ನನ್ನ ಪರವಾಗಿ ಅವಳನ್ನೇ ಕಳಿಸಿದ್ದೆ. ಅಚ್ಚರಿಯ ವಿಷಯವೆಂದರೆ, ಅಲ್ಲಿ ಸೇರಿದ ಯಾರಿಗೂ ಅವಳು ಅಸಲಿ ಅದಾ ಶರ್ಮಾ ಅಲ್ಲ ಎಂದು ಅನುಮಾನವೇ ಬರಲಿಲ್ಲ. ಎಲ್ಲರೂ ಅವಳನ್ನೇ ನಿಜವಾದ ಅದಾ ಎಂದು ನಂಬಿದ್ದರು!" ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಈ ವರ್ಷ ಆ AI ಅವತಾರವನ್ನು ಯಾವುದಾದರೂ ಸಿನಿಮಾದ ಶೂಟಿಂಗ್ ಸೆಟ್‌ಗೆ ಕಳಿಸಿ ನಟಿಸುವಂತೆ ಮಾಡಬೇಕು ಎಂಬ ಆಸೆ ಇತ್ತಂತೆ. ಆದರೆ ಆ ಒಂದು ಆಸೆ ಮಾತ್ರ ಈ ವರ್ಷ ಈಡೇರಲಿಲ್ಲ ಎಂದು ಅದಾ ಬೇಸರ ವ್ಯಕ್ತಪಡಿಸಿದ್ದಾರೆ.

2025ರ ವರ್ಷ ಒಂದು ಹಾರರ್ ಕಾಮಿಡಿ ಸಿನಿಮಾ ಇದ್ದಂತೆ!

2025ನೇ ವರ್ಷ ತಮಗೆ ಹೇಗಿತ್ತು ಎಂಬ ಪ್ರಶ್ನೆಗೆ ಅದಾ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. "ಈ ವರ್ಷವನ್ನು ನಾನು ಒಂದು 'ಜಾನರ್ ಬೆಂಡಿಂಗ್' ಸಿನಿಮಾಕ್ಕೆ ಹೋಲಿಸುತ್ತೇನೆ. ಇದರಲ್ಲಿ ಸ್ವಲ್ಪ ಡ್ರಾಮಾ ಇತ್ತು, ಸ್ವಲ್ಪ ಕಾಮಿಡಿ ಇತ್ತು, ಇನ್ನು ಸ್ವಲ್ಪ ಹಾರರ್ ಕೂಡ ಇತ್ತು. ಹಠಾತ್ ತಿರುವುಗಳು (Plot twists) ತುಂಬಿದ್ದವು. ಆದರೆ ಕೊನೆಗೆ ಹೀರೋಯಿನ್ ಬದುಕುಳಿದು, ತನ್ನ ಡೈಲಾಗ್ ನೆನಪಿಟ್ಟುಕೊಂಡು, ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದಳು" ಎಂದು ತಮಾಷೆ ಮಾಡಿದ್ದಾರೆ. ಈ ವರ್ಷಕ್ಕೆ ಅವರು 10ಕ್ಕೆ 4.5 ರೇಟಿಂಗ್ ನೀಡಿದ್ದಾರೆ.

2026ಕ್ಕೆ ಜಗತ್ತು ಅಂತ್ಯವಾಗುತ್ತಾ?

ಹೊಸ ವರ್ಷದ ಸಂಕಲ್ಪಗಳ (Resolutions) ಬಗ್ಗೆ ಕೇಳಿದಾಗ ಅದಾ ನೀಡಿದ ಉತ್ತರ ಅವರ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ. "ನನ್ನ ಸ್ನೇಹಿತರೆಲ್ಲ 2026ಕ್ಕೆ ಜಗತ್ತೇ ಅಂತ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ರೆಸಲ್ಯೂಶನ್ ಮಾಡಿ ಏನು ಪ್ರಯೋಜನ? ಆದ್ದರಿಂದ ನಾನು ಯಾವುದೇ ನಿರ್ಧಾರಗಳನ್ನು ತಗೆದುಕೊಂಡಿಲ್ಲ" ಎಂದಿದ್ದಾರೆ. ಇನ್ನು ತಮ್ಮ ಸ್ವಭಾವದ ಬಗ್ಗೆ ಮಾತನಾಡುತ್ತಾ, "ಮೊದಲು ನಾನು ಎಲ್ಲದರ ಬಗ್ಗೆ ಅತಿಯಾಗಿ ಯೋಚಿಸುತ್ತಿದ್ದೆ (Overthinking). ಈಗ ನನ್ನ ಸಿಸ್ಟಮ್ ಅಪ್‌ಡೇಟ್ ಆಗಿದೆ. ಈಗಲೂ ಓವರ್‌ಥಿಂಕ್ ಮಾಡುತ್ತೇನೆ, ಆದರೆ ಮೊದಲಿನಿಗಿಂತಲೂ ವೇಗವಾಗಿ ಮಾಡುತ್ತೇನೆ!" ಎಂದು ನಗುತ್ತಾ ಹೇಳಿದ್ದಾರೆ.

‘ಫ್ರಾಂಕೆನ್‌ಸ್ಟೈನ್’ ಚಿತ್ರದಲ್ಲಿ ನಟಿಸುವ ಆಸೆ:

ಈ ವರ್ಷ ತೆರೆಕಂಡ ಚಿತ್ರಗಳ ಪೈಕಿ ತಮಗೆ 'ಫ್ರಾಂಕೆನ್‌ಸ್ಟೈನ್' (Frankenstein) ಚಿತ್ರದಲ್ಲಿ ನಟಿಸುವ ಆಸೆ ಇತ್ತು ಎಂದು ಅದಾ ಹೇಳಿದ್ದಾರೆ. ಅದರಲ್ಲೂ ಆ ಪಾತ್ರದ ಫೀಮೇಲ್ ವರ್ಷನ್ ಏನಾದರೂ ತಯಾರಾದರೆ, ಅದಕ್ಕೆ ತಾವೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಸಿನಿಮಾಗಳಿಲ್ಲದಿದ್ದರೂ ಸೋಶಿಯಲ್ ಮೀಡಿಯಾ ಮತ್ತು ತಮ್ಮ ವಿಚಿತ್ರ ಐಡಿಯಾಗಳ ಮೂಲಕ ಅದಾ ಶರ್ಮಾ ಸದಾ ಸುದ್ದಿಯಲ್ಲಿರುತ್ತಾರೆ ಎಂಬುದಕ್ಕೆ ಈ AI ಕಥೆಯೇ ಸಾಕ್ಷಿ.

ಮುಂದಿನ ದಿನಗಳಲ್ಲಿ ಅದಾ ಶರ್ಮಾ ಅವರ ಈ AI ಅವತಾರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.