ಅಕ್ಷಯ್ ಖನ್ನಾ ಸಡನ್ ಈ ನಿರ್ಧಾರ ಕೇಳಿ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ದೃಶ್ಯಂ 3' ಚಿತ್ರದಲ್ಲಿ ಅವರ ನಟನೆಯನ್ನು ನೋಡಲು ಕಾಯುತ್ತಿದ್ದವರಿಗೆ ಬೇಸರವಾಗಿದೆ. ಆದರೆ 'ಧುರಂಧರ್' ಬಳಿಕ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಈ ಬಿಸಿ ಬಿಸಿ ಸುದ್ದಿ
ಸಿನಿಮಾರಂಗದಲ್ಲಿ ಯಾವತ್ತೂ ಪ್ರತಿಭೆಗೆ ಬೆಲೆ ಇದ್ದೇ ಇರುತ್ತದೆ. ಹಲವು ನಟರು ತಮ್ಮ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಅಂತಹ ನಟರಲ್ಲಿ ಅಕ್ಷಯ್ ಖನ್ನಾ (Akshaye Khanna) ಸಹ ಒಬ್ಬರು. ಸದ್ಯ ಬಾಲಿವುಡ್ ಅಂಗಳದಲ್ಲಿ ಈ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಸಿನಿಮಾಪ್ರಿಯರಿಗೆ ಇದು ನಿಜವಾಗಿಯೂ ಶಾಕಿಂಗ್ ಸಂಗತಿಯೇ ಸರಿ. ಚಿತ್ರರಂಗದ ಬೆಳವಣಿಗೆಗಳು ಹಾಗೂ ಬದಲಾವಣಗೆಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತವೆ. ಆದ್ಯತೆಗಳೂ ಕೂಡ ಬದಲಾಗುತ್ತಾ ಇರುತ್ತವೆ. ಆಗಾಗ ಹೊಸ ಸಿನಿಮಾಗಳ ಘೋಷಣೆ ಮತ್ತು ಕಲಾವಿದರ ಬದಲಾವಣೆ ಇಲ್ಲಿ ಸಾಮಾನ್ಯ ಸಂಗತಿ. ಆದರೆ ಇದೀಗ ಹರಿದಾಡುತ್ತಿರುವ ಈ ಸುದ್ದಿ ಮಾತ್ರ ಸಖತ್ ಸೌಂಡ್ ಮಾಡುತ್ತಿದೆ.
ಈ ಸುದ್ದಿ ಏನೆಂದರೆ, ಸದ್ಯಕ್ಕೆ 'ಧುರಂಧರ್' ಸಿನಿಮಾ (Dhurandhar) ಮೂಲಕ ವಿಶ್ವದಾದ್ಯಂತ ಸುದ್ದಿಯಾಗಿರುವ ಬಾಲಿವುಡ್ ನಟ ಅಕ್ಷಯ್ ಖನ್ನಾ ಮುಂದಿನ ನಡೆಯ ಬಗ್ಗೆ ಶಾಕಿಂಗ್ ನ್ಯೂಸ್ ಒಂದು ಹಬ್ಬಿದೆ. ಅವರ ಈ ಒಂದು ನಿರ್ಧಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಕಾರಣ, ಅವರು ಇತ್ತೀಚೆಗೆ ಕಂಡ ಸಕ್ಸಸ್ ಎನ್ನಲಾಗುತ್ತಿದೆ ಹಾಗೂ ಆ ಬಳಿಕ ತೆಗೆದುಕೊಂಡ ನಿರ್ಧಾರ.
'ಧುರಂಧರ್' ಚಿತ್ರದ ಭರ್ಜರಿ ಯಶಸ್ಸು ತಂದ ಬದಲಾವಣೆ!
ನಟ ಅಕ್ಷಯ್ ಖನ್ನಾ ಅಭಿನಯದ 'ಧುರಂಧರ್' ಸಿನಿಮಾ ಬಿಡುಗಡೆಯಾಗಿ ಇದೀಗ 20 ಯಶಸ್ವಿಯಾಗಿ ಪೂರೈಸಿ, 935 ಕೋಟಿಗೂ ಹೆಚ್ಚಿನ ಗಳಿಕೆ ಕಂಡು ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಸಿನಿಪ್ರೇಕ್ಷಕರು ಅಕ್ಷಯ್ ಖನ್ನಾ ಅಭಿನಯಕ್ಕೆ ಮಾರುಹೋಗಿದ್ದಾರೆ. ವಿಮರ್ಶಕರು ಕೂಡ ಈ ಚಿತ್ರವನ್ನು ಹಾಗೂ ನಟ ಅಕ್ಷಯ್ ಖನ್ನಾ ನಟನೆಯನ್ನು ಕೊಂಡಾಡುತ್ತಿದ್ದಾರೆ. ಈ ಯಶಸ್ಸು ನಟನಿಗೆ ಇದೀಗ ಹೊಸ ಹುರುಪು ನೀಡಿದೆ.
ಧುರಂಧರ್ ಸಿನಿಮಾದ ಗೆಲುವು ಅಕ್ಷಯ್ ಖನ್ನಾ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದೆ. ಇದರಿಂದಾಗಿ ಅವರು ತಮ್ಮ ಮುಂದಿನ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಜಾಗರೂಕರಾಗಿದ್ದಾರೆ. ದೊಡ್ಡ ಪ್ರಾಜೆಕ್ಟ್ ಗಳು ಅವರ ಮನೆ ಬಾಗಿಲು ತಟ್ಟುತ್ತಿವೆ. ಹೀಗಾಗಿ ಅವರೀಗ ಭಾರೀ ಚೂಸಿ ಅಗಿದ್ದಾರೆ ಎನ್ನಲಾಗುತ್ತಿದೆ.
'ದೃಶ್ಯಂ 3' ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ ?
ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಚಿತ್ರದಿಂದ (Drishyam 3) ಅಕ್ಷಯ್ ಖನ್ನಾ ಹೊರಬಂದಿದ್ದಾರೆ ಎಂಬ ವರದಿಗಳು ಇದೀಗ ಕೇಳಿಬರುತ್ತಿವೆ. 'ದೃಶ್ಯಂ 2' ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಅಕ್ಷಯ್ ಖನ್ನಾ ಅವರು ಅದ್ಭುತವಾಗಿ ನಟಿಸಿದ್ದರು. ಅವರ ಪಾತ್ರಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಮೂಲಗಳ ಪ್ರಕಾರ ಅಕ್ಷಯ್ ಈಗ ಈ ಚಿತ್ರದ ಭಾಗವಾಗಲು ಇಷ್ಟಪಡುತ್ತಿಲ್ಲವಂತೆ. 'ಧುರಂಧರ್' ಚಿತ್ರದ ದೊಡ್ಡ ಯಶಸ್ಸಿನ ಬಳಿಕ ನಟ ಅಕ್ಷಯ್ ಖನ್ನಾ ಅವರು ಕೇವಲ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿಲ್ಲ. ಬದಲಾಗಿ ಪ್ರಮುಖ ಪಾತ್ರಗಳ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ ಎನ್ನಲಾಗಿದೆ.
ಕಾರಣವೇನು? ಇಲ್ಲಿದೆ ಮಾಹಿತಿ
'ದೃಶ್ಯಂ' ಸರಣಿಯ ಮೂರನೇ ಭಾಗವು ಬಹಳ ನಿರೀಕ್ಷೆ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಅಕ್ಷಯ್ ಖನ್ನಾ ನಿರ್ಗಮನ ಚಿತ್ರತಂಡಕ್ಕೆ ಹಿನ್ನಡೆ ಎನ್ನಬಹುದು. ಆದರೆ ನಟ ಅಕ್ಷಯ್ ದೃಷ್ಟಿಯಿಂದ ನೋಡಿದರೆ ಅವರು ತಮ್ಮ ಕೆರಿಯರ್ ಬಗ್ಗೆ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದು ಸರಿ ಎನ್ನಬಹುದು. ಕೇವಲ ಅತಿಥಿ ಪಾತ್ರ ಅಥವಾ ಪೋಷಕ ಪಾತ್ರಕ್ಕಿಂತ ಗಟ್ಟಿ ಪಾತ್ರಗಳೇ ಅವರಿಗೆ ಮುಖ್ಯವಾಗಿದೆ.
ಅದರೆ, ಬಾಲಿವುಡ್ ವಲಯದಲ್ಲಿ ಈ ಬಗ್ಗೆ ಸಾಕಷ್ಟು ಗುಸುಗುಸು ಪಿಸುಪಿಸು ಮಾತುಗಳು ಕೇಳಿಬರುತ್ತಿವೆ. ಅಜಯ್ ದೇವಗನ್ ಮತ್ತು ಅಕ್ಷಯ್ ಖನ್ನಾ ನಡುವೆ ಯಾವುದೇ ಮನಸ್ತಾಪ ಇಲ್ಲ. ಕೇವಲ ಡೇಟ್ಸ್ ಸಮಸ್ಯೆ ಅಥವಾ ಪಾತ್ರದ ಪ್ರಾಮುಖ್ಯತೆಯ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗುತ್ತಿದೆ. ಇದರಿಂದಾಗಿ ಚಿತ್ರತಂಡ ಈಗ ಹೊಸ ನಟನ ಹುಡುಕಾಟದಲ್ಲಿದೆ.
ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ?
ಅಕ್ಷಯ್ ಖನ್ನಾ ಸಡನ್ ಈ ನಿರ್ಧಾರ ಕೇಳಿ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ದೃಶ್ಯಂ 3' ಚಿತ್ರದಲ್ಲಿ ಅವರ ನಟನೆಯನ್ನು ನೋಡಲು ಕಾಯುತ್ತಿದ್ದವರಿಗೆ ಬೇಸರವಾಗಿದೆ. ಆದರೆ 'ಧುರಂಧರ್' ಬಳಿಕ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಅಕ್ಷಯ್ ಖನ್ನಾ ಯಾವ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆಮಾಡಿದೆ. ಒಟ್ಟಿನಲ್ಲಿ 'ದೃಶ್ಯಂ 3' ಚಿತ್ರಕ್ಕೆ ಅಕ್ಷಯ್ ಖನ್ನಾ ಗೈರುಹಾಜರಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಚಿತ್ರದ ಬಿಡುಗಡೆ ಬಳಿಕ ತಿಳಿದುಬರಲಿದೆ.


