'ನಾನು ಹೆವ್ವಿ ಎನ್ನುವಷ್ಟು ವರ್ಕ್‌ಔಟ್ ಮಾಡುತ್ತೀನಿ. ಆದ್ರೆ, ಜಿಮ್ ಮುಗಿಸಿದ ಬಳಿಕ ನನಗೆ ನಿಶ್ಯಕ್ತಿ ಕಾಡುತ್ತದೆ. ಕಾರಣ, ನನ್ನಲ್ಲಿರುವ ಎಲ್ಲಾ ಎನರ್ಜಿ ನನ್ನ ವರ್ಕೌಟ್ ಮೂಲಕ ವ್ಯಯವಾಗಿ ಕೊನೆಗೆ ಸುಸ್ತು ಮಾತ್ರ ಉಳಿಯುತ್ತಿದೆ. ಯಾವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಶ್ಮಿಕಾ? ಮುಂದೆ ನೋಡಿ..
ರಶ್ಮಿಕಾ ಸೀಕ್ರೆಟ್ ಕೊನೆಗೂ ಹೊರಬಿತ್ತು!
ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಂದರ್ಶನವೊಂದರಲ್ಲಿ ಮಾತನ್ನಾಡಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ರಶ್ಮಿಕಾ ಅವರು ತಮ್ಮ ಡಯಟ್ ಹಾಗೂ ಡಾಕ್ಟರ್ ಹೇಳಿರುವ ಸಲಹೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರು 'ನಾನು ಹೆವ್ವಿ ಎನ್ನುವಷ್ಟು ವರ್ಕ್‌ಔಟ್ ಮಾಡುತ್ತೀನಿ. ಆದ್ರೆ, ಜಿಮ್ ಮುಗಿಸಿದ ಬಳಿಕ ನನಗೆ ನಿಶ್ಯಕ್ತಿ ಕಾಡುತ್ತದೆ. ಕಾರಣ, ನನ್ನಲ್ಲಿರುವ ಎಲ್ಲಾ ಎನರ್ಜಿ ನನ್ನ ವರ್ಕೌಟ್ ಮೂಲಕ ವ್ಯಯವಾಗಿ ಕೊನೆಗೆ ಸುಸ್ತು ಮಾತ್ರ ಉಳಿಯುತ್ತಿದೆ.
ಈ ಕಾರಣಕ್ಕೆ ನಾನು ಸಲಹೆ ಕೇಳಲು ಡಾಕ್ಟರ್ ಬಳಿಗೆ ಹೋದೆ. ನನ್ನ ಸಮಸ್ಯೆಗಳನ್ನು ಸರಿಯಾಗಿ ಕೇಳಿ ಅರ್ಥೈಸಿಕೊಂಡ ವೈದ್ಯರು ನನಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರಲ್ಲಿ ಮುಖ್ಯವಾದ ಸೂಚನೆ ಇದು. ಡಾಕ್ಟರ್ ಹೇಳಿದಂತೆ ಅದೇನು ಎಂದರೆ- 'ನೀವೆಲ್ಲಾ ಯಾವ ರೀತಿ ಡಯಟ್ ಮಾಡ್ತೀರಾ ಅಂದ್ರೆ, ಕೊನೆಗೆ ಎಲೆಗಳನ್ನು ತಿಂದು ಬದುಕುವಂತೆ ಆಗ್ತೀರಿ. ಡಯಟ್ ಅಂದ್ರೆ ಯಾರೋ ಏನು ಮಾಡ್ತಾರೆ ಅಂತ ತಿಳಿದುಕೊಂಡು ಅವರನ್ನು ಕುರುಡಾಗಿ ಫಾಲೋ ಮಾಡೋದಲ್ಲ.
ನಮ್ಮ ಹಿಂದಿನ ಜನರೇಶನ್ ಹೇಗೆ ತಿಂತಾ ಇದ್ರು?
ಬದಲಿಗೆ, ನಮ್ಮ ಹಿಂದಿನ ಜನರೇಶನ್ ಹೇಗೆ ತಿಂತಾ ಇದ್ರು, ಅವ್ರ ಊಟದ ಪದ್ಧತಿ ಹೇಗಿತ್ತು ಅಂತ ತಿಳಿದುಕೊಂಡು ಅದನ್ನು ಅನುಸರಿಸುತ್ತ ಬಾಳೋದು. ಹೊಸದೇನನ್ನೋ ಈಗಿನ ಟ್ರೆಂಡ್ ಅಂತ ಹೊಟ್ಟೆ ಒಳಗೆ ಹಾಕಿಕೊಳ್ಳೋದು ಅಲ್ಲ. ನಮ್ಮ ಹಿಂದಿನ ತಲೆಮಾರುಗಳ ಆಹಾರ ಪದ್ಧತಿ ನಮಗೆ ಒಗ್ಗುತ್ತೆ. ಏಕೆಂದರೆ, ನಮ್ಮ ಬಾಲ್ಯದಲ್ಲಿ ನಾವು ಅದನ್ನೇ ತಿಂದು ಬೆಳೆದಿರುತ್ತೇವೆ. ಅದು ನಮ್ಮ ದೇಹಕ್ಕೆ ಸರಿಯಾಗಿ ಹೊಂದಿಕೆ ಆಗುವಂಥ ಆಹಾರ. ನಾವು ಹೊಸದೇನನ್ನೋ ತಿಂದು ಜೀರ್ಣಿಸಿಕೊಳ್ಳಲು ಸಾಧ್ಯ ಆಗೋದಿಲ್ಲ.
ನಾವು ನಮ್ಮ ಹಿರಿಯರ ಆಹಾರ ಪದ್ಧತಿ ಬಿಟ್ಟು ಬೇರೆ ಏನೋನೋ ತಿಂದು ಡಯಟ್ ಅಂತ ಮಾಡಲು ಹೊರಟರೆ ಕೊನೆಗೆ ಡಯಟ್ ಹೆಸರಿನಲ್ಲಿ ತರಕಾರಿ, ಸೊಪ್ಪು ಹಾಗೂ ಎಲೆಗಳನ್ನಷ್ಟೇ ತಿಂದು ಬದುಕುವ ಪರಿಸ್ಥಿತಿ ತಂದುಕೊಳ್ಳುತ್ತೇವೆ. ಏಕೆಂದರೆ, ಬೇರೆಯವರ ಡಯಟ್ ಅನುಸರಿಸಲು ಹೋಗಿ, ದೇಹ ಅದಕ್ಕೆ ಒಗ್ಗದೇ ಅನಾರೋಗ್ಯ ಕಾಡತೊಡಗುತ್ತದೆ. ಅನಾರೋಗ್ಯ ಪರಿಹರಿಸಿಕೊಳ್ಳಲು ತರಕಾರಿ-ಸೊಪ್ಪಿನ ಜ್ಯೂಸ್ ಮೊರೆ ಹೋಗಿ, ಕೊನೆಗೆ ಅದೇ ನಮ್ಮ ಆಹಾರ ಆಗುತ್ತದೆ.
ಬೇರೆಯವರ ಊಟವನ್ನು ನೋಡಿ ಅದನ್ನೇ ನಾವೂ ತಿನ್ನತೊಡಗಿದ್ದೇವೆ
ಡಾಕ್ಟರ್ ಮಾತನ್ನು ಕೇಳಿದ ನಟಿ ರಶ್ಮಿಕಾ ಅವರು 'ಹೌದು, ನಮ್ಮ ಬಾಲ್ಯದಲ್ಲಿ ನಾವು ದೋಸೆ, ಅನ್ನ, ಸಾಂಬಾರ್, ತಂಬುಳಿ ಹೀಗೆ ತಿಂತಾ ಇದ್ವಿ. ಈಗ ಬೇರೆಯವರ ಊಟವನ್ನು ನೋಡಿ ಅದನ್ನೇ ನಾವೂ ತಿನ್ನತೊಡಗಿದ್ದೇವೆ. ಇದರಿಂದ ನಮ್ಮ ದೇಹಾರೋಗ್ಯ ಕೆಡುತ್ತಿದೆ. ಕಾರಣ, ಜಗತ್ತಿನ ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿದೆ. ಅವರವರ ದೇಹಕ್ಕೆ ಅವರವರ ಪೂರ್ವಜರ ಆಹಾರ ಪದ್ಧತಿ ಸೂಕ್ತವಾಗಿದೆ. ಅದು ಬಿಟ್ಟು, ಯಾರೋ ಹೇಳಿದ ಯಾರೋ ಮಾಡಿದ ಡಯಟ್ ಅನುಸರಿಸಲು ಹೋದರೆ ನಮಗೆ ಆದು ಆಗಿಬರುವುದಿಲ್ಲ. ತಮ್ಮತಮ್ಮ ದೇಹಭಾಷೆಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರೂ ಕೂಡ ಅವರದೇ ಡಯಟ್ ಪಾಲಿಸಬೇಕು' ಎಂಬ ಕಿವಿಮಾತು ಹೇಳಿದ್ದಾರೆ.


