ಬಾಲಿವುಡ್‌ ನಟ ಶಾಹೀದ್‌ ಕಪೂರ್‌ ಅವರ ಬಗ್ಗೆ ಪತ್ನಿ ಮೀರಾ ರಜಪೂತ್‌ ದೂರು ಏನು? 

ಮದುವೆಯಾಗಲು ಎಂಥ ಹುಡುಗ ಸಿಗಬೇಕು ಅಂತ ಪ್ರಶ್ನೆ ಮಾಡಿದಕೂಡಲೇ ಕೆಲ ಶಾಹೀದ್‌ ಕಪೂರ್‌ ಅಭಿಮಾನಿಗಳು ʼವಿವಾಹ್ʼ‌ ಸಿನಿಮಾದ ಆದಿತ್ಯ ಪಾತ್ರವನ್ನೋ ʼಜಬ್‌ ವಿ ಮೆಟ್ʼ‌ ಸಿನಿಮಾದ ಆದಿತ್ಯ ಪಾತ್ರವನ್ನೋ ನೆನಪು ಮಾಡಿಕೊಳ್ತಾರೆ. ಆದರೆ ಈ ರೀತಿ ಹುಡುಗ ಇಲ್ಲವೇ ಇಲ್ಲ ಎಂದು ಶಾಹೀದ್‌ ಕಪೂರ್‌ ಹೇಳಿದ್ದಾರೆ. 

ನಿಮ್ಮ ಯಾವ ಸಿನಿಮಾದ ಪಾತ್ರವನ್ನು ಮೀರಾ ರಜಪೂತ್‌ ಸಿಂಗ್‌ ಅವರು ಇಷ್ಟಪಡ್ತಾರೆ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಶಾಹೀದ್‌ ಅವರು “ಜಬ್‌ ವಿ ಮೆಟ್‌ ಸಿನಿಮಾ ಅಂದರೆ ತುಂಬ ಇಷ್ಟ. ನೀವು ಆ ಸಿನಿಮಾದಲ್ಲಿರೋ ಆದಿತ್ಯ ರೀತಿ ಇರ್ತೀರಾ ಅನ್ಕೊಂಡಿದ್ದೆ. ಅದರಲ್ಲಿ 5% ಕೂಡ ಇಲ್ಲ ಎಂದು ಈಗಲೂ ಬಯ್ಯುತ್ತಾರೆ. ನಾನು 5% ಕಬೀರ್‌ ಸಿಂಗ್‌ ರೀತಿ ಕೂಡ ಇಲ್ಲ. ಹೀಗಾಗಿ ಅಲ್ಲಿಗೆ ಬ್ಯಾಲೆನ್ಸ್‌ ಆಗಿದೆ ಎಂದು ನಾನು ಹೇಳ್ತೀನಿ” ಎಂದು ಹೇಳಿದ್ದಾರೆ. “ಹುಡುಗಿಯರಿಗೆ ವಿವಾಹ್‌ ಸಿನಿಮಾ ಪ್ರೇಮ್‌ ಬಾಜ್‌ಪೇಯಿ ರೀತಿ ಹುಡುಗನೇ ಬೇಕು. ಆದರೆ ಆ ಥರದ ಹುಡುಗನ ಅಸ್ತಿತ್ವೇ ಇಲ್ಲ” ಎಂದು ಶಾಹೀದ್‌ ಕಪೂರ್‌ ಹೇಳಿದ್ದಾರೆ. 

ಬಾಲಿವುಡ್‌ ತಾರೆಯರ ಮೇಲೆ ದಾಳಿಗಳು: ಸೈಫ್‌ ಅಲಿ ಖಾನ್‌ ಹೊಸ ಗುರಿಯೇ?

ʼಜಬ್‌ ವಿ ಮೆಟ್‌ʼ ಸಿನಿಮಾ
ಶಾಹೀದ್‌ ಕಪೂರ್‌ ಅವರು ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ಹೆಸರು ಮಾಡಿದವರು. ಶಾಹೀದ್‌ ಕಪೂರ್-ಕರೀನಾ ಕಪೂರ್‌ ನಟನೆಯ ʼಜಬ್‌ ವಿ ಮೆಟ್ʼ‌ ಸಿನಿಮಾ ರಿಲೀಸ್‌ ಆಗಿ 18 ವರ್ಷಗಳು ಕಳೆದಿವೆ. ಈ ಚಿತ್ರದಲ್ಲಿ ಆದಿತ್ಯ-ಗೀತ್‌ ಕಾಂಬಿನೇಶನ್‌ ಎಲ್ಲರಿಗೂ ಇಷ್ಟ ಆಗಿತ್ತು. ತಾಯಿ ಬೇರೆಯವರ ಜೊತೆ ಓಡಿ ಹೋದಳು, ಹುಡುಗಿ ಬ್ರೇಕಪ್‌ ಮಾಡಿಕೊಂಡಳು ಅಂತ ಆದಿತ್ಯ ಬೇಸರ ಮಾಡಿಕೊಂಡಿರುತ್ತಾನೆ. 

ಇತ್ತ ಗೀತ್‌ ಕೂಡ ಯಾವಾಗಲೂ ಟ್ರಾವೆಲ್‌ ಮಾಡುತ್ತ ಸಾಹಸ ಮಾಡಿಕೊಂಡಿರುವವಳು. ಇವರಿಬ್ಬರಿಗೂ ಟ್ರೇನ್‌ನಲ್ಲಿ ಪರಿಚಯ ಆಗುವುದು. ಗೀತ್‌ ಸ್ನೇಹದಿಂದ ಆದಿತ್ಯ ಬದಲಾಗುತ್ತಾನೆ. ಆ ನಂತರ ತಾನು ಪ್ರೀತಿಸಿದ ಹುಡುಗ ಮೋಸ ಮಾಡಿದ ಅಂತ ಗೀತ್‌ ಡಿಪ್ರೆಶನ್‌ಗೆ ಹೋಗುತ್ತಾಳೆ, ಎಲ್ಲರಿಂದ ದೂರವಾಗಿ ಬದುಕುತ್ತಾಳೆ. ಈ ವಿಷಯ ಆದಿತ್ಯನಿಗೆ ಗೊತ್ತಾಗುವುದು. ಆಗ ಆದಿತ್ಯ ಗೀತ್‌ಳನ್ನು ಮತ್ತೆ ಮೊದಲಿನ ಹಾಗೆ ಮಾಡುತ್ತಾನೆ. ಆಮೇಲೆ ಇವರಿಬ್ಬರಿಗೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿರೋದು ಗೊತ್ತಾಗಿ ಒಂದಾಗುತ್ತಾರೆ. 

ಒಂದೇ ಫ್ರೇಮ್‌ ನಲ್ಲಿ ಹಳೆ ಲವರ್ ಕರೀನಾ, ಶಾಹಿದ್‌ ! ಪರಸ್ಪರ ಮಕ್ಕಳಿಗೆ ಮಾಡಿದ್ರಾ ಚಿಯರ್‌?

'ವಿವಾಹ್‌' ಸಿನಿಮಾ
ಶಾಹೀದ್‌ ಕಪೂರ್‌, ಅಮೃತಾ ಸಿಂಗ್‌ ನಟನೆಯ ʼವಿವಾಹ್ʼ‌ ಸಿನಿಮಾದಲ್ಲಿ ಪ್ರೇಮ್‌ ಪಾತ್ರದಲ್ಲಿ ಶಾಹೀದ್‌ ನಟಿಸಿದ್ದರು. ತಾನು ಮದುವೆಯಾಗಬೇಕಾಗಿದ್ದ ಹುಡುಗಿ ಮೈ ಸುಟ್ಟಿಕೊಳ್ತಾಳೆ. ಆಗ ಪ್ರೇಮ್‌ ಅವಳ ಆರೈಕೆ ಮಾಡುತ್ತಾನೆ, ಮದುವೆಗೆ ಮುನ್ನವೇ ಪತಿ ಎನ್ನುವ ಹಕ್ಕು ಚಲಾಯಿಸಿ, ಆಸ್ಪತ್ರೆಯಲ್ಲಿ ಸಹಿ ಹಾಕುತ್ತಾನೆ. ಆಮೇಲೆ ಅವಳ ಸಂಪೂರ್ಣ ಕಾಳಜಿ ಮಾಡ್ತಾನೆ.