Shruti Haasan On Kamal Haasan Love: ನಟಿ ಶ್ರುತಿ ಹಾಸನ್ ಅವರು ತಂದೆಯ ಲವ್‌ಸ್ಟೋರಿ ಬಗ್ಗೆ ರಿವೀಲ್ ಮಾಡಿದ್ದಾರೆ. ಈಗಾಗಲೇ ಎರಡು ಮದುವೆ ಆಗಿ, ಓರ್ವ ನಟಿಯ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದ ಕಮಲ್ ಈ ಲವ್ ಸ್ಟೋರಿ ಅನೇಕರಿಗೆ ಗೊತ್ತಿಲ್ಲ
ನಟಿ ಶ್ರುತಿ ಹಾಸನ್ ಇತ್ತೀಚೆಗೆ ರಜನಿಕಾಂತ್ ಜೊತೆ 'ಜೈಲರ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರಚಾರದ ಸಮಯದಲ್ಲಿ ಶ್ರುತಿ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ತಂದೆ, ನಟ ಕಮಲ್ ಹಾಸನ್ ( Shruti Haasan On Kamal Haasan) ಬಂಗಾಳಿ ಭಾಷೆಯನ್ನು ಕಲಿತಿದ್ದರು ಎಂದು ಅವರು ಹೇಳಿದ್ದಾರೆ. ಈ ಭಾಷೆಯನ್ನು ಸಿನಿಮಾಕ್ಕಾಗಿ ಅಲ್ಲ, ಆದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಕಲಿತಿದ್ದರು ಎಂದು ಹೇಳಿದ್ದರು.
ಶ್ರುತಿ ಹಾಸನ್ ಅವರೊಂದಿಗಿನ ಸಂವಾದದಲ್ಲಿ, ನಟ ಕಮಲ್ ಹಾಸನ್ ಒಂದು ಬಂಗಾಳಿ ಸಿನಿಮಾವನ್ನು ಮಾಡಿದ್ದರು, ಅದಕ್ಕಾಗಿ ಅವರು ಆ ಭಾಷೆಯನ್ನು ಕಲಿತಿದ್ದರು ಎಂದು ನಿರೂಪಕರು ಹೇಳಿದ್ದಾರೆ. ಆಗ ಶ್ರುತಿ ಹಾಸನ್ ಅವರು, ನನ್ನ ತಂದೆ ಬಂಗಾಳಿ ನಟಿ ಅಪರ್ಣಾ ಸೇನ್ ಅವರನ್ನು ಪ್ರೀತಿಸುತ್ತಿದ್ದ ಕಾರಣ ಆ ಭಾಷೆಯನ್ನು ಕಲಿತರು, ಸಿನಿಮಾಕ್ಕಾಗಿ ಅಲ್ಲ ಎಂದು ಶ್ರುತಿ ಹೇಳಿದ್ದಾರೆ.
ತಂದೆಯ ಲವ್‌ಸ್ಟೋರಿ ರಿವೀಲ್ ಮಾಡಿದ ಮಗಳು!
'ಅವರು ಏಕೆ ಬಂಗಾಳಿ ಕಲಿತರು ಎಂದು ನಿಮಗೆ ಗೊತ್ತಾ? ಆ ಸಮಯದಲ್ಲಿ ಅವರು ಅಪರ್ಣಾ ಸೇನ್‌ರನ್ನು ಪ್ರೀತಿಸುತ್ತಿದ್ದರು, ಅವರನ್ನು ಇಂಪ್ರೆಸ್ ಮಾಡೋಕೆ ಬಂಗಾಳಿ ಕಲಿತರು. ಸಿನಿಮಾಕ್ಕೋಸ್ಕರ ಕಲಿಯಲಿಲ್ಲ' ಎಂದು ಶ್ರುತಿ ಹೇಳಿದ್ದಾರೆ. ಕಮಲ್ ಹಾಸನ್ ನಿರ್ದೇಶಿಸಿದ "ಹೇ ರಾಮ್" ಸಿನಿಮಾ ಬಗ್ಗೆ ಶ್ರುತಿ ಒಂದು ಕುತೂಹಲಕಾರಿ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಪಾತ್ರದ ಹೆಸರು ಕೂಡ ಅಪರ್ಣಾ, ಅದನ್ನು ಅಪರ್ಣಾ ಸೇನ್ ಹೆಸರಿನಿಂದ ಇಡಲಾಗಿತ್ತು ಎಂದು ಅವರು ಹೇಳಿದರು.
ಎರಡು ಮದುವೆ, ಒಂದು ರಿಲೇಶನ್‌ಶಿಪ್
ಕಮಲ್ ಹಾಸನ್ ಅವರು 1978ರಲ್ಲಿ ವಾಣಿ ಗಣಪತಿ ಅವರನ್ನು ಮದುವೆಯಾದರು. ಅದಾಗಿ 10 ವರ್ಷಗಳ ಬಳಿಕ ಅವರು ಡಿವೋರ್ಸ್ ಪಡೆದರು. 1991ರಲ್ಲಿ ಸಾರಿಕಾರನ್ನು ಮದುವೆಯಾಗಿದ್ದು, ಈ ಜೋಡಿಗೆ ಶ್ರುತಿ ಹಾಸನ್, ಖುಷಿ ಹಾಸನ್ ಎಂಬ ಮಕ್ಕಳಿದ್ದಾರೆ. 2004 ರಲ್ಲಿ ಈ ಜೋಡಿ ಡಿವೋರ್ಸ್ ಪಡೆದಿದೆ. ಆ ಬಳಿಕ 2005 ರಿಂದ 2016 ರವರೆಗೆ ನಟಿ ಗೌತಮಿ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. 2016ರಲ್ಲಿ ನಾನು, ಕಮಲ್ ದೂರ ಆಗಿದ್ದೇವೆ ಎಂದು ಗೌತಮಿ ಅವರೇ ಅಧಿಕೃತವಾಗಿ ಹೇಳಿಕೊಂಡಿದ್ದರು.
ಅಪರ್ಣಾ ಸೇನ್ ಯಾರು?
ಅಪರ್ಣಾ ಸೇನ್ ಬಂಗಾಳಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು, ಸಿನಿಮಾ ನಿರ್ಮಾಪಕಿ ಕೂಡ. ಅವರು ಒಂಬತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, 1987 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅಪರ್ಣಾ ಸೇನ್, ನಟಿ ಕೊಂಕಣಾ ಸೇನ್ ಶರ್ಮಾ ಅವರ ತಾಯಿ. ಶ್ರುತಿ 'ಜೈಲರ್' ಸಿನಿಮಾ ಬಗ್ಗೆ ಹೇಳುವುದಾದರೆ, ರಜನಿಕಾಂತ್ ಅಭಿನಯದ ಈ ಸಿನಿಮಾವು ಭರ್ಜರಿ ಆರಂಭದ ನಂತರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. 12 ದಿನಗಳಲ್ಲಿ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 260.6 ಕೋಟಿ ರೂಪಾಯಿಗಳನ್ನು ಗಳಿಸಿದೆ, ಆದರೆ ಇದರ ಬಜೆಟ್ 350 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.


