ಯಶ್ ನಟನೆಯ 'ಟಾಕ್ಸಿಕ್' ಮತ್ತು ರಣ್ವೀರ್ ಸಿಂಗ್ ಅಭಿನಯದ 'ಧುರಂಧರ್ 2' ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫೀಸ್ನಲ್ಲಿ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ವಿಶೇಷವಾಗಿ, 'ಧುರಂಧರ್ 2' ತಂಡವು ಕರ್ನಾಟಕದಲ್ಲೇ 'ಟಾಕ್ಸಿಕ್' ಚಿತ್ರಕ್ಕಿಂತ ಹೆಚ್ಚು ಸ್ಕ್ರೀನ್ಗಳನ್ನು ಪಡೆಯಲು ಯತ್ನಿಸುತ್ತಿದೆ.
ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಒಂದಾದ್ರೆ, ರಣ್ವೀರ್ ಸಿಂಗ್ ನಟನೆಯ 'ಧುರಂಧರ್ 2' ಮತ್ತೊಂದು. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ದಾಖಲೆಗಳನ್ನು ಮುರಿಯುವುದಕ್ಕೆ ಶತ ಪ್ರಯತ್ನ ಮಾಡುತ್ತಿವೆ. ಈ ಬಾಕ್ಸಾಫೀಸ್ ಯುದ್ಧದಲ್ಲಿ ಗೆಲ್ಲಲೇಬೇಕು ಅಂತ ಪಣ ತೊಟ್ಟು ನಿಂತಿವೆ. ಈ ಸಿನಿಮಾಗಳ ಮಧ್ಯೆ ನಡೆಯುತ್ತಿರೋ ವಾರ್ ಕರ್ನಾಟಕದಿಂದಲೇ ಶುರುವಾಗಿದೆ. ಹಾಗಾದ್ರೆ ಕನ್ನಡ ನಾಡಿನಲ್ಲಿ ಟಾಕ್ಸಿಕ್ ಮತ್ತು ಧುರಂದರ್ ಮಧ್ಯೆ ಏನೆಲ್ಲಾ ನಡೀತಾ ಇದೆ..? ನೋಡೋಣ ಬನ್ನಿ.
ಕನ್ನಡ ನಾಡಿನಲ್ಲಿ ಯಶ್ ಜತೆ ಸೆಣಸಾಟಕ್ಕೆ ನಿಂತ ರಣ್ವೀರ್!
ಯೆಸ್, ಕನ್ನಡದ ಕಂಪನ್ನ ಇಡೀ ವಿಶ್ವಕ್ಕೆ ಪಸರಿಸುತ್ತಿರೋ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ಗೆ ಕರ್ನಾಟಕದಲ್ಲೇ ಸವಾಲ್ ಎದುರಾಗಿದೆ. ಈ ಸವಾಲು ಹಾಕಿರೋದು ಉತ್ತರ ಭಾರತದ ಹಿಂದಿ ಮಂದಿ. ಅದಕ್ಕೆ ಕಾರಣ ಒಂದೇ ದಿನ ಒಂದೇ ಸಮಯಕ್ಕೆ ಒಟ್ಟಿಗೆ ಬಿಡುಗಡೆ ಆಗುತ್ತಿರೋ ಪ್ಯಾನ್ ವರ್ಲ್ಡ್ ಸಿನಿಮಾಗಳಾದ ಟಾಕ್ಸಿಕ್ ಹಾಗು ಧುರಂದರ್-2.
ಹೌದು, ಮಾರ್ಚ್ 19ಕ್ಕೆ ವಿಶ್ವದಾದ್ಗಯಂತ ನಮ್ಮ ಕನ್ನಡದ ಸಿನಿಮಾ ಟಾಕ್ಸಿಕ್ ತೆರೆ ಕಾಣುತ್ತಿದೆ. ಅದೇ ದಿನ ಈಗಾಗ್ಲೆ ಸೂಪರ್ ಹಿಟ್ ಆಗಿರೋ ಧುರಂದರ್ ಸಿನಿಮಾದ ಮುಂದುವರೆದ ಭಾಗ ಧುರಂದರ್-2 ಕೂಡ ಬಿಡುಗಡೆ ಆಗುತ್ತಿದೆ. ಟಾಕ್ಸಿಕ್ ಜೊತೆ ಪೈಪೋಟಿಗೆ ಇಳಿದಿರೋ ದುರಂಧರ್-2 ಕನ್ನಡ ನಾಡಿನಲ್ಲೇ ಯಶ್ ಬುಡಕ್ಕೆ ಕೈ ಹಾಕಿದೆ.
ಕರ್ನಾಟಕದ ಮಲ್ಟಿಫ್ಲೆಕ್ಸ್ಗಾಗಿ ಧುರಂದರ್ ವಾರ್!
'ಟಾಕ್ಸಿಕ್' ಹಾಗು 'ಧುರಂಧರ್-2 ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡೂ ಸಿನಿಮಾಗಳಿಗೂ ಅತೀ ಹೆಚ್ಚು ಸ್ಕ್ರೀನ್ಗಳು ಬೇಕಿವೆ. ಈಗಿನಿಂದಲೇ ಮಲ್ಟಿಪ್ಲೆಕ್ಸ್ ಸ್ಕ್ರೀನ್ಗಳ ಮೇಲೆ ಎರಡೂ ಸಿನಿಮಾ ತಂಡಗಳು ಕಣ್ಣಿಟ್ಟಿದ್ದು, ಸ್ಕ್ರೀನ್ ಬುಕ್ ಮಾಡೋ ಕೆಲಸ ಮಾಡುತ್ತಿವೆ. ಯಶ್ ನಮ್ಮೂರನ್ನ ನನ್ನನ್ನ ಟಚ್ ಮಾಡೋರು ಯಾರು ಅಂತ ನಂಬಿಕೆ ಮೇಲೆ ಉತ್ತರ ಭಾರತ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಹಾಗು ವಿದೇಶದಲ್ಲಿ ಥಿಯೇಟರ್ ಸೆಟ್ ಮಾಡುತ್ತಿದ್ದಾರೆ.
ಆದ್ರೆ ಹಿಂದಿಯ ಧುರಂದರ್-2 ತಂಡ ಯಶ್ ಬುಡಕ್ಕೆ ಕೈ ಹಾಕಿ ಕರ್ನಾಟಕದಲ್ಲಿರೋ ಸ್ಕ್ರೀನ್ಗಳ ಸೆಟಪ್ ಮಾಡುತ್ತಿದೆ. ಕರ್ನಾಟಕದಲ್ಲಿ ಟಾಕ್ಸಿಕ್ ಚಿತ್ರಕ್ಕಿಂತಲೂ ಹೆಚ್ಚು ಸ್ಕ್ರೀನ್ಗಳಲ್ಲಿ ಧುರಂಧರ್-2 ಸಿನಿಮಾ ಬಿಡುಗಡೆಗೆ ಪೈಪೋಟಿ ಕೊಡುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಮಂದಿ ಕನ್ನಡಿಗನ ಟಾಕ್ಸಿಕ್ಗೆ ಸಪೋರ್ಟ್ ಮಾಡುತ್ತಾರಾ? ಹಿಂದಿಯ ಧುರಂಧರ್ನ ಗೆಲ್ಲಿಸ್ತಾರಾ ಕಾದು ನೋಡಬೇಕು


