ಚಾಂಪಿಯನ್ಸ್ ಟ್ರೋಫಿ ಗದ್ದ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಸತತ 2 ಐಸಿಸಿ ಟ್ರೋಫಿ ಗೆಲ್ಲಿಸಿದ ಕೀರ್ತಿ ರೋಹಿತ್‌ ಪಾಲಾಗಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ರೋಹಿತ್ ಶರ್ಮಾ ವಿದಾಯ ಹೇಳ್ತಾರಾ? ಬಾಲ್ಯದ ಕೋಚ್ ಹೇಳಿದ್ದೇನು 

ಮುಂಬೈ(ಮಾ.09) ಚಾಂಪಿಯನ್ಸ್ ಟ್ರೋಫಿ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮಿಸ್ ಮಾಡಿಕೊಂಡ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಬಳಿಕ ಸತತ 2 ಐಸಿಸಿ ಟ್ರೋಫಿ ಗೆದ್ದು ದಾಖಲೆ ಬರೆದಿದ್ದಾರೆ. ಐಸಿಸಿ ಟಿ20 ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾ ಟಿ20 ಮಾದರಿಗೆ ವಿದಾಯ ಹೇಳಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಏಕದಿನ ಮಾದರಿಗೆ ವಿದಾಯ ಹೇಳ್ತಾರಾ? ಈ ಚರ್ಚೆ ಜೋರಾಗುತ್ತಿದ್ದಂತೆ ರೋಹಿತ್ ಶರ್ಮಾ ಬಾಲ್ಯದ ಕೋಚ್ ದಿನೇಶ್ ಲಾಡ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ವಿದಾಯ ಘೋಷಿಸಬೇಕು ಎಂದು ದಿನೇಶ್ ಲಾಡ್ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನವೇ ದಿನೇಶ್ ಲಾಡ್ ಈ ಹೇಳಿಕೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಲ್ಯದ ಕೋಚ್‌ಗೆ ಮಾತುಕೊಟ್ಟಂತೆ ರೋಹಿತ್ ಶರ್ಮಾ ಟ್ರೋಫಿ ಗೆದ್ದುಕೊಂಡಿದ್ದಾರೆ. ರೋಹಿತ್ ಶರ್ಮಾಗೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ.

ನ್ಯೂಜಿಲೆಂಡ್ ಮಣಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಐಸಿಸಿ ಟೂರ್ನಿಯಲ್ಲಿ ಹೊಸ ದಾಖಲೆ

ಧೋನಿ ಬಳಿಕ ಭಾರತ ಐಸಿಸಿ ಟೂರ್ನಿಗಳಲ್ಲಿ ಕೊನೆಯ ಹಂತದಲ್ಲಿ ಎಡವಿ ಬೀಳಲು ಆರಂಭಿಸಿತ್ತು. 2013ರಲ್ಲಿ ಐಸಿಸಿ ಟ್ರೋಫಿ ಗೆದ್ದಿದ್ದೇ ಕೊನೆಯಾಗಿತ್ತು. ಬಳಿಕ ಟ್ರೋಫಿ ಬರ ಅನುಭವಿಸಿದ್ದ ಟೀಂ ಇಂಡಿಯಾಗೆ ಮತ್ತೆ ಟ್ರೋಫಿ ಗೆಲ್ಲಿಸಿಕೊಟ್ಟ ಕೀರ್ತಿ ರೋಹಿತ್ ಶರ್ಮಾಗಿದೆ. ಇದೀಗ ರೋಹಿತ್ ಶರ್ಮಾ ವಿದಾಯ ಹೇಳುವುದು ಸೂಕ್ತ ಎಂದು ದಿನೇಶ್ ಲಾಡ್ ಹೇಳಿದ್ದಾರೆ. ಆದರೆ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತಷ್ಟು ದಿನ ಟೀಂ ಇಂಡಿಯಾದಲ್ಲಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತದ ನಾಯಕರ ಪೈಕಿ ರೋಹಿತ್ 3ನೇ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸೌರವ್ ಗಂಗೂಲಿ ನೇತೃತ್ದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಬಳಿಕ ಧೋನಿ ಇದೀಗ ರೋಹಿತ್ ನಾಯಕತ್ವದಲ್ಲೂ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ನಾಯಕ ರೋಹಿತ್ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. 

ರೋಹಿತ್ ಶರ್ಮಾ ವಿದಾಯದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ರೋಹಿತ್ ಶರ್ಮಾ ಮುಂದಿನ ಏಕದಿನ ವಿಶ್ವಕಪ್ ವರೆಗೂ ಆಡಬೇಕು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮುಂದಿನ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟು ರೋಹಿತ್ ಶರ್ಮಾ ವಿದಾಯ ಹೇಳಬೇಕು. ಅಲ್ಲೀವರೆಗೂ ರೋಹಿತ್ ತಂಡವನ್ನು ಮುನ್ನಡೆಬೇಕು ಎಂದಿದ್ದಾರೆ.

ಸಚಿನ್, ದ್ರಾವಿಡ್ ದಿಗ್ಗಜರ ಸಾಲಿಗೆ ರೋಹಿತ್, ದಾಖಲೆ ಬರೆದರೂ ಆತಂಕದಲ್ಲಿ ನಾಯಕ