ಆರ್‌ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ, ಸ್ಕೋಡಾ ಕಾರನ್ನು ಸಂಪೂರ್ಣವಾಗಿ ಆರ್‌ಸಿಬಿ ಮಯ ಮಾಡಿದ್ದಾರೆ. ಈ ಕಾರು ಕನ್ನಡ ಬೆಂಗಾಲಿ ದಂಪತಿಗಳ ಕಣ್ಣಿಗೆ ಬಿದ್ದು ಇದೀಗ ಭಾರಿ ವೈರಲ್ ಆಗಿದೆ.
ಬೆಂಗಳೂರು (ಏ.20) ಐಪಿಎಲ್ 2026 (IPl 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳೆದ ಪಂದ್ಯದಲ್ಲಿ ತವರಿನಲ್ಲಿ ಮುಗ್ಗರಿಸಿದೆ. ಆದರೆ ಆರ್‌ಸಿಬಿ ಅಭಿಮಾನಿಗಳಿಗೆ ಸೋಲು ಬೇಸರವಾಗಬಹುದು, ಆದರೆ ತಂಡಕ್ಕೆ ನೀಡಿದ ಬೆಂಬಲಕ್ಕೆ ಯಾವುದೇ ಕೊರತೆಯಾಗದು. ಇದರ ನಡುವೆ ಕ್ರೇಝಿ ಆರ್‌ಸಿಬಿ ಅಭಿಮಾನಿಯೊಬ್ಬರು ತಮ್ಮ ಕಾರನ್ನೇ ಆರ್‌ಸಿಬಿ ಮಯ ಮಾಡಿದ್ದಾರೆ. ಆರ್‌ಸಿಬಿ ತಂಡದ, ಲೋಗೋ, ರೆಡ್ ಹಾಟನ್ನೇ ತಮ್ಮ ಕಾರಿಗೆ ಸ್ಟಿಕ್ಕರಿಂಗ್ ಮಾಡಿಸಿದ್ದಾರೆ. ಇದೀಗ ಈ ಕಾರು ಎಲ್ಲೇ ಹೋದರು ಎಲ್ಲರ ಗಮನಸೆಳೆಯುತ್ತಿದೆ.
ಕನ್ನಡ ಹಾಗೂ ಬೆಂಗಾಳಿ ದಂಪತಿಗಳ ಮಿಸ್ಟರ್ ಆ್ಯಂಡ್ ಮಿಸೆಸ್ ಅಲುವರಾ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಕ್ರೇಝಿ ಆರ್‌ಸಿಬಿ ಅಭಿಮಾನಿಯ ಕಾರನ್ನು ಬಹಿರಂಗಪಡಿಸಿದ್ದಾರೆ. ಈ ಕಾರು ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತಿದ್ದಂತೆ ಹಲವು ವ್ಲಾಗರ್ಸ್ ಈ ಕಾರಿನ ಕುರಿತು ವಿಡಿಯೋ ಮಾಡಿದ್ದಾರೆ.
ಸ್ಕೋಡಾ ಕಾರಿನ ಲುಕ್ ಚೇಂಜ್
ಸ್ಕೋಡಾ ಕಾರಿನ ಮುಂಭಾಗದ ಬಾನೆಟ್ ಮೇಲೆ ಸಂಪೂರ್ಣ ಆರ್‌ಸಿಬಿ ತಂಡ, ಲೋಗೋ, ಪ್ಲೇಯರ್ಸ್ ಫೋಟೋಗಳ ಸ್ಟಿಕ್ಕರಿಂಗ್ ಮಾಡಲಾಗಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಸೇರಿದಂತೆ ಇಡೀ ತಂಡದ ಪ್ಲೇಯರ್ಸ್ ಸಂಭ್ರಮಾಚರಣೆ ಸ್ಟಿಕ್ಕರಿಂಗ್ ಕಾರಿನ ಹೈಲೈಟ್ಸ್. ಇನ್ನು ಮಧ್ಯಭಾಗದಲ್ಲಿ ದೊಡ್ಡದಾದ ಲೋಗೋ ಹಾಕಲಾಗಿದೆ. ಇತ್ತ ಕಾರಿನ ಟಾಪ್ ಸೈಡ್, ಮಿರರ್ ಕಡೆಯಲ್ಲೂ ಆರ್‌ಸಿಬಿ ರೆಡ್ ಹಾಟ್ ಸ್ಟಿಕ್ಕರಿಂಗ್ ಹಾಕಲಾಗಿದೆ.
ಆರ್‌ಸಿಬಿ ಸ್ಟಿಕ್ಕರಿಂಗ್‌ನಿಂದ ಕಾರಿನ ಮೌಲ್ಯ ಹೆಚ್ಚಳ
ಕನ್ನಡ ಬೆಂಗಾಲಿ ದಂಪತಿಗಳು ಕಾರಿನ ಮಾಲೀಕನನ್ನು ಮಾತನಾಡಿಸಿದ್ದಾರೆ. ಈ ವೇಳೆ ಇದು ಕನ್ನಡಿಗರ ಹೆಮ್ಮೆಯ ಆರ್‌ಸಿಬಿ. ಇದು ನಮ್ಮ ಗುರುತು ಹಾಗೂ ಸಂಭ್ರಮ ಎಂದಿದ್ದಾರೆ. ಈ ಕಾರಿಗೆ ಹೆಚ್ಚಿನ ಮೌಲ್ಯವಿಲ್ಲ. ಆದರೆ ಆರ್‌ಸಿಬಿ ಸ್ಟಿಕ್ಕರಿಂಗ್ ಹಾಕಿದ ಬಳಿಕ ಕಾರಿನ ಮೌಲ್ಯ ಹೆಚ್ಚಾಗಿದೆ. ಎಲ್ಲೋ ಹೋದರು ಅಭಿಮಾನಿಗಳು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ.ಮಾತನಾಡುತ್ತಾರೆ. ಇದು ಆರ್‌ಸಿಬಿ ತಂಡಕ್ಕೆ ಮಾತ್ರವಲ್ಲ, ಆರ್‌ಸಿಬಿ ಪರ ಗುರುತಿಸಿಕೊಂಡರೆ ಸಾಕು ತನ್ನಷ್ಟಕ್ಕೆ ಮೌಲ್ಯ ಹೆಚ್ಚಾಗುತ್ತದೆ ಎಂದು ಮಾಲೀಕ ಹೇಳಿದ್ದಾರೆ.
ಕಾರಿನ ಒಳಗೂ ಅದ್ಭುತ ಇಂಟಿರಿಯರ್ ಮಾಡಿಸಿದ್ದಾರೆ. ಕ್ರೇಜಿ ಫ್ಯಾನ್ಸ್ ಇದೀಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಈ ಅಭಿಮಾನಿಯ ಕಾರು ಸೋಶಿಯಲ್ ಮೀಡಿಯಾದಲ್ಲೂ ಇದೀಗ ರಾರಾಜಿಸುತ್ತಿದೆ.


