ಟಿ20 ವಿಶ್ವಕಪ್ ಇತಿಹಾಸದಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಭಾರತವು ತನ್ನ ಪಾರಮ್ಯವನ್ನು ಮುಂದುವರಿಸಿದೆ. 2007 ರಿಂದ 2024ರ ವರೆಗಿನ ಪಂದ್ಯಗಳಲ್ಲಿ 8-1 ಅಂತರದ ಗೆಲುವಿನ ದಾಖಲೆ ನಿರ್ಮಿಸಿದ್ದು, ಈ ಲೇಖನವು ಪ್ರತಿ ವಿಶ್ವಕಪ್ನಲ್ಲಿನ ರೋಚಕ ಗೆಲುವುಗಳ ವಿವರಗಳನ್ನು ನೀಡುತ್ತದೆ.
ಸೂರ್ಯ ಅ್ಯಂಡ್ ಗ್ಯಾಂಗ್ ಕೊಲಂಬೋ ವಾರ್ನಲ್ಲಿ ಪಾಕ್ ಸಂಹಾರ ಮಾಡುವಲ್ಲಿ ಸಕ್ಸಸ್ ಆಗಿದೆ. ಅಲ್ಲಿಗೆ ಸ್ಕೈ ಬಳಗ ಬದ್ಧವೈರಿ ಪಾಕ್ಗೆ ನನ್ನ ನೀನು ಗೆಲ್ಲಲಾರೆ ಅನ್ನೋದನ್ನ ಅಗೈನ್ ಪ್ರೂವ್ ಮಾಡಿದೆ. ಒಣ ಪೌರುಷ ತೋರಿಸುವ ಪಾಕ್ ವಿಶ್ವಕಪ್ನಲ್ಲಿ ಭಾರತ ವಿರುದ್ಧ ಹೇಗೆಲ್ಲಾ ಶರಣಾಗಿದೆ ಅನ್ನೋದನ್ನ ನೋಡ್ಕೊಂಡು ಬರೋಣ ಬನ್ನಿ.
ವಿಶ್ವಕಪ್ ಯುದ್ಧಭೂಮಿಯಲ್ಲಿ ಸಾಟಿಯಾಗದ ಪಾಕಿಸ್ತಾನ
ಹೈ ಥ್ರಿಲ್ಲಿಂಗ್ ಪಂದ್ಯ ನಿರೀಕ್ಷಿಸಿದ್ದ ಫ್ಯಾನ್ಸ್ಗೆ ಬಿಗ್ಗೆಸ್ಟ್ ರೈವರ್ಲಿ ನಿರಾಸೆ ಮಾಡಿದೆ. ಟೀಂ ಇಂಡಿಯಾದ ಬೆಂಕಿ ಆಟದ ಮುಂದೆ ಪಾಕ್ ಪತರುಗುಟ್ಟಿದೆ. ಗೆಲ್ಲೋದಿರ್ಲಿ, ಗೆಲುವಿನ ಸನಿಹಕ್ಕೂ ಬಾರದೇ ದೊಡ್ಡ ಮಾರ್ಜಿನ್ನಲ್ಲಿ ಮುಗ್ಗರಿಸಿ ವಿಶ್ವದೆದುರು ಅಗೈನ್ ಅವಮಾನಕ್ಕೆ ತುತ್ತಾಗಿದೆ. ಆ ಮೂಲಕ ಯಂಗಿಸ್ತಾನ ಮೇಲೆ ದಂಡಯಾತ್ರೆ ಮುಂದುವರಿಸಿದ್ದು ವಿಕ್ಟರಿ ಓಟವನ್ನ 8-1ಕ್ಕೆ ಹೆಚ್ಚಿಸಿಕೊಂಡಿದೆ. 2007 ರಿಂದ 2026ರ ವರೆಗೆ ಭಾರತೀಯ ಹುಲಿಗಳ ವಿಕ್ಟರಿ ಘರ್ಜನೆ ಹೇಗಿದೆ ನೋಡೋಣ ಬನ್ನಿ
ವರ್ಷ - 2007 ಗುಡುಗಿದ ಗೌತಿ, ಪಾಕ್ ಸ್ಟನ್!
ಬದ್ಧವೈರಿ ವಿರುದ್ಧ ಟೀಂ ಇಂಡಿಯಾ ಗೆಲುವಿನ ಓಂಕಾರ ಹಾಕಿದ್ದೇ 2007 ರಲ್ಲಿ. ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಗಂಭೀರ್ ಪಾಕ್ ತಂಡವನ್ನ ಬೆಂಡೆತ್ತಿದ್ರು. ಗೌತಿ ಅರ್ಧಶತಕದ ನೆರವಿನಿಂದ ಭಾರತ ಎದುರಾಳಿಗೆ 158 ರನ್ ಗುರಿ ನೀಡಿತ್ತು. ಪ್ರತಿರೋಧ ವೊಡ್ಡಿದ ಪಾಕ್ ಕೊನೆ ಹಂತದಲ್ಲಿ 5 ರನ್ಗಳಿಂದ ಸೋಲೊಪ್ಪಿಕೊಳ್ತು.
ವರ್ಷ - 2012: ಭಾರತ ಪ್ರಚಂಡ ಜಯಭೇರಿ
5 ವರ್ಷಗಳ ಬಳಿಕ ಸಾಂಪ್ರದಾಯಿಕ ಎದುರಾಳಿಗಳು ವಿಶ್ವಕಪ್ ರಣರಂಗದಲ್ಲಿ ಮತ್ತೆ ಎದುರಾದ್ವು. ಆಗಲೂ ಪಾಕ್ ಅನುಭವಿಸಿದ್ದು ಸೋಲಿನ ಅವಮಾನವೇ. ಪಾಕ್ ನೀಡಿದ 129 ರನ್ ಗುರಿಯನ್ನ ಭಾರತ ಇನ್ನೂ 3 ಓವರ್ಸ್ ಬಾಕಿ ಇರುವಂತೆಯೇ ವಿಜಯ ಪತಾಕೆ ಹಾರಿಸ್ತು.
ವರ್ಷ - 2014: ಕೊಹ್ಲಿ ಅಬ್ಬರ, ಪಾಕ್ ಸಂಹಾರ!
ಬಾಂಗ್ಲಾದೇಶದ ಮಿರ್ಪುರದಲ್ಲಿ ಇಂಡೋ-ಪಾಕ್ ತಂಡಗಳು ಮುಖಾಮುಖಿಯಾಗಿದ್ವು. ಲೋ ಸ್ಕೋರ್ ಗೇಮ್ನಲ್ಲಿ ಕಿಂಗ್ ಕೊಹ್ಲಿ ಬಿರುಸಿನ 36 ರನ್ ಸಿಡಿಸಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ್ರು.
ವರ್ಷ - 2016 ವಿರಾಟ್ ಘರ್ಜನೆಗೆ ಪಾಕ್ ಥಂಡಾ..!
2016 ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲೂ ಕಿಂಗ್ ಕೊಹ್ಲಿ ಅಗೈನ್ ಪಾಕ್ಗೆ ಸಿಂಹಸ್ವಪ್ನರಾಗಿ ಕಾಡಿದ್ರು. ವಿರಾಟ್ ಅತ್ಯಾಮೋಘ 55 ರನ್ಗಳ ನೆರವಿನಿಂದ ಭಾರತ ತಂಡ ಇನ್ನೂ 13 ಬಾಲ್ಸ್ ಬಾಕಿ ಇರುವಂತೆಯೇ ಗೆಲುವಿನ ಝೇಂಕಾರ ಮೊಳಗಿಸ್ತು.
ವರ್ಷ - 2021 ಭಾರತಕ್ಕೆ ಸೋಲಿನ ಪಾಠ
2007 ರಿಂದ ಅಜೇಯ ಓಟ ಮುಂದುವರಿಸಿದ್ದ ಟೀಂ ಇಂಡಿಯಾಗೆ ಫಸ್ಟ್ ಟೈಮ್ ಪಾಕ್ ತಂಡ ಭಾರತವನ್ನ ಬೇಟೆಯಾಡ್ತು. 152 ರನ್ಗಳ ಗುರಿಯನ್ನು ಬಾಬರ್ ಹಾಗೂ ರಿಜ್ವಾನ್ ತಲಾ ಅರ್ಧಶತಕ ಬಾರಿಸಿ 10 ವಿಕೆಟ್ಗಳ ದೊಡ್ಡ ವಿಕ್ಟರಿ ತಂದುಕೊಟ್ರು.
ವರ್ಷ - 2022 ಮೆಲ್ಬರ್ನ್ನಲ್ಲಿ ಮೆತ್ತಗಾದ ಪಾಕ್
ಮೊದಲ ಬಾರಿ ಪಾಕ್ಗೆ ತಲೆಬಾಗಿದ ಭಾರತ ತಂಡ ಮುಂದಿನ ವಿಶ್ವಕಪ್ನಲ್ಲಿ ಮತ್ತೆ ಪುಟಿದೇಳ್ತು. 2022 ರಲ್ಲಿ ಮೆಲ್ಬರ್ನ್ನಲ್ಲಿ ನಡೆದ ದಂಗಲ್ನಲ್ಲಿ ವಿರಾಟ್ ಕೊಟ್ಟ ಛಡಿ ಏಟಿಗೆ ಪಾಕ್ ಪತರುಗುಟ್ತು. ಕೊನೆ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿ ಸಂಭ್ರಮಿಸ್ತು.
ವರ್ಷ - 2024 ಬೆಂಕಿ ಬುಮ್ರಾ, ಪಾಕಿಸ್ತಾನ ಹರೋಹರ!
ನ್ಯೂಯಾರ್ಕ್ನಲ್ಲಿ ನಡೆದ 2024ರ ಟಿ20 ವಿಶ್ವಕಪ್ನಲ್ಲಿ ಕ್ರಿಕೆಟ್ ದುಷ್ಮನ್ಸ್ ಎದುರಾಗಿದ್ವು. ಹೈ ಥ್ರಿಲ್ಲಿಂಗ್ ಗೇಮ್. 120 ರನ್ ಸವಾಲು ಬೆನ್ನಟ್ಟಿದ ಪಾಕಿಸ್ತಾನ ತಂಡ 6 ರನ್ಗಳಿಂದ ರೋಹಿತ್ ಪಡೆಗೆ ಶರಣಾಗಿತ್ತು.
ಸದ್ಯ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ವಿಕ್ಟರಿ ಓಟವನ್ನ 8-1ಕ್ಕೆ ಹೆಚ್ಚಿಸಿಕೊಂಡಿರೋದು ಟೀಮ್ ಇಂಡಿಯಾ ಪಾರಮ್ಯಕ್ಕೆ ಸಾಕ್ಷಿಯಾಗಿದೆ.
ಮಾಗುಂಡಯ್ಯ ಪಟ್ಟೇದ್ ಸ್ಪೋರ್ಟ್ಸ್ ಬ್ಯೂರೋ,ಏಷ್ಯಾನೆಟ್ ಸುವರ್ಣನ್ಯೂಸ್


