ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈವರೆಗಿನ ಎಲ್ಲಾ ಏಕದಿನ ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆದ್ದಿರುವ ಭಾರತ, ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. 

ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಶ್ರೀಲಂಕಾ ವಿರುದ್ಧ ಗೆದ್ದಿದ್ದ ಭಾರತ ಸತತ 2ನೇ ಜಯದ ನಿರೀಕ್ಷೆಯಲ್ಲಿದೆ.

ಪಾಕ್ ಮೇಲೆ ಭಾರತ ಸಂಪೂರ್ಣ ಮೇಲುಗೈ

ಭಾರತ-ಪಾಕ್ ಮಹಿಳಾ ತಂಡಗಳು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 24ರಲ್ಲಿ ಗೆದ್ದಿದೆ. ಏಕದಿನದಲ್ಲಿ ಭಾರತ ಎಲ್ಲಾ 11 ಪಂದ್ಯಗಳಲ್ಲಿ ಗೆದ್ದಿದ್ದು, ಶೇ.100 ಗೆಲುವಿನ ದಾಖಲೆ ಹೊಂದಿದೆ. ಆದರೆ ಭಾನುವಾರದ ಪಂದ್ಯದಲ್ಲಿ ಫಲಿತಾಂಶಕ್ಕಿಂತಲೂ ಹೆಚ್ಚಾಗಿ, ಭಾರತೀಯ ಆಟಗಾರ್ತಿಯರ ನಡೆ ಬಗ್ಗೆ ಕುತೂಹಲವಿದೆ.

ಪಾಕ್ ಆಟಗಾರ್ತಿಯರ ಜತೆ ಭಾರತೀಯರು ಕೈಲುಕೋದೇ ಡೌಟ್

ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದು ಮಹಿಳಾ ವಿಶ್ವಕಪ್ ನಲ್ಲೂ ಮುಂದುವರಿಯುವ ಸಾಧ್ಯತೆ ಹೆಚ್ಚು ಈ ಬಗ್ಗೆ ಬಿಸಿಸಿಐ ಅಧಿಕಾರಿಗಳೇ ಸುಳಿವು ನೀಡಿದ್ದು, ಭಾರತೀಯ ಆಟಗಾರ್ತಿರು ಪಾಕ್ ಜೊತೆ ಕೈಕುಲುವುದಿಲ್ಲ ಎಂದಿದ್ದರು. ಭಾರತ ತಂಡವನ್ನು ಹರ್ಮನ್‌ಪ್ರೀತ್ ಕೌರ್, ಪಾಕ್ ತಂಡವನ್ನು ಫಾತಿಮಾ ಸನಾ ಮುನ್ನಡೆಸಲಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆಗೆ

ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋಹಾಟ್‌ಸ್ಟಾರ್.

ಪಂದ್ಯ ರದ್ದು

ಶನಿವಾರ ಕೊಲಂಬೊದಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಭಾರೀ ಮಳೆಯಿಂದಾಗಿ ಟಾಸ್ ಕೂಡಾ ನಡೆಯಲಿಲ್ಲ.