ಮುಂಬೈ ಇಂಡಿಯನ್ಸ್ ಕೇವಲ 2.75 ಕೋಟಿ ರು.ನೊಂದಿಗೆ ಹರಾಜಿಗೆ ಆಗಮಿಸಲಿದೆ. ಆದರೆ, ಕೆಕೆಆರ್ ಬಳಿ 64.30 ಕೋಟಿ ರು. ಬಾಕಿ ಇದ್ದು, ಕೆಲ ದುಬಾರಿ ಖರೀದಿಗಳನ್ನು ಮಾಡುವ ನಿರೀಕ್ಷೆ ಇದೆ.
- ಅದೃಷ್ಟ ಪರೀಕ್ಷೆಗೆ ಇಳಿಯಲಿರುವ ಒಟ್ಟು 359 ಆಟಗಾರರು
ಅಬುಧಾಬಿ: 2026ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ಇಲ್ಲಿ ನಡೆಯಲಿದ್ದು, ಖಾಲಿ ಇರುವ 77 ಸ್ಥಾನಗಳನ್ನು ಭರ್ತಿ ಮಾಡಲು ಒಟ್ಟು 359 ಆಟಗಾರರ ಹರಾಜು ನಡೆಯಲಿದೆ. 10 ತಂಡಗಳು ಸೇರಿ ಒಟ್ಟು 237.55 ಕೋಟಿ ರು. ಹಣ ಬಾಕಿ ಉಳಿಸಿಕೊಂಡಿದ್ದು, ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಈ ಸಲದ ಹರಾಜಿನಲ್ಲಿ ದುಬಾರಿ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಕ್ವಿಂಟನ್ ಡಿ ಕಾಕ್, ಲಿಯಾಮ್ ಲಿವಿಂಗ್ಸ್ಟೋನ್, ಭಾರತದ ಯುವ ಪ್ರತಿಭೆಗಳಾದ ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ಅಶೋಕ್ ಶರ್ಮಾ ಕೂಡ ದೊಡ್ಡ ಮೊತ್ತ ಆಕರ್ಷಿಸಬಹುದು.
ಮುಂಬೈ ಇಂಡಿಯನ್ಸ್ ಕೇವಲ 2.75 ಕೋಟಿ ರು.ನೊಂದಿಗೆ ಹರಾಜಿಗೆ ಆಗಮಿಸಲಿದೆ. ಆದರೆ, ಕೆಕೆಆರ್ ಬಳಿ 64.30 ಕೋಟಿ ರು. ಬಾಕಿ ಇದ್ದು, ಕೆಲ ದುಬಾರಿ ಖರೀದಿಗಳನ್ನು ಮಾಡುವ ನಿರೀಕ್ಷೆ ಇದೆ.
ಈಗಾಗಲೇ ಎಲ್ಲಾ 10 ತಂಡಗಳು ಹಲವು ಆಟಗಾರರು ರೀಟೈನ್ ಮಾಡಿಕೊಂಡಿವೆ. ಪ್ರತಿ ತಂಡ ಕನಿಷ್ಠ 18, ಗರಿಷ್ಠ 25 ಆಟಗಾರರನ್ನು ಹೊಂದಬಹುದು.
ಹರಾಜು ಪ್ರಕ್ರಿಯೆ ಆರಂಭ: ಮಧ್ಯಾಹ್ನ 2.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ತಂಡಗಳ ಅವಶ್ಯಕತೆ ಏನು?
ಆರ್ಸಿಬಿ: ಹೇಜಲ್ವುಡ್ಗೆ ಒಬ್ಬ ಬ್ಯಾಕ್ಅಪ್ ವಿದೇಶಿ ವೇಗಿ, ಲಿವಿಂಗ್ಸ್ಟೋನ್ ಬದಲು ಮಧ್ಯಮ ಕ್ರಮಾಂದ ಬ್ಯಾಟರ್.
ಸಿಎಸ್ಕೆ: ವಿದೇಶಿ ಆಲ್ರೌಂಡರ್/ಫಿನಿಶರ್, ಪತಿರನ ಬದಲು ವಿದೇಶಿ ವೇಗಿ, ಜಡೇಜಾ ಸ್ಥಾನ ತುಂಬಬಲ್ಲ ಆಲ್ರೌಂಡರ್.
ಡೆಲ್ಲಿ: ಮೆಕ್ಗರ್ಕ್, ಡುಪ್ಲೆಸಿ ಬದಲು ಆರಂಭಿಕ ಬ್ಯಾಟರ್, ಮಧ್ಯಮ ಕ್ರಮಾಂಕದ ಬ್ಯಾಟರ್, ಸ್ಟಾರ್ಕ್ಗೆ ಬ್ಯಾಕ್ಅಪ್ ವೇಗಿ.
ಗುಜರಾತ್: ಮಧ್ಯಮ ಕ್ರಮಾಂಕದ ಬ್ಯಾಟರ್/ಫಿನಿಶರ್, ರಬಾಡಗೆ ಬ್ಯಾಕ್ಅಪ್ ವೇಗಿ, ರಶೀದ್ಗೆ ಬ್ಯಾಕ್ಅಪ್ ಸ್ಪಿನ್ನರ್.
ಕೆಕೆಆರ್: ಕೀಪಿಂಗ್ ಮಾಡಬಲ್ಲ ಸ್ಫೋಟಕ ಆರಂಭಿಕ, ರಸೆಲ್ ಜಾಗ ತುಂಬಬಲ್ಲ ಆಲ್ರೌಂಡರ್, ಕನಿಷ್ಠ ಇಬ್ಬರು ವೇಗಿಗಳು.
ಲಖನೌ: ಮಿಲ್ಲರ್ ಸ್ಥಾನ ತುಂಬಬಲ್ಲ ಫಿನಿಶರ್, ಮೀಸಲು ಭಾರತೀಯ ವೇಗಿಗಳು, ಬಿಷ್ಣೋಯ್ ಬದಲು ಗುಣಮಟ್ಟದ ಸ್ಪಿನ್ನರ್.
ಮುಂಬೈ: ಬ್ಯಾಟ್ ಮಾಡಬಲ್ಲ ಎಡಗೈ ಸ್ಪಿನ್ನರ್, ಅಗ್ರ ಕ್ರಮಾಂಕದಲ್ಲಿ ಆಡಬಲ್ಲ ಬ್ಯಾಟರ್, ಎಡಗೈ ವೇಗದ ಬೌಲರ್.
ಪಂಜಾಬ್: ಇಂಗ್ಲಿಸ್ ಜಾಗಕ್ಕೆ ಸ್ಫೋಟಕ ಬ್ಯಾಟರ್, ಮೀಸಲು ಸ್ಪಿನ್ನರ್, ಮ್ಯಾಕ್ಸಿ ಬದಲು ಆಲ್ರೌಂಡರ್, ವಿದೇಶಿ ವೇಗಿ.
ರಾಜಸ್ಥಾನ: ರವೀಂದ್ರ ಜಡೇಜಾರನ್ನು ಸಮರ್ಥವಾಗಿ ಬೆಂಬಲಿಸಬಲ್ಲ ಸ್ಪಿನ್ನರ್, ಭಾರತೀಯ ವೇಗದ ಬೌಲರ್.
ಸನ್ರೈಸರ್ಸ್: ಅನುಭವಿ ಸ್ಪಿನ್ನರ್, ಶಮಿ ಬದಲು ಅನುಭವಿ ವೇಗಿ, ಆಲ್ರೌಂಡರ್ಗಳು, ಮಧ್ಯ ಕ್ರಮಾಂಕದ ಬ್ಯಾಟರ್ಸ್.
ಇದನ್ನೂ ಓದಿ: Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ
ತಂಡಗಳ ಲೆಕ್ಕಾಚಾರ
| ತಂಡ | ಬಾಕಿ ಇರುವ ಮೊತ್ತ (ಕೋಟಿ ರು.ಗಳಲ್ಲಿ) | ಖಾಲಿ ಸ್ಥಾನ | ಬೇಕಿರುವ ವಿದೇಶಿಗರು |
| ಆರ್ಸಿಬಿ | 16.40 | 8 | 2 |
| ಚೆನ್ನೈ | 43.40 | 9 | 4 |
| ಡೆಲ್ಲಿ | 21.80 | 8 | 5 |
| ಗುಜರಾತ್ | 12.90 | 5 | 4 |
| ಕೆಕೆಆರ್ | 64.30 | 13 | 6 |
| ಲಖನೌ | 22.95 | 6 | 4 |
| ಮುಂಬೈ | 2.75 | 5 | 1 |
| ಪಂಜಾನ್ | 11.50 | 4 | 2 |
| ರಾಜಸ್ಥಾನ | 16.05 | 9 | 1 |
| ಸನ್ ರೈಸರ್ಸ್ | 25.50 | 10 | 2 |


