ಮೇ ೨ರಂದು ಬೆಳಿಗ್ಗೆ 11:30ಕ್ಕೆ SSLC ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಬಿಡುಗಡೆ ಮಾಡುವರು. ೮.೯೬ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಅನುತ್ತೀರ್ಣರಾದವರಿಗೆ ಮರುಪರೀಕ್ಷೆ ಅವಕಾಶವಿದೆ. ಪೋಷಕರು ಮಕ್ಕಳಿಗೆ ಧೈರ್ಯ ತುಂಬಬೇಕು.
ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ವಿದ್ಯಾರ್ಥಿಯ ಜೀವನದಲ್ಲಿ ನಿರ್ಣಾಯಕ ಘಟ್ಟ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಇದೀಗ ಹತ್ತನೇ ತರಗತಿ ಫಲಿತಾಂಶ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೇ 2 ರಂದು ಮಾಧ್ಯಮಿಕ ಶಾಲಾ ರಜೆ ಪ್ರಮಾಣಪತ್ರ (SSLC-1) ಫಲಿತಾಂಶಗಳನ್ನು ಪ್ರಕಟಿಸಲು ತಯಾರಿ ನಡೆಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಳಿಗ್ಗೆ 11:30 ಕ್ಕೆ ಬೆಂಗಳೂರಿನ KSEAB ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ.
ಕರ್ನಾಟಕ SSLC-1 ಫಲಿತಾಂಶ 2025 SSLC-1 ಪರೀಕ್ಷೆಯ ಫಲಿತಾಂಶವನ್ನು https://karresults.nic.in/ ನಲ್ಲಿ ಪರಿಶೀಲಿಸಬಹುದು. SSLC-1 ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 4, 2025 ರವರೆಗೆ ಕರ್ನಾಟಕದ 2,818 ಕೇಂದ್ರಗಳಲ್ಲಿ ನಡೆದಿತ್ತು. ಇದರಲ್ಲಿ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಸೇರಿದಂತೆ ಸುಮಾರು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 240 ಕೇಂದ್ರಗಳಲ್ಲಿ 65,000 ಶಿಕ್ಷಕರು ಮೌಲ್ಯಮಾಪನ ಮಾಡಿದರು.
ಪ್ರಸ್ತುತ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮೇ 2 ರಂದು ಮಧ್ಯಾಹ್ನ 12 ರಿಂದ ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಕಳೆದ ವರ್ಷ ಅಂದರೆ 2024 ರಲ್ಲಿ, ಮೇ 9 ರಂದು ಘೋಷಿಸಲಾದ SSLC-1 ಫಲಿತಾಂಶಗಳು ಒಟ್ಟಾರೆ 73.40% ರಷ್ಟು ಫಲಿತಾಂಶ ರಾಜ್ಯದಲ್ಲಿ ಬಂದಿತ್ತು. ಉಡುಪಿ - ಪ್ರಥಮ ಸ್ಥಾನ (94%), ದಕ್ಷಿಣ ಕನ್ನಡ - ದ್ವೀತಿಯ ಸ್ಥಾನ(92.12%), ಶಿವಮೊಗ್ಗ- ತೃತೀಯ ಸ್ಥಾನ (88.67%) ಪಡೆದಿತ್ತು. ಯಾದಗಿರಿ - ಕೊನೇ ಸ್ಥಾನ - (ಶೇ.50.59) ಪಡೆದುಕೊಂಡಿತ್ತು.
ಮರುಮೌಲ್ಯಮಾಪನ ಅಥವಾ ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನು ಬಯಸುವ ವಿದ್ಯಾರ್ಥಿಗಳಿಗೆ ಕೆಎಸ್‌ಇಎಬಿ ನಿಬಂಧನೆಗಳನ್ನು ರೂಪಿಸಿದೆ, ಫಲಿತಾಂಶಗಳು ಪ್ರಕಟವಾದ ನಂತರ ವಿವರವಾದ ಮಾರ್ಗಸೂಚಿಗಳನ್ನು ಓದಿಕೊಂಡು ರೀ ವ್ಯಾಲ್ಯೂವೇಷನ್ ಗೆ ಹಾಕಬಹುದು.
KSEAB SSLC-1 ಫಲಿತಾಂಶ ನೋಡುವುದು ಹೇಗೆ?
karresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
SSLC Result 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ 2025 ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.
ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
Submit ಬಟನ್ ಮೇಲೆ ಕ್ಲಿಕ್ ಮಾಡಿ
ಫೇಲ್ ಆಯ್ತೆಂದು ಭಯ ಬೇಡ
ಹಿಂದೆಲ್ಲ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ (fail) ಆದರೆ ಮರು ಪರೀಕ್ಷೆಗಳನ್ನು ಬರೆಯಲು ಒಂದು ವರ್ಷ ಬೇಕಿತ್ತು. ಆದರೆ ಈಗ ಹಾಗಿಲ್ಲ ಒಟ್ಟು 2 ಅವಕಾಶಗಳು ಫೇಲ್ ಆದ ವಿದ್ಯಾರ್ಥಿಗಳಿಗೆ ಇರಲಿದೆ. ನೀವು ಪರೀಕ್ಷೆಯಲ್ಲಿ ಫೇಲ್ ಆದ್ರಿ ಎಂದರೆ ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ಅರ್ಥವಲ್ಲ. ಸವಾಲಿನ ಸಮಯದಲ್ಲೂ ಸಹ ಪಾಸಿಟಿವ್ ಆಗಿ ಉಳಿಯುವುದು ಅತ್ಯಗತ್ಯ. ನಿಮಗೆ ಭವಿಷ್ಯದಲ್ಲಿ ಸಾಧಿಸುವ ಗುರಿ ನಹಳಷ್ಟಿದೆ. ಪ್ರಪಂಚ ವಿಶಾಲವಾಗಿದೆ ಎಂಬುದನ್ನು ಮೊದಲು ಅರಿಯಿರಿ. ಅದೆಷ್ಟೋ ಗಣ್ಯ ವ್ಯಕ್ತಿಗಳು ನಿಮ್ಮ ಕಣ್ಣಮುಂದೆ ಉದಾಹರಣೆಯಾಗಿ ಇದ್ದಾರೆ. ಹೀಗಾಗಿ ಫೇಲ್ ಆಗಿದ್ದಕ್ಕೆ ಮನಸ್ಸಿನಲ್ಲಿ ನೆಗೆಟಿವ್ ಯೋಚನೆಗಳನ್ನು ಬಿಟ್ಟುಬಿಡಿ.
ಇದರ ಜೊತೆಗೆ ಪೋಷಕರು ತಮ್ಮ ಮಕ್ಕಳ ಕಡೆ ಹೆಚ್ಚು ಗಮನ ಹರಿಸಿ, ಅವರಿಗೆ ಒತ್ತಡ ನೀಡದೆ ಪಾಸಿಟಿವ್ ವಿಚಾರಗಳನ್ನು ತುಂಬಿ. ಮಕ್ಕಳಿಗೆ ವಿವಿಧ ಸೆಲೆಬ್ರಿಟಿ, IAS, IPS ಅಧಿಕಾರಿಗಳ ಸಾಧನೆಯ ಗುರಿ ಮತ್ತು ಯಶಸ್ಸಿನ ಬಗ್ಗೆ ತಿಳಿಸಿ.


