ಮಾಡಿದ ಕರ್ಮ ಎಲ್ಲಿಯೂ ಹೋಗುವುದಿಲ್ಲ. ಅದು ಒಳ್ಳೆಯದಾದರೂ ಸರಿ ಕೆಟ್ಟದಾಗಿದ್ದರೂ ಸರಿ.. ವಾಪಸ್ ಇಲ್ಲಗೆ ಬಂದೇ ಬರುತ್ತದೆ ತಾನೇ? ನಟ ವಿಷ್ಣುವರ್ಧನ್ ಅದನ್ನು ಯಾರಲ್ಲೂ ಹೇಳದಿದ್ದರೂ, ಇತ್ತೀಚೆಗೆ ಆ ಫ್ಯಾಮಿಲಿಯ ಮಹಿಳೆ ಹಾಗೂ ಆಕೆಯ ಗಂಡ ನಟ ವಿಷ್ಣುವರ್ಧನ್ ಮನೆಗೆ ಬಂದಿದ್ದರು. ಅಲ್ಲಿ ಭಾರತಿ..
ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರ ಬಗ್ಗೆ ಇತ್ತೀಚೆಗೇ ಹೆಚ್ಚು ಸಂಗತಿಗಳು ಓಡಾಡುತ್ತಿವೆ. ಈ ಸೋಷಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಜಮಾನದಲ್ಲಿ ಹಳೆಯ ಸ್ಟೋರಿಗಳೆಲ್ಲಾ ಹೊರಗೆ ಓಡೋಡಿ ಬರುತ್ತಿವೆ. ಅದರಲ್ಲೊಂದು ಕತೆ ತುಂಬಾ ಆಸಕ್ತಿದಾಯಕ ಎನ್ನಿಸುತ್ತಿದೆ, ನೋಡಿ.. ಇದು ನಟ ವಿಷ್ಣುವರ್ಧನ್ ಅವರ ಮಾತೃ ಹೃದಯ ಹಾಗೂ ಸಮಾಜಮುಖಿ ಕೆಲಸಕ್ಕೆ ಹಿಡಿದ ಕನ್ನಡಿಗೆ ಒಂದು ಉದಾಹರಣೆ ಅಷ್ಟೇ.
ಹೌದು, ನಟ ವಿಷ್ಣುವರ್ಧನ್ ಅವರು ಅಂದೊಮ್ಮೆ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯಾದವರು. ತೆರೆಯ ಮೇಲೆ ಸಾಹಸಸಿಂಹ ಇಮೇಜ್ ಇದ್ದರೂ ತೆರೆಮರೆಯಲ್ಲಿ ಅವರು ಮಮತಾಮಯಿ ಹಾಗೂ 'ಕರುಣಾಮಯಿ' ಆಗಿದ್ದರು. ಒಂದು ದಿನ ಶೂಟಿಂಗ್ ಸ್ಥಳಕ್ಕೆ ಬಂದ ಮಹಿಳೆಯೊಬ್ಬರು 'ನನ್ನ ಗಂಡ ತುಂಬಾ ಕುಡಿತಾರೆ. ಅವರು ಇರೋ ಬರೋ ಹಣವನ್ನೆಲ್ಲಾ ಹಾಳು ಮಾಡಿ ಸಂಸಾರವನ್ನು ಇದೀಗ ಬೀದಿಗೆ ತಂದುಬಿಟ್ಟಿದ್ದಾರೆ. ಇರಲಿಕ್ಕೆ ಇದ್ದ ಮನೆ ಕೂಡ ಈಗ ಹರಾಜು ಆಗುತ್ತಿದೆ. ಇನ್ಮುಂದೆ ಮಕ್ಕಳನ್ನು ಕಟ್ಟಿಕೊಂಡು ನಾನೆಲ್ಲಿ ಇರೋದು? ಗಂಡ ಕೂಡ ಕೆಟ್ಟವನೇನೂ ಅಲ್ಲ, ಆದರೆ ಕುಡುಕ' ಎಂದು ನಟ ವಿಷ್ಣು ಬಳಿ ತಮ್ಮ ಕಷ್ಟ ತೋಡಿಕೊಂಡರಂತೆ.
ತಕ್ಷಣ ನಟ ವಿಷ್ಣುವರ್ಧನ್ ಅವರು ಆ ಮಹಿಳೆ ಗಂಡನನ್ನು ಕರೆದು, ಅಷ್ಟೊಂದು ಕುಡಿಯೋದು ಬೇಡ. ಸ್ವಲ್ಪಸ್ವಲ್ಪವಾಗಿ ಕಡಿಮೆ ಮಾಡುತ್ತ ಬಂದು ಆದಷ್ಟು ಬೇಗ ಕುಡಿತ ನಿಲ್ಲಿಸಿಬಿಡು.. ನಿನ್ನ ಜೀವನೋಪಾಯಕ್ಕೆ ಆಟೋ ಒಂದನ್ನು ಕೊಡಿಸುತ್ತೇನೆ. ದುಡಿದು ಚೆನ್ನಾಗಿ ಬದುಕು. ಆದರೆ, ಇನ್ನು ಸಂಸಾರವನ್ನು ಮತ್ತೆ ಬೀದಿಗೆ ತಂದು ನಿಲ್ಲಿಸಬೇಡ' ಎಂದು ಹೇಳಿದರಂತೆ. ಜೊತೆಗೆ, ಕೊಟ್ಟ ಸಾಲಕ್ಕೆ ಅವರ ಮನೆಯನ್ನು ಜಪ್ತಿ ಮಾಡಬೇಕೆಂದಿದ್ದ ವ್ಯಕ್ತಿಗೆ ಅಗತ್ಯವಿದ್ದ ಸಾಲದ ಹಣವನ್ನು ಕೊಟ್ಟು, ಅವನಿಂದ ಮನೆಯಿಂದ ಉಳಿಸಿ ಬಂದಿದ್ದ ಆ ಮಹಿಳೆಯ ಸಂಸಾರಕ್ಕೆ ಆಸರೆ ಆಗಿದ್ದರಂತೆ. ಅದನ್ನವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ಆದರೆ, ಮಾಡಿದ ಕರ್ಮ ಎಲ್ಲಿಯೂ ಹೋಗುವುದಿಲ್ಲ. ಅದು ಒಳ್ಳೆಯದಾದರೂ ಸರಿ ಕೆಟ್ಟದಾಗಿದ್ದರೂ ಸರಿ.. ವಾಪಸ್ ಇಲ್ಲಗೆ ಬಂದೇ ಬರುತ್ತದೆ ತಾನೇ? ನಟ ವಿಷ್ಣುವರ್ಧನ್ ಅದನ್ನು ಯಾರಲ್ಲೂ ಹೇಳದಿದ್ದರೂ, ಇತ್ತೀಚೆಗೆ ಆ ಫ್ಯಾಮಿಲಿಯ ಮಹಿಳೆ ಹಾಗೂ ಆಕೆಯ ಗಂಡ ನಟ ವಿಷ್ಣುವರ್ಧನ್ ಮನೆಗೆ ಬಂದಿದ್ದರು. ಅಲ್ಲಿ ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ, ನಡೆದಿದ್ದ ಹಳೆಯ ಕಥೆಯನ್ನು ಹೇಳಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ? ಇಷ್ಟೂ ದಿನ ಹೊರಗೆ ಬಾರಿದ್ದ ಆ ಸತ್ಯಕಥೆ ಇಲ್ಲಿದೆ ನೋಡಿ..
'ನಿಮ್ಮ ಪತಿಯ ದಯೆಯಿಂದ ಇಂದು ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಆವತ್ತೇ ನನ್ನ ಗಂಡ ಕುಡಿಯೋದನ್ನ ಬಿಟ್ಟರು. ಚೆನ್ನಾಗಿ ಸಂಪಾದನೆ ಮಾಡಿ ಸ್ವಂತ ಮನೆಯನ್ನೂ ಮಾಡಿಕೊಂಡೆವು. ಇದೀಗ, ಮಕ್ಕಳು, ಮೊಮ್ಮಕ್ಕಳ ಜೊತೆಗೆ ಸುಖ-ಸಂತೋಷದಿಂದ ಜೀವನ ಮಾಡಿಕೊಂಡಿದ್ದೇವೆ. ನಾವಿಂದು ಚೆನ್ನಾಗಿ ಇರೋದಕ್ಕೆ ನಿಮ್ಮ ಯಜಮಾನರು ವಿಷ್ಣುವರ್ಧನ್ ಅವರೇ ಕಾರಣ ಎಂದು ಹೇಳಿ ವಿಷ್ಣು ಪತ್ನಿ ಭಾರತಿಗೆ ಕೈ ಮುಗಿದು ಹೊರಟಿದ್ದಾರೆ. ನಡೆದ ಈ ಘಟನೆಯನ್ನು ಇತ್ತೀಚೆಗೆ ವಿಷ್ಣುವರ್ಧನ್-ಭಾರತಿ ದತ್ತುಪುತ್ರಿ ಕೀರ್ತಿ ವಿಷ್ಣುವರ್ಧನ್ (ನಟ ಅನಿರುದ್ಧ ಪತ್ನಿ- Keerthi Vishnuvardhan) ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹೌದು, ನಟ ವಿಷ್ಣುವರ್ಧನ್ ಅವರು ತಾವು ಬದುಕಿದ್ದಾಗ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರೆಲ್ಲರ ಆಶೀರ್ವಾದ ಅವರ ಕುಟುಂಬವನ್ನು ಇಂದಿಗೂ ಕಾಪಾಡುತ್ತಿದೆ. ಅವರು ಮಾಡಿದ್ದ ಅದೆಷ್ಟೂ ಸಹಾಯ ಹೊರಗೆ ಬಂದೇ ಇಲ್ಲ. ಕಾರಣ, ಅವರೇ ಸ್ವತಃ 'ಎಲ್ಲೂ ಹೇಳಬಾರದು' ಎಂದು ಮಾತು ತೆಗೆದುಕೊಂಡೇ ಮಾಡಿರುವ ಸಹಾಯ.
ಆದರೆ, ಕೆಲವರು 'ಮಾತು ಕೊಟ್ಟಿದ್ದರೂ ಮಾಡಿದ್ದ ಒಳ್ಳೆಯ ಕೆಲಸವನ್ನು ಹೇಳಿಕೊಳ್ಳುವುದು ಅಪರಾಧ ಅಲ್ಲ' ಅಂತ ಗಟ್ಟಿ ಮನಸ್ಸು ಮಾಡಿ ಸಮಯ ಸಿಕ್ಕಾಗ ಹೇಳಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾಗಳ ಮೂಲಕ ಹೊರಜಗತ್ತಿಗೆ ಹರಡುತ್ತಿದ್ದೆ. ನಟ ವಿಷ್ಣುವರ್ಧನ್ ಅವರಿಂದ ಸಹಾಯ ಪಡೆದು ಬದುಕನ್ನು ಚೆನ್ನಾಗಿ ಕಟ್ಟಿಕೊಂಡ ಅದೆಷ್ಟೋ ಮಂದಿ 'ಸಲಾಂ' ಹೇಳುತ್ತಿದ್ದಾರೆ. ಅದು ಇನ್ನೂ ತುಂಬಾ ದಿನ ಗುಟ್ಟಾಗಿ ಉಳಿಯಲಾಗದು!



