Darshan Thoogudeepa The Devil Movie: ನಟ ದರ್ಶನ್‌ ತೂಗುದೀಪ, ರಚನಾ ರೈ, ಗಿಲ್ಲಿ ನಟ ಅಭಿನಯದ ‘ದಿ ಡೆವಿಲ್’‌ ಸಿನಿಮಾ ರಿಲೀಸ್‌ ಆಗಿದ್ದು, ಈ ಸಿನಿಮಾ ಹೇಗಿದೆ? ಥಿಯೇಟರ್‌ ಸುತ್ತ ಮುತ್ತ ಜನಸಾಗರವೇ ಸೇರಿದೆ. ಹಾಗಾದರೆ ಈ ಸಿನಿಮಾ ನೋಡಿದವರು ಏನು ಹೇಳಿದರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ನಟ ದರ್ಶನ್‌ ಅಭಿನಯದ ‘ದಿ ಡೆವಿಲ್’‌ ಸಿನಿಮಾ ( The Devil Movie ) ರಿಲೀಸ್‌ ಆಗಿದೆ. ಬೆಳ್ಳಂಬೆಳಗ್ಗೆ ಹಲವು ಕಡೆ ಫ್ಯಾನ್ಸ್‌ ಶೋ ಇಡಲಾಗಿತ್ತು. ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌, ನಟ ಧನ್ವೀರ್‌, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್‌ ಜೊತೆ ಸಿನಿಮಾ ನೋಡುತ್ತಿದ್ದಾರೆ.

ಸಿನಿಮಾ ರಿಲೀಸ್‌ಗೂ ಮುನ್ನ ಭರ್ಜರಿ ಗಳಿಕೆ

ನಟ ದರ್ಶನ್‌ ತೂಗುದೀಪ ನಟನೆಯ ‘ದಿ ಡೆವಿಲ್‌’ ಸಿನಿಮಾ ರಿಲೀಸ್‌ಗೂ ಮುನ್ನವೇ ಅಂದಾಜು 3.5 ಕೋಟಿ ರೂಪಾಯಿಗೂ ಅಧಿಕವಾಗಿ ಸಂಗ್ರಹಣೆ ಮಾಡಿದೆ. ಜೈ ಮಾತಾ ಮಾತಾ ಕಂಬೈನ್ಸ್‌ ಶನಿವಾರ‌ ಡೆವಿಲ್ ಸಿನಿಮಾ ನಿರ್ಮಾಣ ಸಂಸ್ಥೆ ಈ ಕುರಿತು ಪೋಸ್ಟರ್‌ ಬಿಡುಗಡೆ ಮಾಡಿದೆ. ‘ಒಂದು ಐಕಾನ್‌, ಒಂದು ಅತ್ಯುತ್ಸಾಹದ ಫ್ಯಾನ್ಸ್‌ ಬಳಗದಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ ರೂಪಾಯಿ’ ಎಂದು ತಿಳಿಸಿತ್ತು.

ಥಿಯೇಟರ್‌ನಲ್ಲಿ ಶೋ ಮೇಲೆ ಶೋ ಬುಕ್ಕಿಂಗ್

ಸದ್ಯ ಗಂಟೆಗೆ 11 ಸಾವಿರ ಟಿಕೆಟ್‌ ಬುಕಿಂಗ್‌ ಆಗಿದೆ. 55,000ಕ್ಕೂ ಅಧಿಕ ಫ್ಯಾನ್ಸ್‌ ಶೋಗಳ ಟಿಕೆಟ್‌ ಸೇಲ್‌ ಆಗಿತ್ತು ಎನ್ನಲಾಗಿದೆ. ಅಭಿಮಾನಿಗಳು ದರ್ಶನ್‌ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಛಲಕ್ಕೆ ಬಿದ್ದಿದ್ದಾರೆ. ಇವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್‌ ಆಗಿದೆ. ಹೀಗಾಗಿ ಶೋಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ‌ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ಅಂದಹಾಗೆ ಟಿಕೆಟ್‌ ದರ ಕೂಡ ಏರಿಕೆಯಾಗಿದೆ, ಗರಿಷ್ಠ ಟಿಕೆಟ್‌ ದರ 900 ರೂಪಾಯಿವರೆಗೆ ಏರಿಕೆಯಾಗಿದೆ. ಬಹುತೇಕ ಕಡೆ 500 ರೂಪಾಯಿಯಿಂದ 600 ರೂಪಾಯಿವರೆಗೂ ಟಿಕೆಟ್‌ ದರವಿದೆ.

ಸಿನಿಮಾ ಹೇಗಿದೆ? ಸೋಶಿಯಲ್‌ ಮೀಡಿಯಾದಲ್ಲಿ ಏನು ಹೇಳಿದ್ರು?

( ಮೊದಲ ಭಾಗದ ವಿಮರ್ಶೆ )

  • ಅಂದಹಾಗೆ ನಟ ದರ್ಶನ್‌ ಅವರ ಸಿನಿಮಾ ಎಂಟ್ರಿ ಮಾತ್ರ ಸೂಪರ್‌ ಆಗಿದೆಯಂತೆ.
  • ಸೂಪರ್‌ ಆಗಿದೆ
  • ದರ್ಶನ್‌ ನಟನೆ ಚೆನ್ನಾಗಿದೆ, 100 ದಿನಗಳು ಓಡುತ್ತವೆ
  • ಡಬಲ್‌ ಆಕ್ಟಿಂಗ್‌ ಚೆನ್ನಾಗಿದೆ
  • ಕಾಮಿಡಿ ಕಿಲಾಡಿ ಗಿಲ್ಲಿ ನಟ ಅಭಿನಯಿಸಿರೋದು ಚೆನ್ನಾಗಿದೆ
  • ಕಮರ್ಷಿಯಲ್‌ ಆಕ್ಷನ್‌ ಸಿನಿಮಾವಿದು
  • ಫಸ್ಟ್‌ ಹಾಫ್‌ ಚೆನ್ನಾಗಿದೆ
  • ಇಂಟ್ರಡಕ್ಷನ್‌ ಚೆನ್ನಾಗಿದೆ
  • ಕಳೆದು ಹೋಗಬೇಕು, ಆ ಥರ ಎಂಟ್ರಿ ಇದೆ
  • ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಇದೆ