ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಯಾವಾಗಲೂ ತುಂಬಾ ಸಿಂಪಲ್ ಆಗಿರುತ್ತಾರೆ. ಇಡೀ ವಿಶ್ವವೇ ಅವರನ್ನು ಗಮನಿಸುತ್ತಿದ್ದರೂ, ಅವರು ದುಬಾರಿ ಕಾರು, ಲೈಫ್‌ ಸ್ಟೈಲ್ ರೂಢಿಸಿಕೊಂಡಿಲ್ಲ. ಅತೀ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಿರೋದು ಅಭಿಮಾನಿಗಳು ಹಾಗೂ ಎಲ್ಲರ ಪ್ರೀತಿಗೆ ಕಾರಣ.

ಏಷ್ಯಾದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಂದ್ರೆ ಸುಮ್ನೆನಾ? ಅವ್ರು ಏರಿದ ಎತ್ತರ ಅಳೆಯೋದಕ್ಕೇ ಅಸಾಧ್ಯ ಎನ್ನಬಹುದು. ಸಿನಿಮಾದಲ್ಲಂತೂ ನಟ ರಜನಿಕಾಂತ್ ಅವರು ಸೂಪರ್ ಸ್ಟಾರ್. ಅದರ ಜೊತೆಜೊತೆಗೆ, ನಟ ರಜನಿ ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕ ವ್ಯಕ್ತಿ ಕೂಡ ಹೌದು. ಒಂದು ಕಾಲದಲ್ಲಿ ನಟ ರಜನಿಕಾಂತ್ ಅವರು ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದರು. ಆಗ ಅವರು ಅನಾರೋಗ್ಯಕ್ಕೆ ಈಡಾಗಿದ್ದರು.

ಯಾವಾಗ ನಟ ರಜನಿಕಾಂತ್ ಅವರು ಅನಾರೋಗ್ಯಕ್ಕೆ ತುತ್ತಾದರೋ, ಆಗಿನಿಂದ ಅವರು ತಮ್ಮ ಜೀವನದಲ್ಲಿ ಶಿಸ್ತು ರೂಢಿಸಿಕೊಂಡರು, ಆಧ್ಯಾತ್ಮಿಕ ದಾರಿಯಲ್ಲಿಯೂ ಸಾಗತೊಡಗಿದರು. ಅಲ್ಲಿಂದ ಮುಂದೆ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುವುದಕ್ಕೆ ಶುರು ಮಾಡಿದರು. ಆದರೂ ನಟ ರಜನಿಕಾಂತ್ ಜಿಮ್‌ನಲ್ಲಿ ಇರೋದನ್ನು ನೋಡಿದವರು ತೀರಾ ವಿರಳ, ನೋಡಿಯೇ ಇಲ್ಲ ಎನ್ನಲೂಬಹುದು! ಆದರೆ, ಇದೀಗ ಹೊಸ ಸುದ್ದಿಯೊಂದು ಬಂದಿದೆ.

ಇತ್ತೀಚೆಗೆ ರಜನಿಕಾಂತ್ ಜಿಮ್‌ನಲ್ಲಿ ವರ್ಕ್‌ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. 74ರ ವಯಸ್ಸಿನಲ್ಲೂ ನಟ ರಜನಿಕಾಂತ್ ಅವರು ಇಷ್ಟೊಂದು ಎನರ್ಜಿಟಿಕ್ ಆಗಿ ಇರಲು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರವೇ ರಜನಿಯ ಈ ಹೊಸ ಸುದ್ದಿ ಎನ್ನಬಹುದೇ? ಹೌದು, ನಟ ರಜನಿಕಾಂತ್ ಅವರು ಇದೀಗ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಹೌದು, ಎಲ್ಲಾ ಓಕೆ.. ಆದರೆ, ರಜನಿಕಾಂತ್ ಅವರು ಯಾವತ್ತಿನಿಮದ ಜಿಮ್‌ನಲ್ಲಿ ಕಸರತ್ತು ಮಾಡೋದಕ್ಕೆ ಶುರುಮಾಡಿದ್ದು ಅನ್ನೋದಕ್ಕೆ ನಿಖರವಾದ ಉತ್ತರ ಇನ್ನೂ ಸಿಕ್ಕಿಲ್ಲ. ರಜನಿಕಾಂತ್‌ ಅವರಿಗೆ ಕೇವಲ ಆಧ್ಯಾತ್ಮಿಕತೆ ಕಡೆಗಷ್ಟೇ ಒಲವು ಎಂದು ಕೊಂಡಿದ್ದವರೇ ಹೆಚ್ಚು. ಆದರೆ, ಆರೋಗ್ಯದ ಕಡೆಗೂ ಸಿಕ್ಕಾಪಟ್ಟೆ ಕಾಳಜಿ ವಹಿಸುವ ರಜನಿ, ಇತ್ತೀಚೆಗೆ 'ಕೂಲಿ' ಸಿನಿಮಾ ಆಡಿಯೋ ಲಾಂಚ್ ಇವೆಂಟ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಮಾತಾಡಿದ್ದರು. ತನ್ನ ಅಭಿಮಾನಿಗಳಿಗೆ ಹಾರ್ಟ್, ಲಿವರ್, ಕಿಡ್ನಿಯನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಕರೆ ನೀಡಿದ್ದರು.

ಹಾಗಿದ್ದರೆ, ನಟ ರಜನಿಕಾಂತ್ ಅವರು ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋದಲ್ಲಿ ಏನಿದೆ? ಅವರು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದಕ್ಕೆ ಏನೇನು ಮಾಡುತ್ತಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ನೋಡಿ...

ಜಿಮ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್:

ಹೌದು, ನಟ ರಜನಿಕಾಂತ್‌ಗೆ ಈಗ 74 ವರ್ಷ ಆಗಿದೆ. ಈ ವಯಸ್ಸಿನಲ್ಲಿ ಬೇರೆ ಯಾರೇ ಆಗಿದ್ದರೂ ಒಂದಿಷ್ಟು ದೂರ ವಾಕ್ ಮಾಡಿ ಸುಮ್ಮನೆ ಇದ್ದು ಬಿಡುತ್ತಾರೆ. ಆದರೆ, ನಟ ರಜನಿ ಹಾಗೆ ಮಾಡುತ್ತಿಲ್ಲ. ಜಿಮ್‌ನಲ್ಲಿಸ ಕಸರತ್ತು ಮಾಡುವ ಮೂಲಕ ತಾವಿನ್ನೂ ಜಿಮ್‌ನಲ್ಲಿ ವರ್ಕೌಟ್ ಮಾಡುವಷ್ಟು ಫೀಟ್ ಆಗಿದ್ದೇನೆ, ಹಾಗೂ ಇನ್ನೂ ಹೆಚ್ಚು ಫಿಟ್ ಆಗಲು ಬಯಸುತ್ತೇನೆ ಎಂಬ ಸಂದೇಶವನ್ನು ತಮ್ಮ ಫ್ಯಾನ್ಸ್ ಸೇರಿದಂತೆ ಇಡೀ ಜಗತ್ತಿಗೇ ಕೊಡುತ್ತಿದ್ದಾರೆ ಎನ್ನಬಹುದೇ?

ರಜನಿಕಾಂತ್ ಜಿಮ್‌ನಲ್ಲಿ ಕಸರತ್ತು ಮಾಡತೊಡಗಿದ್ದಾರೆ. ಅವರಿಗೆ ಅಂತಾನೇ ಒಬ್ಬರು ಟ್ರೈನರ್ ಇದ್ದಾರೆ. ಅವರು ಹೇಳಿಕೊಟ್ಟಂತೆ ರಜನಿಕಾಂತ್ ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲೂ ರಜನಿಕಾಂತ್ ಡಂಬಲ್ಸ್ ಹಿಡಿದು ವರ್ಕ್ ಔಟ್ ಮಾಡಿದ್ದಾರೆ. ಟ್ರೈನರ್ ಹೇಳಿದಂತೆ ಕಾಲುಗಳು ಹಾಗೂ ಕೈಗೆ ವ್ಯಾಯಾಮ ಮಾಡುತ್ತಿದ್ದಾರೆ.

ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಯಾವಾಗಲೂ ತುಂಬಾ ಸಿಂಪಲ್ ಆಗಿರುತ್ತಾರೆ. ಇಡೀ ವಿಶ್ವವೇ ಅವರನ್ನು ಗಮನಿಸುತ್ತಿದ್ದರೂ, ಅವರು ದುಬಾರಿ ಕಾರು, ಲೈಫ್‌ ಸ್ಟೈಲ್ ರೂಢಿಸಿಕೊಂಡಿಲ್ಲ. ಅತೀ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಿರೋದು ಅಭಿಮಾನಿಗಳು ಹಾಗೂ ಎಲ್ಲರ ಪ್ರೀತಿಗೆ ಕಾರಣ. ಯಾವತ್ತಿಗೂ ದೇಹ ಹಾಗೂ ಮನಸ್ಸನ್ನು ಫ್ರೆಶ್ ಆಗಿ ಇಟ್ಟುಕೊಳ್ಳುವ ಕಡೆಗೆ ಗಮನ ಹರಿಸುತ್ತಾರೆ ರಜನಿಕಾಂತ್.

ಪ್ರತಿದಿನ ವಾಕ್ ಮಿಸ್ ಮಾಡೋದೇ ಇಲ್ಲ. ಜೊತೆಗೆ, ಯೋಗವನ್ನು ಮಾಡುತ್ತಾರೆ. ಹಾಗೇ ಮಾನಸಿಕ ನೆಮ್ಮದಿಗೆ ಮೆಡಿಟೇಷನ್, ಯೋಗ ಮಾಡುತ್ತಾರೆ. ರಜನಿಕಾಂತ್ ಆಹಾರದಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟು. ಆರೋಗ್ಯಕರವಲ್ಲದ ಆಹಾರವನ್ನು ತಿನ್ನೋದಿಲ್ಲ, ಫಾಸ್ಟ್‌ಫುಡ್‌ಗಳನ್ನು ಮುಟ್ಟೋದೂ ಇಲ್ಲ. ಚೀಸ್, ಮಯೋನಿಸ್ ಹಾಗೂ ಕೊಬ್ಬು ಇರುವ ಮಾಂಸವನ್ನು ಸೇವಿಸುವುದಿಲ್ಲ. ಹಾಗೇ ಸಕ್ಕರೆ, ಅತಿಯಾದ ಉಪ್ಪು, ಸಿಹಿತಿಂಡಿಗಳನ್ನು ಅಪ್ಪಿತಪ್ಪಿಯೂ ಹೊಟ್ಟೆಯೊಳಕ್ಕೆ ಹಾಕೋದಿಲ್ಲ. ತಾಜಾ ಹಣ್ಣುಗಳು, ತರಕಾರಿಗಳು ಹಾಗೂ ಪ್ರೊಟೀನ್ ಯುಕ್ತ ಆಹಾರಗಳು ಬಳಸುತ್ತಾರೆಂದು ‘ಎನ್‌ಡಿ ಟಿವಿ’ ವರದಿ ಮಾಡಿದೆ.