ನಟಿ ವೈಷ್ಣವಿ ಗೌಡ ಅವರ ಮದುವೆ ನೆರವೇರಿದ್ದು, ಈ ಸಂದರ್ಭದಲ್ಲಿ ಅಗ್ನಿಸಾಕ್ಷಿಯಲ್ಲಿ ಕಾಟ ಕೊಟ್ಟಿದ್ದ ಚಂದ್ರಿಕಾಳ ಮೇಲೆ ಈಗ ಸೇಡು ತೀರಿಸಿಕೊಂಡ್ರಾ? ಏನಿದು ವಿಷ್ಯ?

ನಟಿ ವೈಷ್ಣವಿ ಗೌಡ ಅವರ ಮದುವೆ ನಿನ್ನೆ ಮಧ್ಯರಾತ್ರಿ ವಿಜೃಂಭಣೆಯಿಂದ ನೆರವೇರಿದೆ. ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ ಮದುವೆ ನಡೆದಿದೆ. ಈಗಾಗಲೇ ಹಳದಿ, ಮೆಹೆಂದಿ, ಸಂಗೀತ ಎಂದು ಕೆಲವು ದಿನಗಳಿಂದ ಕಾರ್ಯ ಆರಂಭವಾಗಿದ್ದರೂ ಮದುವೆ ಯಾವಾಗ ಎನ್ನುವುದು ಸಾಮಾನ್ಯ ಮಂದಿಗೆ ತಿಳಿದಿರಲಿಲ್ಲ. ಉತ್ತರ ಭಾರತದ ಶಾಸ್ತ್ರಗಳಾದ ಅರಿಶಿಣ ಶಾಸ್ತ್ರ, ಸಂಗೀತ, ಮೆಹಂದಿ ಕಾರ್ಯಕ್ರಮ ಇವೆಲ್ಲವೂ ಈಗ ದಕ್ಷಿಣದಲ್ಲಿಯೂ ಮಾಮೂಲಾಗಿದೆ. ಅದರಲ್ಲಿಯೂ ವೈಷ್ಣವಿ ಅವರ ಭಾವಿ ಪತಿ ಅನುಕೂಲ್​ ಅವರು ಅಲ್ಲಿಯವರೇ ಆಗಿರುವ ಕಾರಣ, ಈ ಶಾಸ್ತ್ರಗಳು ಅಲ್ಲಿಯ ಪದ್ಧತಿಯ ಅನ್ವಯ ನಡೆದಿದ್ದವು. ಇದಾಗಲೇ ನಟಿ ವೈಷ್ಣವಿ ಗೌಡ ಮತ್ತು ಅನುಕೂಲ್​ ಅವರ ವಿವಾಹ ಪೂರ್ವ ಕಾರ್ಯಗಳು ಭರ್ಜರಿಯಾಗಿ ಆರಂಭಗೊಂಡಿದ್ದು, ಅವುಗಳ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ಆದರೆ, ಎಂಗೇಜ್‌ಮೆಂಟ್‌ ಅನ್ನು ತುಂಬಾ ಸೀಕ್ರೇಟ್‌ ಆಗಿ ಮಾಡಿಕೊಂಡಂತೆ ಮದುವೆಯ ಡೇಟ್‌ ಕೂಡ ನಟಿ ಮೊದಲೇ ಸಾರ್ವಜನಿಕಗೊಳಿಸಿರಲಿಲ್ಲ. ಆದರೆ ಅವರ ತಾರಾ ಬಳಗ ಹಾಗೂ ಕುಟುಂಬಸ್ಥರಿಗೆ ಮಾತ್ರ ತಿಳಿದಿದ್ದರಿಂದ ಸಿನಿ ತಾರೆಯರು ಆಗಮಿಸಿ ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ. ಇದರ ನಡುವೆಯೇ ಇದೀಗ ಕುತೂಹಲದ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ, ಬಿಗ್‌ಬಾಸ್‌ ಖ್ಯಾತಿಯ ಪ್ರಿಯಾಂಕಾ ಸೇರಿದಂತೆ ಸೀತಾರಾಮ ಸೀರಿಯಲ್‌ ತಂಡ ಹಾಗೂ ಇನ್ನು ಇತರ ತಾರಾ ಬಳಗವನ್ನು ಈ ವಿಡಿಯೋದಲ್ಲಿ ನೋಡಬಹುದು. ವೈಷ್ಣವಿ ಗೌಡ ಅವರು ಎಲ್ಲರನ್ನೂ ಮಾತನಾಡಿಸಿದರೂ ಪ್ರಿಯಾಂಕಾ ಅವರನ್ನು ಮಾತನಾಡಿಸಲಿಲ್ಲ. ಪ್ರಿಯಾಂಕಾ ಅವರು ಅತ್ತ ಇತ್ತ ನೋಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ವಿಡಿಯೋಗೆ ಸಕತ್‌ ಕಮೆಂಟ್‌ ಬಂದಿದೆ. ನಟಿ ವೈಷ್ಣವಿ ಗೌಡ, ಅಗ್ನಿಸಾಕ್ಷಿ ಸೀರಿಯಲ್‌ನ ಸೇಡನ್ನು ತೀರಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಸನ್ನಿಧಿಯಾಗಿ ಕಾಣಿಸಿಕೊಂಡಿದ್ದರೆ, ಪ್ರಿಯಾಂಕಾ ಅವರು ಚಂದ್ರಿಕಾ ಆಗಿ ವಿಲನ್‌ ರೋಲ್‌ ಮಾಡಿದ್ದರು. ಚಂದ್ರಿಕಾ, ಸನ್ನಿಧಿಗೆ ಸಕತ್‌ ಕಾಟ ಕೊಡುತ್ತಿದ್ದಳು. ಆ ಧಾರಾವಾಹಿಯ ಸೇಡನ್ನು ಈಗ ನಟಿ ತೀರಿಸಿಕೊಂಡಿದ್ದಾರೆ, ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯ ಕಾಯುತ್ತಿದ್ದರು ಎಂದು ಹಲವರು ತಮಾಷೆಯ ಕಮೆಂಟ್‌ ಮಾಡಿದ್ದಾರೆ.

ಅಷ್ಟಕ್ಕೂ, ನಟಿ ವೈಷ್ಣವಿ ಗೌಡ ಅವರ ಈ ವೈರಲ್‌ ವಿಡಿಯೋದಲ್ಲಿ ಅವರು ಪ್ರಿಯಾಂಕಾ ಅವರನ್ನು ಮಾತನಾಡಿಸಲಿಲ್ಲ ನಿಜ. ಆದರೆ ಇನ್ನೂ ಹಲವು ವಿಡಿಯೋಗಳಲ್ಲಿ ಇವರಿಬ್ಬರೂ ಚೆನ್ನಾಗಿ ಮಾತನಾಡಿರುವುದು, ಪ್ರಿಯಾಂಕಾ ಅವರನ್ನು ನಟಿ ಆತ್ಮೀಯದಿಂದ ಬರಮಾಡಿಕೊಂಡಿರುವುದನ್ನು ನೋಡಬಹುದು. ಆದರೆ ತಮಾಷೆಗೆ ಈ ವಿಡಿಯೋದಲ್ಲಿ ಹೀಗೆ ಕ್ಯಾಪ್ಷನ್‌ ನೀಡಿರುವುದರಿಂದ ತಮಾಷೆಯಾಗಿಯೇ ನಟಿಯ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

View post on Instagram