ಬಿಗ್​ಬಾಸ್​ ಮನೆಯಲ್ಲಿ ಇದ್ದಾಗಲೇ ತಾನು ಗರ್ಭಿಣಿ ಎಂದು ಹೇಳುವ ಮೂಲಕ ಸದ್ದು ಮಾಡಿದ್ದ ನಟಿ ಅಂಕಿತಾ ಲೋಖಂಡೆ, ಈಗ ಇನ್ನೊಂದು ರಿಯಾಲಿಟಿ ಷೋನಲ್ಲಿ ಪತಿಗೂ ಮುನ್ನ ಈ ವಿಷಯವನ್ನು ಆ್ಯಂಕರ್​ಗೆ ಹೇಳಿದ್ದಾರೆ. ಆಗಿದ್ದೇನು ನೋಡಿ! 

ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಕಳೆದ ವರ್ಷ ಸಕತ್​ ಸುದ್ದಿ ಮಾಡಿತ್ತು. ಇದಕ್ಕೆ ಕಾರಣ, ಇದರ ಸ್ಪರ್ಧಿ ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದೇನೆ ಎಂದಿದ್ದಕ್ಕೆ. ಬಿಗ್​ಬಾಸ್​ಮನೆಯಲ್ಲಿ ಇರುವಾಗಲೇ ತಾನು ಗರ್ಭಿಣಿಯಾಗಿರುವುದಾಗಿ ಇವರು ಹೇಳಿದರು. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದರು. ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್​ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್​ ಆಗಿತ್ತು. ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿದ್ದರು. ತಾವು ಬಹುಶಃ ಗರ್ಭಿಣಿ ಇರಬಹುದು ಎಂದಿದ್ದ ಆಕೆ, ಹುಳಿ ತಿನ್ನಬೇಕೆಂದು ಅನಿಸುತ್ತಿದೆ, ತಮಗೆ ಪಿರಿಯಡ್ಸ್ ಮಿಸ್ ಆಗಿದೆ ಎಂದಿದ್ದರು. ಕೊನೆಗೆ ಅದು ಬಿಗ್​ಬಾಸ್​ನ ಗಿಮಿಕ್​ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೇಳಿಕೇಳಿ ಬಿಗ್​ಬಾಸ್​ ಅದು. ಟಿಆರ್​ಪಿ ಸ್ವಲ್ಪ ಕುಸಿಯುತ್ತಿದೆ ಎಂದಾಕ್ಷಣ ಪ್ರಚಾರಕ್ಕಾಗಿ ಯಾವ ಹಂತಕ್ಕೂ ಹೋಗಲು ರೆಡಿ, ಅದಕ್ಕಾಗಿಯೇ ಅಂಥ ಸ್ಪರ್ಧಿಗಳನ್ನೇ ಅಲ್ಲಿ ಆಯ್ಕೆ ಮಾಡಲಾಗುತ್ತದೆ.

ಇಂತಿಪ್ಪ ಅಂಕಿತಾ, ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಲಾಫ್ಟರ್​ ಕಿಚನ್​ ರಿಯಾಲಿಟಿ ಷೋನಲ್ಲಿ ಈ ವಿಷಯವನ್ನು ಆಕೆ ರಿವೀಲ್​ ಮಾಡಿದ್ದಾರೆ. ಕುತೂಹಲದ ವಿಷಯ ಏನೆಂದ್ರೆ, ತಮ್ಮ ಪತಿಗೂ ಮುನ್ನವೇ ಅವರು ಈ ವಿಷಯವನ್ನು ಈ ಷೋನ ಆ್ಯಂಕರ್​ಗೆ ತಿಳಿಸಿದ್ದಾರೆ! ಇದಾಗಲೇ ಅಂಕಿತಾ ಮತ್ತು ಪತಿ ವಿಕ್ಕಿ ಜೈನ್​ ಡಿವೋರ್ಸ್​ ಆಗುತ್ತಾರೆ ಎಂದು ಗುಲ್ಲೆಬ್ಬಿತ್ತು. ಕೊನೆಗೆ ಅದು ಕೂಡ ಪ್ರಚಾರದ ಗಿಮಿಕ್​ ಎಂದೇ ಹೇಳಲಾಗಿತ್ತು. ಇದೀಗ ಕಿಚನ್​ ಷೋನವರೂ ಬಿಗ್​ಬಾಸ್​ನ ಪ್ರೆಗ್ನೆನ್ಸಿ ವಿಷ್ಯದಿಂದ ಪ್ರೇರೇಪಿತರಾಗಿ ಟಿಆರ್​ಪಿಗೋಸ್ಕರ ಈಕೆ ಕೈಯಲ್ಲಿ ಹೀಗೆ ಹೇಳಿಸಿರಬಹುದು ಎಂದೇ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗರ್ಭಿಣಿ ಎನ್ನುವ ವಿಷಯವನ್ನು ಹೇಗೆ ಹಾಸ್ಯಕ್ಕಾಗಿ, ಟಿಆರ್​ಪಿಗಾಗಿ ಬಳಸಲಾಗುತ್ತಿದೆ ಎನ್ನುವುದು ಮಾತ್ರ ಅಸಹ್ಯಕರ ಎನ್ನುತ್ತಿದ್ದಾರೆ ನೆಟ್ಟಿಗರು.

ಈಕೆ ಮತ್ತು ಪತಿಯ ವಿಚಿತ್ರ ನಡವಳಿಕೆ, ಪ್ರಚಾರ ಪ್ರಿಯತೆ ಇಷ್ಟಕ್ಕೇ ನಿಂತಿಲ್ಲ. ಇಬ್ಬರೂ ಬಿಗ್​ಬಾಸ್​ನಲ್ಲಿ ಇದ್ದ ಸಂದರ್ಭದಲ್ಲಿ ಸದ್ದು ಮಾಡುತ್ತಲೇ ಇದ್ದವರು. ಒಂದು ಹಂತದಲ್ಲಿ ವಿಕ್ಕಿ ಅವರು ಪತ್ನಿಯ ಕುತ್ತಿಗೆ ಹಿಡಿದಿದ್ದರೆ, ಪತಿ ಅಂಕಿತಾ ತಮ್ಮ ಎರಡೂ ಚಪ್ಪಲಿಗಳನ್ನು ಪತಿಯತ್ತ ಬೀಸಿದ್ದರು. ಅಷ್ಟಕ್ಕೂ ಆಗಿದ್ದೇನೆಂದರೆ, ಬಿಗ್​ಬಾಸ್​ನ ಇತರ ಸ್ಪರ್ಧಿಗಳಾಗಿರುವ ಇಶಾ ಮಾಳವಿಯಾ, ಖಾಂಜಾದಿ, ಅನುರಾಗ್ ದೋವಲ್, ವಿಕ್ಕಿ ಜೈನ್ ಮತ್ತು ಮುನಾವರ್ ಫರುಕಿ ನಡುವೆ ಆಹಾರದ ಬಗ್ಗೆ ತೀವ್ರ ವಾಗ್ವಾದ ಮತ್ತು ಜಗಳ ನಡೆದಿತ್ತು. ವಿಕ್ಕಿ ಜೈನ್ ಅವರ ರೂಮ್‌ಮೇಟ್‌ಗಳು ಬೇಯಿಸಿದ ಆಹಾರವನ್ನು ಬೇಯಿಸಿದ ಆಹಾರವನ್ನು ಖಾಂಜಾದಿಯವರು ತಿನ್ನುವಂತೆ ವಿಕ್ಕಿ ಮನವೊಲಿಸಿದರು, ಇದರೊಂದಿಗೆ ಅಂಕಿತಾ ಲೋಖಂಡೆ ತಾಳ್ಮೆ ಕಳೆದುಕೊಂಡು ಪತಿ ವಿಕ್ಕಿ ಜೈನ್ ಮೇಲೆ ಹಲ್ಲೆ ನಡೆಸಿದ್ದರು.

ಇದೇ ವಿಷಯದಲ್ಲಿ ಇಶಾ ಮತ್ತು ಖಾಂಜಾದಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಆಹಾರವನ್ನು ಯಾರು ಯಾರು ತಿಂದರು ಎಂಬ ಬಗ್ಗೆ ಚರ್ಚೆ ನಡೆದಾಗ ಸ್ಪರ್ಧಿ ಇಶಾ ಮಾಳವಿಯಾ ಮತ್ತು ವಿಕ್ಕಿ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಅಂಕಿತಾ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅಂಕಿತಾ ಪತಿ ವಿಕ್ಕಿ ಜೈನ್ ಅಂಕಿತಾಳ ಕತ್ತು ಹಿಡಿದು ಎಳೆದಿದ್ದರು, ಆಗ ಅಂಕಿತಾ ಅವರನ್ನು ತಳ್ಳಿದ್ದರು. ಆಗ ವಿಕ್ಕಿ ಆಕೆಯನ್ನು ಹಿಂದಿನಿಂದ ಹಿಡಿದಿದ್ದರು. ಈ ಸಂದರ್ಭದಲ್ಲಿ ಅಂಕಿತಾ ವಿಕ್ಕಿಯನ್ನು ಹೊಡೆಯಲು ಪ್ರಾರಂಭಿಸಿದಾಗ ಅವರು ಓಡಿ ಹೋದರು. ಸುಮ್ಮನಿರದ ಅಂಕಿತಾ, ತಮ್ಮ ಎರಡೂ ಚಪ್ಪಲಿಗಳನ್ನು ತೆಗೆದು ವಿಕ್ಕಿಗೆ ಹೊಡೆದರು. ಇದು ಕೂಡ ಸ್ಕ್ರಿಪ್ಟೆಡ್​ ಎನ್ನುವುದು ಜಾಣ ವೀಕ್ಷಕರಿಗೆ ತಿಳಿಯದೇ ಇರುವ ವಿಷಯವೇನೂ ಆಗಿರಲಿಲ್ಲ. ಈಗಲೂ ಹಾಗೆಯೇ ಇರಬಹುದು ಎನ್ನುವುದು ನೆಟ್ಟಿಗರ ಅಭಿಮತ. ಮೂರೂ ಬಿಟ್ಟವರು…. ಎಂದು ಅದಕ್ಕೇ ಹೇಳುವುದು ಎಂದೂ ಕೆಲವರು ಕಮೆಂಟ್​ ಹಾಕಿದ್ದಾರೆ. 

View post on Instagram