ಹಲವು ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿರುವ ಭಾಗ್ಯಲಕ್ಷ್ಮಿ ಸೀರಿಯಲ್ 800 ಕಂತುಗಳನ್ನು ಪೂರೈಸಿರುವ ಹೊತ್ತಿನಲ್ಲಿಯೇ ಭಾಗ್ಯಳ ಲೈಫ್ನಲ್ಲಿ ಹೊಸಬನ ಪ್ರವೇಶವಾಗಿದೆ. ಯಾರೀತ?
ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ಮಾತುಕತೆ, ಗೊಂದಲ ನಡೀತಿದೆ. ಪೂಜಾಳನ್ನು ನೋಡಲು ಬಂದ ಹುಡುಗನ ಕಡೆಯವರಿಗೆ ಇಲ್ಲಸಲ್ಲದ್ದನ್ನು ಹೇಳಿ ತಾಂಡವ್ ಮದುವೆ ತಪ್ಪಿಸಿದ್ದಾನೆ. ಇದೀಗ ಪೂಜಾಳನ್ನು ಲವ್ ಮಾಡ್ತಿದ್ದ ಕಿಶನ್ ಜೊತೆ ಮದುವೆಯ ಮಾತುಕತೆ ನಡೆಯುತ್ತಿದೆ. ಅದನ್ನೂ ತಪ್ಪಿಸಲು ತಾಂಡವ್ ನೋಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಕಿಷನ್ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿದ್ದ. ಆದರೆ ಅದು ವರ್ಕ್ಔಟ್ ಆಗದೇ ಮದುವೆಯವರೆಗೂ ಬಂದಿದೆ. ಆದರೆ ಇಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಭಾಗ್ಯಳಿಗೆ ಸದಾ ಟಾರ್ಚರ್ ಕೊಡ್ತಿರೋ ಕನ್ನಿಕಾ ಅಣ್ಣನೇ ಕಿಶನ್. ಇದೀಗ ಅವಳು ಮದುವೆಗೆ ಅಡ್ಡಗಾಲು ಹಾಕಿ ಭಾಗ್ಯಳಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾಳೆ. ಇದನ್ನು ಕೇಳಿಸಿಕೊಂಡ ಪೂಜಾ ಉರಿದು ಹೋಗಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರುವುದಿಲ್ಲ, ಈ ಮದುವೆ ಆಗುವುದಿಲ್ಲ ಎಂದು ಸವಾಲು ಹಾಕಿ ಬಂದಿದ್ದಾಳೆ. ಆದರೆ ಈಗ ಆಗಿರೋದೇ ಬೇರೆ. ಪೂಜಾಳ ಮದುವೆಯನ್ನು ಆಕೆ ಇಷ್ಟಪಟ್ಟಿರುವ ಕಿಶನ್ ಜೊತೆ ಮಾಡಿಸಲು ಆತನ ಅಪ್ಪ ಒಪ್ಪಿಗೆ ನೀಡಿದ್ದಾನೆ.
ಇದೇ ಸಂದರ್ಭದಲ್ಲಿ ಸರಿ, ನಾನೇನೂ ಹೇಳುವುದಿಲ್ಲ. ಈಗ ಏನು ಮಾಡೋದಿದ್ರೂ ಅವನೇ ಬಂದು ಮಾಡ್ತಾನೆ ಎಂದು ಕನ್ನಿಕಾ ಹೇಳುವಷ್ಟರಲ್ಲಿ ಹೊಸ ಎಂಟ್ರಿ ಆಗಿದೆ. ನಟ ಹರೀಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾಗ್ಯಳಿಗೆ ಹೊಸದೊಂದು ಸವಾಲು ಎದುರಾಗಿದೆ ಎನ್ನುವ ಮೂಲಕ ಈ ಪಾತ್ರದ ಎಂಟ್ರಿ ಆಗಿದೆ. ಆದರೆ ತಾಂಡವ್ ಶ್ರೇಷ್ಠಾಳನ್ನು ಮದುವೆಯಾದ ಮೇಲೆ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವಂತೆ ನೆಟ್ಟಿಗರ ಒತ್ತಾಯ ಹೆಚ್ಚಾಗಿ ಕೇಳಿಬರುತ್ತಿದೆ. ಇದರ ನಡುವೆಯೇ ಹೊಸ ಪಾತ್ರದ ಎಂಟ್ರಿ ಆಗಿರುವ ಕಾರಣ, ಈತ ಭಾಗ್ಯಳ ಲೈಫ್ಗೂ ಎಂಟ್ರಿ ಕೊಡುತ್ತಾನೆ. ಭಾಗ್ಯಳಿಗೆ ಜೋಡಿ ಆಗುತ್ತಾನೆ, ಹಾಗೆಯೇ ಆಗಬೇಕು. ಭಾಗ್ಯಳಿಗೆ ಇನ್ನೊಂದು ಮದುವೆಯಾಗಬೇಕು ಎನ್ನುವುದು ನೆಟ್ಟಿಗರ ಆಶಯ. ನಿಜ ಜೀವನದಲ್ಲಿ ಇದೇ ಸ್ಥಿತಿ ಒಬ್ಬ ಹೆಣ್ಣಿಗೆ ಬಂದರೆ ಬಹುತೇಕ ಜನರು ಭಾಗ್ಯಳ ಅಮ್ಮ ಸುನಂದಾಳ ಅವತಾರವೇ ತಾಳುವುದು ಇದೆ. ಆದರೆ ಸೀರಿಯಲ್ನಲ್ಲಿಯಾದರೂ ಈ ರೀತಿಯ ಸ್ವತಂತ್ರ ಮನೋಭಾವ ಹೊಂದಿರುವುದು ತಿಳಿಯುತ್ತದೆ. ಬದಲಾಗುತ್ತಿರುವ ಸಮಾಜದ ಮನಸ್ಥಿತಿಗೂ ಇದೊಂದು ರೀತಿಯಲ್ಲಿ ಉದಾಹರಣೆ ಎನ್ನಬಹುದು.
ಇದರ ನಡುವೆಯೇ, ಇಂತಿಪ್ಪ ಭಾಗ್ಯಲಕ್ಷ್ಮಿ ಇದೀಗ 800 ಸಂಚಿಕೆಗಳನ್ನು ಮುಗಿಸಿದೆ. 2022 ಅಕ್ಟೋಬರ್ 10ರಿಂದ ಈ ಸೀರಿಯಲ್ ಆರಂಭವಾಗಿತ್ತು. ಎರಡೂವರೆ ವರ್ಷ ಮುಗಿದಿದ್ದು, ಟಿಆರ್ಪಿಯಲ್ಲಿಯೂ ಮುಂದಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಇದೀಗ ಕುತೂಹಲದ ಘಟ್ಟಕ್ಕೆ ಬಂದು ಮುಟ್ಟಿದೆ. ಭಾಗ್ಯಳನ್ನು ಹೇಗಾದರೂ ಮಾಡಿ ತುಳಿಯಬೇಕು, ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಬೇಕು, ನಾನಿಲ್ಲದೇ ಭಾಗ್ಯಳಿಗೆ ಸಂಸಾರ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಅಹಂನಲ್ಲಿದ್ದ ತಾಂಡವ್ಗೆ ಭಾರಿ ಮುಖಭಂಗ ಆಗಿಯೇ ಬಿಟ್ಟಿದೆ. ತನ್ನ ಲವರ್ ಶ್ರೇಷ್ಠಾಳನ್ನು ಭಾಗ್ಯ ಬಿಟ್ಟುಕೊಟ್ಟರೂ ತಾಂಡವ್ಗೆ ಸಮಾಧಾನ ಇಲ್ಲ. ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಅವನು ಹೇಳಿದ್ದ. ಆದರೆ ಈಗ ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಬಲ್ಲುಳು ಎನ್ನೋದನ್ನು ತೋರಿಸಿಕೊಟ್ಟಿರೋ ಭಾಗ್ಯ, ತಾಂಡವ್ ಕಚೇರಿಯಲ್ಲಿಯೇ ಕ್ಯಾಂಟೀನ್ ಓನರ್ ಆಗಿದ್ದಾಳೆ.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇದನ್ನೇ ತಾಂಡವ್ ಮತ್ತು ಶ್ರೇಷ್ಠಾಳಿಗೆ ಅರಗಿಸಿಕೊಳ್ಳಲು ಆಗದ ಸ್ಥಿತಿ. ಇದರ ನಡುವೆಯೇ ಇದೀಗ ಕಚೇರಿಯಲ್ಲಿಯೇ ಭಾಗ್ಯಳ ಮೇಲೆ ದರ್ಪ ತೋರಿದ್ದಾನೆ ತಾಂಡವ್. ಈತನಿಗೆ ಶ್ರೇಷ್ಠಾ ಜೊತೆಯಾಗಿದ್ದಾಳೆ. ಇದನ್ನೆಲ್ಲಾ ಕಚೇರಿಯ ಮ್ಯಾನೇಜರ್ ನೋಡಿದ್ದಾರೆ. ಅವರಿಗೆ ಪರಿಸ್ಥಿತಿ ಅರ್ಥವಾಗಿದೆ. ತಾಂಡವ್ ಮತ್ತು ಶ್ರೇಷ್ಠಾ ಜೊತೆಗೂಡಿ ಟಾರ್ಚರ್ ಕೊಡುತ್ತಿರುವುದು ತಿಳಿದಿದೆ. ಇದೇ ಕಾರಣಕ್ಕೆ ಇಬ್ಬರನ್ನು ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ. ಇಬ್ಬರ ಕೈಗೆ ಟರ್ಮಿನೇಷನ್ ಲೆಟರ್ ಕೊಟ್ಟಿದ್ದಾರೆ. ಇದನ್ನು ನೋಡಿ ತಾಂಡವ್ ಮತ್ತು ಶ್ರೇಷ್ಠಾಳ ನೆಲವೇ ಕುಸಿದ ಅನುಭವವಾಗಿದೆ. ಆದರೆ ಭಾಗ್ಯಳ ಭಾಗ್ಯದಿಂದ ಇಬ್ಬರಿಗೂ ಕೆಲಸ ವಾಪಸ್ ಸಿಕ್ಕರೂ ಹೇಗಾದರೂ ಮಾಡಿ ಆಕೆಯ ಸಂಸಾರ ನಾಶ ಮಾಡಬೇಕು ಎಂದು ಗಂಡ ಪಣತೊಟ್ಟಿದ್ದಾನೆ. ಇದೀಗ ಹೊಸ ಎಂಟ್ರಿಯಾಗಿರುವ ಕಾರಣ, ಭಾಗ್ಯಳ ಲೈಫೂ ಚೇಂಜ್ ಆಗುವ ನಿರೀಕ್ಷೆ ಇದೆ.


