'ಲೈಫ್ ಈಸ್ ಕ್ಯಾಸಿನೋ' ಹಾಡು ದೀಪಾವಳಿ ಹಬ್ಬಕ್ಕೆ ಲಾಂಚ್ ಆಗಿ ಸಿಕ್ಕಾಪಟ್ಟೆ ಹಲ್‌ಚಲ್ ಸೃಷ್ಟಿಸಿದೆ. ಜೀವನವನ್ನು ಒಂದು ಜೂಜಿನ ಆಟಕ್ಕೆ ಹೋಲಿಸಿ, ಅದರಲ್ಲಿ 'ಹಣವೇ ಎಲ್ಲಾ, ದುಡ್ಡಿನ ಮುಂದೆ ಎಲ್ಲವೂ ಶೂನ್ಯ' ಎಂದಿದೆ ಈ ಸಾಂಗ್, ಚಂದನ್ ಶೆಟ್ಟಿ-ಕ್ರಿಸ್ ಗೇಲ್ ಜೋಡಿಯ ಈ ಹಾಡು ಮಜವಾಗಿದೆ ನೋಡಿ..!

ದೀಪಾವಳಿಗೆ ಚಂದನ್ ಶೆಟ್ಟಿ-ಕ್ರಿಸ್ ಗೇಲ್ ಜೋಡಿ ಧಮಾಕಾ!

ಕನ್ನಡದ ರಾಪರ್, ಸಿಂಗರ್, ಮ್ಯೂಸಿಕ್ ಡೈರೆಕ್ಟರ್ ಹಾಗೂ ನಟ ಚಂದನ್ ಶೆಟ್ಟಿಯವರು (Chandan Shetty) ಹೊಸ ಮ್ಯೂಸಿಕ್ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ. ಈ ಬಾರಿ ಚಂದನ್ ಶೆಟ್ಟಿಯವರ ವಿಡಿಯೋ ಸಾಂಗ್‌ನಲ್ಲಿ ಹೊಸತನವೊಂದು ಮೂಡಿಬಂದಿದೆ. ಅದು ಕ್ರಿಕೆಟರ್ ಕ್ರಿಸ್ ಗೇಲ್ ಅವರ ಜೊತೆಗೂಡಿ ಚಂದನ್ ಶೆಟ್ಟಿ ಸಾಂಗ್ ಮಾಡಿರೊದು! ಹೌದು, ಚಂದನ್ ಶೆಟ್ಟಿ ಹಾಗೂ ಕ್ರಿಸ್ ಗೇಲ್ ಇಬ್ಬರೂ 'ಲೈಫ್ ಈಸ್ ಕ್ಯಾಸಿನೋ' ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈಗ ಹಲ್‌ಚಲ್ ಎಬ್ಬಿಸಿದ್ದಾರೆ.

ಲೈಫ್ ಈಸ್ ಕ್ಯಾಸಿನೋ (Life is Casino) ಹಾಡಲ್ಲಿ ದುಡ್ಡಿನ ಮಹತ್ಯವನ್ನು ಹೇಳಲಾಗಿದೆ. ದುಡ್ಡೇ ದೊಡ್ಡಪ್ಪ ಎಂಬ ಗಾದೆಯಂತೆ ಇಲ್ಲಿ, ದುಡ್ಡೇ ದೇವ್ರು ಗುರೂ ಎನ್ನಲಾಗಿದೆ. ದುಡ್ಡ ಇದ್ದರೇನೇ ಈ ಜಗತ್ತಿನಲ್ಲಿ ಮರ್ಯಾದೆ, ಗೌರವ, ಹಾರ ಪೇಟಾ ಎಲ್ಲಾ ಸಿಗೋದು ಅಂತ ಲಿರಿಕ್ಸ್ ಬರೆದಿದ್ದಾರೆ, ಆ ಥೀಮ್ ನೋಡುಗರ ತಲೆಯೊಳಗೆ ತುಂಬಿಹೋಗುವಂತೆ 'ದುಡ್ಡು ದುಡ್ಡು ಬೇಕು ದುಡ್ಡು ಅಂತ ಹಾಡುತ್ತ ಕುಣಿಯಲಾಗಿದೆ. ಇಡೀ ಸಾಂಗ್ ಕೇಳಿದ್ಮೇಲೆ ನಿಮ್ಗೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ನೆನಪಾಗದಿದ್ದರೆ ಕೇಳಿ.. ಅದೇ ಈ ಹಾಡಿನ ಉದ್ದೇಶ ತಾನೆ?

ಈ ಮೊದಲು, ಒಂದು ಟೀಸರ್ ಬಿಟ್ಟು 'ದೀಪಾವಳಿ ದಿನ ಬ್ಲಾಸ್ಟ್ ಆಗಲಿದೆ' ಎಂದು ಘೊಷಿಸಿ ತುಂಬಾ ನಿರೀಕ್ಷೆ ಹುಟ್ಟುಹಾಕಿದ್ದರು ಕನ್ನಡ ರಾಪ್ ಲೋಕದ ಕಿಂಗ್ ಚಂದನ್ ಶೆಟ್ಟಿ ಹಾಗೂ ಕ್ರಿಕೆಟ್ ಲೋಕದ ಬಾಸ್ ಕ್ರಿಸ್ ಗೇಲ್. ಇದೀಗ ಇಂದು ದೀಪಾವಳಿ ನಿಮಿತ್ತ ಲೈಫ್ ಈಸ್ ಕ್ಯಾಸಿನೋ ಸಾಂಗ್ ಲಾಂಚ್ ಆಗಿದೆ. ಈ ಮೊದಲು, ಕಳೆದ ವಾರ, ಕ್ರಿಸ್ ಗೇಲ್ ಮತ್ತು ಚಂದನ್ ಶೆಟ್ಟಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಾ ಚಿತ್ರದ ಕನ್ನಡ ಡೈಲಾಗ್‌ಗಳನ್ನು ರೆಕಾರ್ಡ್ ಮಾಡುತ್ತಿದ್ದ ವಿಡಿಯೋ ಅಥವಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಇಬ್ಬರು ತಾರೆಯರು ಪರಸ್ಪರ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ, ತುಂಬಾ ಖುಷಿಯಿಂದ ಕನ್ನಡ ಸಾಲುಗಳನ್ನು ಮಾತನಾಡುತ್ತಾ ರೆಕಾರ್ಡಿಂಗ್‌ನಲ್ಲಿ ಭಾಗಿಯಾಗಿದ್ದ ವಿಸ್ಯವಲ್ಸ್ ಗಮನ ಸೆಳೆದಿತ್ತು.

"ನಾವು ವೈಬ್ ಮಾಡುತ್ತಿದ್ದೆವು, ನಗುತ್ತಿದ್ದೆವು, ಮತ್ತು 'ಲೈಫ್ ಈಸ್ ಕ್ಯಾಸಿನೋ' ಹಾಡಿಗಾಗಿ ಕನ್ನಡ ಸಾಲುಗಳನ್ನು ಕಾರಿನ ಹಿಂದಿನ ಸೀಟಿನಲ್ಲಿ ರೆಕಾರ್ಡ್ ಮಾಡುತ್ತಿದ್ದೆವು - ಇದು ನಿಜಕ್ಕೂ ಶುದ್ಧ ಮಜಾ ಮತ್ತು ಶಕ್ತಿಯಿಂದ ಕೂಡಿದ ಪ್ರಯಾಣ!" ಎಂದು ಅವರಿಬ್ಬರೂ ಹೇಳಿರುವ ವಿಡಿಯೋ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿತ್ತು. ಇದೀಗ 'ಲೈಫ್ ಈಸ್ ಕ್ಯಾಸಿನೋ' ಸಾಂಗ್ ಬಿಡುಗಡೆ ಆಗಿದೆ. ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಈ ಸಾಂಗ್ ಬಿರುಗಾಳಿ ಎಬ್ಬಿಸಿದೆ. ಮುಂದೆ ಯಾವೆಲ್ಲಾ ರೆಕಾರ್ಡ್ ಧೂಳಿಪಟ ಮಾಡಲಿದೆ ಎಂದು ಕಾದು ನೋಡಬೇಕಿದೆ!

ಯೂನಿವರ್ಸ್‌ ಬಾಸ್' ಇಮೇಜ್

ಕ್ರಿಸ್ ಗೇಲ್ ಅವರು ಈ ಹಿಂದೆ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಕನ್ನಡ ಹಾಡೊಂದರಲ್ಲಿ ಭಾಗಿಯಾಗಿರುವುದು ಇದೇ ಮೊದಲು. ಅವರ 'ಯೂನಿವರ್ಸ್‌ ಬಾಸ್' ಇಮೇಜ್ ಮತ್ತು ರಾಪರ್ ಅಬ್ಬರವನ್ನು ಕನ್ನಡ ಹಾಡಿನಲ್ಲಿ ನೋಡುವುದು ರೋಮಾಂಚನಕಾರಿಯಾಗಿರಲಿದೆ. ಮತ್ತೊಂದೆಡೆ, ಚಂದನ್ ಶೆಟ್ಟಿ ಅವರು ತಮ್ಮ ರಾಪ್ ಸಂಗೀತ ಮತ್ತು ವಿಭಿನ್ನ ಶೈಲಿಯ ಹಾಡುಗಳ ಮೂಲಕ ಕನ್ನಡ ಯುವಜನತೆಯ ಮನ ಗೆದ್ದಿದ್ದಾರೆ. ಅವರ ಹಾಡುಗಳು ಸದಾ ಪಾರ್ಟಿ ಮೂಡ್ ಸೃಷ್ಟಿಸುತ್ತವೆ. ಹೀಗಾಗಿ, ಇವರಿಬ್ಬರ ಕಾಂಬಿನೇಶನ್ 'ಲೈಫ್ ಈಸ್ ಕ್ಯಾಸಿನೋ' ಹಾಡಿಗೆ ಒಂದು ವಿಶೇಷ ಮೆರುಗು ಬಂದಿದೆ.

ದೀಪಾವಳಿ ಹಬ್ಬಕ್ಕೆ ಈ ಹಾಡು ಬಿಡುಗಡೆಯಾಗಿದ್ದು, ಇದೀಗ ಸಿಕ್ಕಾಪಟ್ಟೆ ಹಲ್‌ಚಲ್ ಸೃಷ್ಟಿಸಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಹಾಡು ಇದೀಗ ಲಾಂಚ್ ಆಗಿದೆ. 'ಲೈಫ್ ಈಸ್ ಕ್ಯಾಸಿನೋ' ಎಂಬ ಟೈಟಲ್ ಕೂಡ ಸಾಕಷ್ಟು ಆಕರ್ಷಕವಾಗಿದ್ದು, ಜೀವನವನ್ನು ಒಂದು ಜೂಜಿನ ಆಟಕ್ಕೆ ಹೋಲಿಸಿ, ಅದರಲ್ಲಿ 'ಹಣವೇ ಎಲ್ಲಾ, ದುಡ್ಡಿನ ಮುಂದೆ ಎಲ್ಲವೂ ಶೂನ್ಯ' ಎನ್ನುವ ಥೀಮ್ ಈ ಸಾಂಗ್ ಒಳಗೊಂಡಿದೆ.

ಕ್ರಿಸ್‌ ಗೇಲ್ ಮತ್ತು ಚಂದನ್ ಶೆಟ್ಟಿ ಈ ಅನಿರೀಕ್ಷಿತ ಸಹಯೋಗ!

ಒಟ್ಟಾರೆ, ಕ್ರಿಸ್ ಗೇಲ್ ಮತ್ತು ಚಂದನ್ ಶೆಟ್ಟಿ ಅವರ ಈ ಅನಿರೀಕ್ಷಿತ ಸಹಯೋಗ ಕನ್ನಡದ ಪಾಪ್‌ ಸಂಗೀತಕ್ಕೆ ಹಾಗೂ ಹಾಡಿಗೆ ಹೊಸ ಆಯಾಮವನ್ನು ನೀಡಿದೆ. ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಕನ್ನಡ ಹಾಡುಗಳತ್ತ, ಕನ್ನಡಿಗರ ಕಡೆಗೆ ಒಲವು ತೋರುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ದೀಪಾವಳಿ ಹಬ್ಬದಂದು ಈ ಸಾಂಗ್ ಮೂಲಕ 'ಸ್ಪಿರಿಟ್ ಧಮಾಕಾ' ಹೊರಹೊಮ್ಮಿದೆ. ಈ ದೀಪಾವಳಿಗೆ 'ಲೈಫ್ ಈಸ್ ಕ್ಯಾಸಿನೋ' ಭಾರಿ ಸಂಭ್ರಮವನ್ನು ತಂದಿದ್ದು, 'ಲೈಫ್ ಈಸ್ ಕ್ಯಾಸಿನೋ' ಅಂತ 'ಪಾರ್ಟಿ ಪ್ರಿಯರು' ಹಾಡಿ ಕುಣಿಯಬಹುದು.

LIFE IS CASINO | CHANDAN SHETTY Ft. CHRIS GAYLE (UNIVERSE BOSS)